ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಪರಿಶಿಷ್ಟರ ಮೇಲೆ ದೌರ್ಜನ್ಯ: 10 ತಿಂಗಳಲ್ಲಿ 343 ಪ್ರಕರಣ’

Published : 9 ನವೆಂಬರ್ 2023, 6:17 IST
Last Updated : 9 ನವೆಂಬರ್ 2023, 6:17 IST
ಫಾಲೋ ಮಾಡಿ
Comments

ಧಾರವಾಡ: ಬೆಳಗಾವಿ ವಿಭಾಗ ವ್ಯಾಪ್ತಿಯ ಏಳು ಜಿಲ್ಲೆಗಳಲ್ಲಿ ಕಳೆದ 10 ತಿಂಗಳಲ್ಲಿ (2023 ಜನವರಿ 1ರಿಂದ ಅಕ್ಟೋಬರ್‌ 30) ಪರಿಶಿಷ್ಟಜಾತಿ ಮತ್ತು ಪಂಗಡದವರ ಮೇಲಿನ ದೌರ್ಜನ್ಯದ 343 ಪ್ರಕರಣಗಳು ದಾಖಲಾಗಿವೆ. ಪ್ರಕರಣಗಳಿಗೆ ಸಂಬಂಧಿಸಿದಂತೆ ಇದುವರೆಗೆ ₹4.8 ಕೋಟಿ ಪರಿಹಾರ ನೀಡಿದ್ಧಾರೆ ಎಂದು ಸಮಾಜಕಲ್ಯಾಣ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ತಿಳಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 343 ಪ್ರಕರಣಗಳಲ್ಲಿ 533 ಸಂತ್ರಸ್ತರು ಇದ್ಧಾರೆ. ಅಟ್ರಾಸಿಟಿ ಪ್ರಕರಣಗಳಲ್ಲಿ ಶಿಕ್ಷೆಯಾಗಿರುವ ಪ್ರಕರಣಗಳ ಪ್ರಮಾಣ ಶೇ 3 ರಷ್ಟಿದೆ ಎಂದರು.

‘ದೌರ್ಜನ್ಯ ಪ್ರಕರಣದಲ್ಲಿ ಹತ್ಯೆ ನಡೆದಿದ್ದರೆ ಕುಟುಂಬದವರಿಗೆ ಅನುಕಂಪ ಆಧಾರದಲ್ಲಿ ಉದ್ಯೋಗ ನೀಡದ ಪ್ರಕರಣಗಳನ್ನು ಪುನರ್‌ ಪರಿಶೀಲಿಸಲು ಸೂಚನೆ ನೀಡಿದ್ದರೆ. ಪುನರ್‌ ಪರಿಶೀಲನೆಗೆ ಹಿಂದಿನ ಒಂದು ವರ್ಷದ ಪ್ರಕರಣ ಎಂದಿದ್ದನ್ನು ಎರಡು ವರ್ಷವರೆಗೆ ವಿಸ್ತರಿಸಿದ್ದೇವೆ. ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಕ್ರಮವಹಿಸಿ ಅವರಿಗೆ ಪುನರ್ವಸತಿ ಕಲ್ಪಿಸಬೇಕು ಎಂದು ತಿಳಿಸಿದ್ದೇವೆ. ನಿರ್ಲಕ್ಷ್ಯ ವಹಿಸಿದರೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ವಿರುದ್ಧ ಕ್ರಿಮಿನಿಲ್‌ ಪ್ರಕರಣ ದಾಖಲಿಸುವುದಾಗಿ ಸೂಚನೆ ನೀಡಿದ್ದೇವೆ’ ಎಂದರು.

‘ಪರಿಶಿಷ್ಟರ ಮೇಲೆ ದೌರ್ಜನ್ಯ ನಡೆದರೆ ತಕ್ಷಣವೇ ಎಫ್‌ಐಆರ್‌ ದಾಖಲಿಸಬೇಕು. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಬೇಕು. ದೌರ್ಜನ್ಯಕ್ಕೆ ಒಳಗಾದವರಿಗೆ ತಕ್ಷಣ ಪರಿಹಾರ (ಮೂರನೇ ಒಂದು ಭಾಗ) ನೀಡಬೇಕು. ಚಾರ್ಜ್‌ ಶೀಟ್‌ ನಂತರ ಶೇ 50 ಪರಿಹಾರ, ಕೊನೆಯಲ್ಲಿ (ಇತ್ಯರ್ಥ) ಪರಿಹಾರದ ಬಾಕಿ ಮೊತ್ತ ನೀಡಬೇಕು. ದೌರ್ಜನ್ಯ ಹತ್ಯೆ ನಡೆದಿದ್ದರೆ ಒಟ್ಟು ₹8 ಲಕ್ಷ ಪರಿಹಾರ ಮತ್ತು ಕುಟುಂಬದ ಒಬ್ಬರಿಗೆ ಅನುಕುಂಪ ಆಧಾರದಲ್ಲಿ ಉದ್ಯೋಗ ನೀಡಬೇಕು ಎಂಬ ನಿಯಮ ಇದೆ. ಇವೆಲ್ಲವನ್ನು ಪಾಲಿಸಬೇಕು. ಅಟ್ರಾಸಿಟಿ ಕಾಯ್ದೆ ಬಗ್ಗೆ ಜಾಗೃತಿ ಮೂಡಿಸು ಜಿಲ್ಲಾಧಿಕಾರಿ ಮತ್ತು ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ’ ಎಂದು ತಿಳಿಸಿದರು.

ಪರಿಶಿಷ್ಟರಿಗೆ ಸ್ಮಶಾನಕ್ಕೆ ಜಾಗ ಒದಗಿಸುವಂತೆ ಸೂಚನೆ ನೀಡಿದ್ದೇನೆ. ನಕಲಿ ಜಾತಿ ಪ್ರಮಾಣ ಪತ್ರ ಪ್ರಕರಣ ಇದ್ದರೆ ಕ್ರಮ ಜರುಗಿಸುತ್ತೇವೆ. ಡಿಆರ್‌ಸಿ ಕಾಯ್ದೆಗೆ ತಿದ್ದುಪಡಿ ತಂದು ತನಿಖೆಗೆ ಸಂಬಂಧಿಸಿದಂತೆ ಹೆಚ್ಚಿನ ಅಧಿಕಾರ ನೀಡಲು ಕ್ರಮವಹಿಸುತ್ತೇವೆ ಎಂದು ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT