ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಘಟಗಿ: ಮಳೆ-ಗಾಳಿಗೆ ನೆಲಕ್ಕೆ ಉರುಳಿದ ವಿದ್ಯುತ್ ಕಂಬ, ಮಾವಿನ ಫಸಲು 

Published 12 ಏಪ್ರಿಲ್ 2024, 15:46 IST
Last Updated 12 ಏಪ್ರಿಲ್ 2024, 15:46 IST
ಅಕ್ಷರ ಗಾತ್ರ

ಕಲಘಟಗಿ: ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಶುಕ್ರವಾರ ಮಧ್ಯಾಹ್ನ ಗುಡುಗು ಸಮೇತ ಒಂದು ತಾಸಿಗೂ ಹೆಚ್ಚು ಕಾಲ ಸುರಿದ ಗಾಳಿ–ಮಳೆಗೆ ಅಪಾರ ಆಸ್ತಿಪಾಸ್ತಿ ಹಾನಿ ಸಂಭವಿಸಿದೆ.

ತಾಲ್ಲೂಕಿನ ಸೂಳಿಕಟ್ಟಿ ಗ್ರಾಮದಲ್ಲಿ 20 ವಿದ್ಯುತ್ ಕಂಬಗಳು ಧರೆಗೆ ಉರುಳಿ ಬಿದ್ದಿರುವುದು ವರದಿಯಾಗಿದೆ. ವಿದ್ಯುತ್ ಸಂಪರ್ಕ ಕೈಕೊಟ್ಟು ಕಾರಣ ಜನರು ಪರದಾಡುವಂತಾಯಿತು.

ರಸ್ತೆ ಬದಿಯ ಗಿಡ-ಮರಗಳು ಗಾಳಿಗೆ ಉರುಳಿ ಬಿದ್ದಿದ್ದರಿಂದ ಜನರ ಸುಗಮ ಸಂಚಾರಕ್ಕೆ ಅಡಚಣೆ ಉಂಟಾಯಿತು.

ಸುಳಿಕಟ್ಟಿ ಗ್ರಾಮದ ರೈತ ಮುಖಂಡ ಪರಶುರಾಮ ಎತ್ತಿನಗುಡ್ಡ ಅವರ ಜಮೀನಿನಲ್ಲಿರುವ ಮಾವಿನ ಫಸಲು ಉದುರಿ ಬಿದ್ದಿರುವುದರಿಂದ ಅಪಾರ ಹಾನಿ ಸಂಭವಿಸಿದೆ.

–

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT