ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬೇಡ್ಕರ್ ಸ್ಮರಣೆ; ಪ್ರತಿಮೆಗೆ ಮಾಲಾರ್ಪಣೆ

ವಿವಿಧೆಡೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಪರಿನಿರ್ವಾಣ ದಿನ ಆಚರಣೆ
Last Updated 6 ಡಿಸೆಂಬರ್ 2021, 14:41 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ 65ನೇ ಪರಿನಿರ್ವಾಣ ದಿನವನ್ನು ನಗರದ ವಿವಿಧೆಡೆ ಸೋಮವಾರ ಆಚರಿಸಲಾಯಿತು. ಸರ್ಕಾರಿ ಕಚೇರಿಗಳು, ರಾಜಕೀಯ ಪಕ್ಷಗಳ ಕಚೇರಿ, ಸಂಘ–ಸಂಸ್ಥೆಗಳಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಜನಪ್ರತಿನಿಧಿಗಳು ಹಾಗೂ ಗಣ್ಯರು ಬಾಬಾ ಸಾಹೇಬರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಅವರ ಕೊಡುಗೆಗಳನ್ನು ಸ್ಮರಿಸಿದರು.

ಸಮಾನತೆಯ ಹರಿಕಾರ: ‘ಸರ್ವಶ್ರೇಷ್ಠ ಸಂವಿಧಾನವನ್ನು ದೇಶಕ್ಕೆ ಕೊಟ್ಟ ಅಂಬೇಡ್ಕರ್ ಅವರು, ಸಮಾನತೆಯ ಹರಿಕಾರ. ಶತಮಾನಗಳಿಂದ ಶೋಷಣೆಗೆ ಒಳಗಾಗಿರುವ ಸಮುದಾಯಗಳಿಗೆ ಸಮಾನತೆ ಒ‌ದಗಿಸಲು ತಮ್ಮ ಜೀವನವನ್ನೇ ಸವೆಸಿದರು. ಅವರಿಂದಾಗಿ ಇಂದು ಎಲ್ಲರೂ ಸಮಾನರಾಗಿ ಬದುಕಲು ಸಾಧ್ಯವಾಗಿದೆ’ ಎಂದು ಎಐಎಂಐಎಂ ಪಕ್ಷದ ಜಿಲ್ಲಾ ಜಂಟಿ ಕಾರ್ಯದರ್ಶಿ ವಿಜಯ ಗುಂಟ್ರಾಳ ಹೇಳಿದರು.

ಪಕ್ಷದ ಕಚೇರಿಯಲ್ಲಿ ನಡೆದ ಅಂಬೇಡ್ಕರ್ ಪರಿನಿರ್ವಾಣ ದಿನಾಚರಣೆಯಲ್ಲಿ ಮಾತನಾಡಿದ ಅವರು, ‘ಮನುವಾದಿಗಳು ಸಂವಿಧಾನವನ್ನು ಬದಲಿಸಲು ಹುನ್ನಾರ ನಡೆಸುತ್ತಿರುವುದು ದುರದೃಷ್ಟಕರ. ಈ ಕುತಂತ್ರವನ್ನು ದೇಶದ ಮೂಲ ನಿವಾಸಿಗಳು ಅರಿತುಕೊಂಡು, ಸಂವಿಧಾನ ರಕ್ಷಿಸಲು ಒಗ್ಗೂಡಬೇಕು’ ಎಂದರು.

ಪಕ್ಷದ ಇಮ್ತಿಯಾಜ ಬಿಳಿಪಸಾರ, ರಘು ಬಳ್ಳಾರಿ, ರೋಹಿತ ಕಣಮಕ್ಕಲ, ಅಬ್ದುಲ ರಹೀಮಾನ ಔಂಟಿ, ಆಶಮ ಮಕಾನದಾರ, ರಸ್ತುಂಸಾಬ ಶೇರಿದಿ, ಅಲಿಅಹ್ಮದ ಕಲಬುರ್ಗಿ, ರಮೇಶ ಬೊಮ್ಮನಾಳ, ಸಲ್ಮಾ ಮುಲ್ಲಾ, ಆಶೀಫ್ ಬೈಲಗೊಂಗಲ, ಮಾಜ್ ಮೂಮಿನ, ಇಜಾಜ್ ಮಿರ್ಜಿ, ಗಂಗಮ್ಮ ಸಿದ್ರಾಂಪೂರ, ಗಾಳೆಪ್ಪ ದ್ವಾಸಲಕೇರಿ, ಮರೆಪ್ಪ ಬುಕನಟ್ಟಿ, ಅಮೀದ ಬೇಪಾರಿ ಇದ್ದರು.

ಕಾಂಗ್ರೆಸ್: ನಗರದ ಸ್ಟೇಷನ್ ರಸ್ತೆಯ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ವಿಧಾನ ಪರಿಷತ್ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ್ ಹಾಗೂ ಶಾಸಕ ಪ್ರಸಾದ ಅಬ್ಬಯ್ಯ ಮಾಲಾರ್ಪಣೆ ಮಾಡಿದರು.

ಪಾಲಿಕೆ ಸದಸ್ಯ ದೊರೆರಾಜ್ ಮಣಿಕುಂಟ್ಲ, ಬ್ಲಾಕ್ ಅಧ್ಯಕ್ಷರಾದ ಮೆಹಮೂದ್ ಕೋಳೂರ, ಪ್ರಸನ್ನ ಮಿರಜಕರ್, ಮಾಜಿ ಸದಸ್ಯ ವಿಜನಗೌಡ ಪಾಟೀಲ, ಮುಖಂಡರಾದ ಪ್ರಭು ಪ್ರಭಾಕರ, ಸದಾನಂದ ಡಂಗನವರ, ಗುರುನಾಥ ಉಳ್ಳಿಕಾಶಿ, ಪ್ರಕಾಶ ಬುರಬುರೆ, ಶ್ರೀನಿವಾಸ ಬೆಳದಡಿ, ಗಂಗಾಧರ ದೊಡವಾಡ, ಶರೀಫ ಅದೋನಿ, ಸೈಯದ್ ಸಲೀಂ ಮುಲ್ಲಾ, ಬಾಬಾಜಾನ್ ಕಾರಡಗಿ, ಮುಸ್ತಾಕ್ ಮುದಗಲ್, ವಾದಿರಾಜ ಕುಲಕರ್ಣಿ, ಅಬ್ಬು ಬಿಜಾಪುರ ಇದ್ದರು.

ಬಿಜೆಪಿ: ದೇಶಪಾಂಡೆ ನಗರದ ಬಿಜೆಪಿ ಕಚೇರಿಯಲ್ಲಿ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಎಸ್‌ಸಿ ಮೋರ್ಚಾ ವತಿಯಿಂದ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೋರ್ಚಾ ಅಧ್ಯಕ್ಷ ಸುಭಾಶ ಅಂಕಲಕೋಟಿ ವಹಿಸಿದ್ದರು.

ಮಹಾನಗರ ಎಸ್‌ಸಿ ಮೋರ್ಚಾ ಅಧ್ಯಕ್ಷ ಬಸವರಾಜ ಅಮ್ಮಿನಬಾವಿ, ಮಹಾನಗರ ಪ್ರಧಾನ ಕಾರ್ಯದರ್ಶಿ ದತ್ತಮೂರ್ತಿ ಕುಲಕರ್ಣಿ, ಜಿಲ್ಲಾ ವಕ್ತಾರ ರವಿ ನಾಯಕ, ಪೂರ್ವ ಕ್ಷೇತ್ರದ ಮಂಡಲ ಅಧ್ಯ್ಯಕ್ಷ ಪ್ರಭು ನವಲಗುಂದಮಠ, ಜಿಲ್ಲಾ ಎಸ್‌ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಪರಶುರಾಮ ಪೂಜಾರ, ಕೃಷ್ಣಾ ಹಂದಿಗೋಳ, ರವಿ ಬಂಕಾಪೂರ, ರಾಜು ಸಂಕನಾಳ, ಮುರಗೇಶ ಹೊರಡಿ ಇದ್ದರು.

ವಾಯವ್ಯ ಸಾರಿಗೆ ಸಂಸ್ಥೆ: ಗೋಕುಲ ರಸ್ತೆಯಲ್ಲಿರುವ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಗ್ರಾಮಾಂತರ ವಿಭಾಗದ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಅವರು ಅಂಬೇಡ್ಕರ್ ಚಿತ್ರಕ್ಕೆ ಗೌರವ ಸಲ್ಲಿಸಿದರು. ಅಧಿಕಾರಿಗಳಾದ ಎಸ್.ಎಸ್. ಮುಜುಂದಾರ, ಪ್ರವೀಣ ಈಡೂರ, ಸದಾನಂದ ಒಡೆಯರ, ಸುನಿಲ್ ವಾಡೇಕರ, ನಾಗಮಣಿ, ರೋಹಿಣಿ, ದೇವಕ್ಕ ನಾಯ್ಕ, ಕನ್ನಡ ಕ್ರಿಯಾ ಸಮಿತಿಯ ಗಂಗಾಧರ ಕಮಲದಿನ್ನಿ ಇದ್ದರು.

ಕಿಮ್ಸ್: ಕಿಮ್ಸ್ ಎಸ್‌ಟಿ ಮತ್ತು ಎಸ್‌ಟಿ ನೌಕರರ ಸಂಘದಿಂದ ನಡೆದ ಕಾರ್ಯಕ್ರಮದಲ್ಲಿ, ಕಿಮ್ಸ್ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ, ಪ್ರಾಂಶುಪಾಲ ಡಾ. ಈಶ್ವರ್ ಹೊಸಮನಿ, ಮುಖ್ಯ ಆಡಳಿತಧಿಕಾರಿ ರಾಜೇಶ್ವರಿ ಜೈನಾಪುರ, ವೈದ್ಯಕೀಯ ಅಧಿಕ್ಷಕ ಡಾ. ಅರುಣ್ ಕುಮಾರ, ಡಾ. ದ್ಯಾಬೇರಿ, ಡಾ. ಮುಲ್ಕಿ ಪಾಟೀಲ ಹಾಗೂ ಡಾ. ಜಾನಕಿ ತೊರವಿ ಮಾಲಾರ್ಪಣೆ ಮಾಡಿದರು.

ಸಂಘದ ಸುರೇಶ ತಿರುಪಲು, ಕಾಶೀನಾಥ್ ಹವಳಪ್ಪ, ಮಂಜುನಾಥ ನಡುವಿನಮನಿ, ಎಚ್.ಬಿ. ರಾಮದುರ್ಗ, ಅಶೋಕ ವಾಲ್ಮೀಕಿ, ರಾಮಾಂಜನೇಯ ಪೋತರಾಜ, ನಾರಾಯಣ ಹುಬ್ಬಳ್ಳಿಕರ, ಐ.ಎಚ್. ಪಾಟೀಲ, ಡಿ.ಎಫ್. ಚಚಿಗರೇರ, ಎಸ್.ಬಿ. ಐನಾಪುರ, ಆನಂದ ಜೋಶಿ, ಎಸ್.ಎಂ. ಪುಣೆಕರ, ಶ್ರೀಕಾಂತ ತಳಕೇರಿ, ಪರಶುರಾಮ ಮಲ್ಲ್ಯಾಳ, ಶಿವಾನಂದ ಬರದೋರ, ದೇವೇಂದ್ರ ಘೋಡಕೆ, ಹಾಲಪ್ಪ ತಾಮ್ರಗುಂಡಿ ಇದ್ದರು.

‘ಹಿಂದುಳಿದವರ ಉನ್ನತಿಗೆ ಶ್ರಮಿಸಿದರು’

ಗದಗ ರಸ್ತೆಯಲ್ಲಿರುವ ರೈಲ್ ಸೌಧದಲ್ಲಿ ನೈರುತ್ಯ ರೈಲ್ವೆ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಪ್ರಧಾನ ವ್ಯವಸ್ಥಾಪಕ ಸಂಜೀವ್ ಕಿಶೋರ್ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

ಬಳಿಕ ಮಾತನಾಡಿದ ಅವರು, ‘ಹಿಂದುಳಿದ ವರ್ಗಗಳ ಉನ್ನತಿಯಲ್ಲಿ ಅಂಬೇಡ್ಕರ್ ಪಾತ್ರ ಪ್ರಮುಖವಾದುದು. ಅಭಿವೃದ್ಧಿಗಾಗಿ ದೇಶವು ಅವರ ಆದರ್ಶ ಮತ್ತು ತತ್ವಗಳನ್ನು ಅಳವಡಿಸಿಕೊಳ್ಳಬೇಕು’ ಎಂದರು.

ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕರಾದ ಪ್ರಶಾಂತ್ ಕುಮಾರ್ ಮಿಶ್ರಾ,ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅನೀಶ ಹೆಗಡೆ ಹಾಗೂ ಅಧಿಕಾರಿಗಳು ಇದ್ದರು.

ಅಖಿಲ ಭಾರತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ರೈಲ್ವೆ ನೌಕರರ ಸಂಘದಿಂದ ರೈಲ್ವೆ ಕಾರ್ಯಾಗಾರದಲ್ಲಿ ನೇತ್ರದಾನ ಶಿಬಿರ ನಡೆಯಿತು. ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆಗೆ ನೇತ್ರದಾನ ಮಾಡುವುದಾಗಿ ನೌಕರರು ನೋಂದಣಿ ಮಾಡಿಕೊಂಡರು. ಸಂಘದ ಪದಾಧಿಕಾರಿಗಳು, ರೈಲ್ವೆ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT