ಬುಧವಾರ, ಮಾರ್ಚ್ 22, 2023
32 °C

ಧಾರವಾಡ: ತೆರೆಯಾಚೆ ಉಳಿದ ನಿಜ ಕಲಾವಿದರು

ಮಹಮ್ಮದ್ ಶರೀಫ್‌ Updated:

ಅಕ್ಷರ ಗಾತ್ರ : | |

Prajavani

ಧಾರವಾಡ: ವರ್ಣಮಯ ಚಿತ್ರಗಳು, ಸಂಸ್ಕೃತಿ ಬಿಂಬಿಸುವ ಕಲಾಕೃತಿ, ಕರಕುಶಲ ವಸ್ತುಗಳು, ಕಲಾತ್ಮಕ ವಿನ್ಯಾಸದ ವಸ್ತ್ರಗಳು... ಹೀಗೆ ಗ್ರಾಮ ಭಾರತದ ಸೊಗಡು ಬಿಂಬಿಸುವ ಕಲಾಲೋಕವನ್ನು ‘ಯುವ ಕೃತಿ’ ಕಟ್ಟಿ ಕೊಟ್ಟರೂ, ಅವುಗಳನ್ನು ತಯಾರಿಸಿದ ನಿಜ ಕಲಾವಿದರ ಅನುಪಸ್ಥಿತಿ ತಣ್ಣನೆ ಕಾಡಿತು.

ವೈವಿಧ್ಯಮಯ ಕಲಾಕೃತಿಗಳು ತಮ್ಮ ಕಥನವನ್ನು ಪ್ರತಿನಿಧಿಗಳಿಂದ ಹೇಳಿಸಿಕೊಳ್ಳುತ್ತಿದ್ದವು. ಸೃಷ್ಟಿಸಿದವರ ಕಲಾ
ಸೃಷ್ಟಿಯ ಪ್ರದರ್ಶನವಷ್ಟೇ ಇಲ್ಲಿ ತಲುಪಿದೆ. ಕಲಾಕೃತಿಯ ರಚನೆಯ ಹಿಂದಿನ ಶ್ರಮ, ಬೇಕಾದ ಪರಿಕರ, ತಗುಲುವ ವೆಚ್ಚ, ಸಮಯ, ರಚನೆಯ ಅನುಭವಗಳ ಕುರಿತು ತಿಳಿದುಕೊಳ್ಳಲು ಬಯಸಿದವರಿಗೆ ಕುತೂಹಲವೇ ಉತ್ತರವಾಯಿತು.

ನೆಹರೂ ಯುವ ಕೇಂದ್ರವು ಕಲಾವಿದರ ಬದಲಿಗೆ ಪ್ರತಿನಿಧಿಗಳನ್ನಾಗಿ ಕಾಲೇಜು ವಿದ್ಯಾರ್ಥಿಗಳನ್ನು ಮತ್ತು ಕೇಂದ್ರದ ಸದಸ್ಯರನ್ನು ಆಯಾ ರಾಜ್ಯಗಳನ್ನು ಪ್ರತಿನಿಧಿಸುವ ಕೆಲವು ಮಳಿಗೆಗಳನ್ನು ನೋಡಿಕೊಳ್ಳಲು ಕಳುಹಿಸಿದ್ದಾರೆ. ಹೆಚ್ಚಿನ ಮಾಹಿತಿ ಕೇಳಿದರೆ, ಪ್ರತಿನಿಧಿಗಳಿಂದ ‘ನಾವು ಪ್ರತಿನಿಧಿಗಳಷ್ಟೇ, ಹೆಚ್ಚಿನ ಮಾಹಿತಿ ಇಲ್ಲ’ ಎನ್ನುವ ಉತ್ತರ ಸಿಗುತ್ತಿತ್ತು.

ಭಾಷಾ ತೊಡಕು: ಚಂಡೀಗಢ, ಛತ್ತಿಸ್‌ಗಢ, ಪಂಜಾಬ್, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಕೇರಳ, ಹಿಮಾಚಲ ಪ್ರದೇಶ, ಉತ್ತರಾಖಂಡ, ಕಾಶ್ಮೀರ ಮುಂತಾದ ಕಡೆಗಳಿಂದ ಬಂದಿರುವ ಪ್ರತಿನಿಧಿಗಳಿಗೆ ಜನರ ಜೊತೆ ಸಂವಹನ ನಡೆಸಲು ಭಾಷೆ ಅಡ್ಡಿಯಾಗುತ್ತಿತ್ತು. ಹಿಂದಿ, ಇಂಗ್ಲಿಷ್ ಅರ್ಥವಾಗದೆ ಅವರು ಹೇಳಿದ್ದಕ್ಕೆ ತಲೆಯಲ್ಲಾಡಿಸುತ್ತ ಮುಂದೆ ಸಾಗುತ್ತಿದ್ದ ದೃಶ್ಯವೂ ಕಂಡುಬಂತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು