ಗುರುವಾರ , ಮಾರ್ಚ್ 30, 2023
23 °C

ಮಾನೆ ಜನಪರ ಕಾರ್ಯ ನಮ್ಮ ಸೋಲಿಗೆ ಕಾರಣ: ಬೊಮ್ಮಾಯಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಸವರಾಜ ಬೊಮ್ಮಾಯಿ

ಹುಬ್ಬಳ್ಳಿ: ‘ದಿವಂಗತ ಸಿ.ಎಂ. ಉದಾಸಿ ಅವರ ಬೆಂಬಲಿಗರ ಮತಗಳನ್ನು ಪಡೆಯಲು ವಿಫಲ ವಾಗಿದ್ದು ಹಾಗೂ ಕೋವಿಡ್ ಸಂದರ್ಭದಲ್ಲಿ ಶ್ರೀನಿವಾಸ ಮಾನೆ ಮಾಡಿದ ಜನಪರ ಕಾರ್ಯಗಳು ಹಾನಗಲ್ ಉಪ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಕಾರಣವಾದವು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.

ಬುಧವಾರ ಮಾಧ್ಯಮದವರ ಜೊತೆ ಮಾತನಾಡಿದ ಅವರು, ‘ಹಾನಗಲ್ ಮೊದಲಿನಿಂದಲೂ ಪೈಪೋಟಿಯ ಕ್ಷೇತ್ರ. ಒಮ್ಮೆ ಬಿಜೆಪಿ ಗೆದ್ದರೆ ಮತ್ತೊಮ್ಮೆ ಬೇರೆಯವರು ಗೆಲ್ಲುತ್ತಿದ್ದರು. ಗೆಲುವಿನ ಅಂತರ ಸಹ ತೀರ ಕಡಿಮೆ ಇರುತ್ತಿತ್ತು. ಒಂದು ತಂಡವಾಗಿ ಚುನಾವಣೆ ಎದುರಿಸಿದ್ದೇವೆ. ಆದರೆ, ಜನರು ಮಾನೆ ಅವರ ಜನಪರ ಕಾರ್ಯಕ್ಕೆ ಬೆಂಬಲಿಸಿದ್ದಾರೆ’ ಎಂದರು.

‘ಸಿಂದಗಿ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿ 31 ಸಾವಿರ ಮತಗಳ ಅಂತರದಿಂದ ಗೆದ್ದಿದ್ದಾರೆ.‌ ಇದು ಉತ್ತಮ ಆಡಳಿತಕ್ಕೆ ಸಿಕ್ಕ ಜನಬೆಂಬಲ. ಉಪಚುನಾವಣೆ ಫಲಿತಾಂಶ ಸಾರ್ವತ್ರಿಕ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರದು. ಅದರ ಹೋಲಿಕೆಯೂ ಸರಿಯಲ್ಲ’ ಎಂದ ಬೊಮ್ಮಾಯಿ, ‘ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಎದುರಾದ ಉಪ ಚುನಾವಣೆಯಲ್ಲೂ ಕಾಂಗ್ರೆಸ್ ಸೋತಿದೆ. ಸೋಲು ಗೆಲುವು ಸಾಮಾನ್ಯ’ ಎಂದರು.

‘ನಾನು ಮುಖ್ಯಮಂತ್ರಿ ಯಾಗಿ ನೂರು ದಿನ ಆಡಳಿತ ಪೂರೈಸಿದ್ದು ದೊಡ್ಡ ಸಾಧನೆಯಲ್ಲ.‌ ಕನಿಷ್ಠ ಒಂದು ವರ್ಷವಾದರೂ ಆಗಬೇಕು. ಆದರೆ, ಆಡಳಿತದ ಆರಂಭ ದಿಂದ ಇಲ್ಲಿಯವರೆಗೆ ಹೇಗೆ ನಡೆದುಕೊಂಡಿದ್ದೇನೆ, ಅಭಿವೃದ್ಧಿ ಯೋಜನೆಗಳು ಹೇಗೆ ನಡೆದಿವೆ ಎನ್ನುವುದರ ಬಗ್ಗೆ ಗುರುವಾರ ಪ್ರತಿಕ್ರಿಯಿಸುವೆ’ ಎಂದು ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು