ಹುಬ್ಬಳ್ಳಿ: ‘ಸಾರ್ವಜನಿಕರ ಕೆಲಸಕ್ಕಾಗಿ ವಿಧಾನ ಪರಿಷತ್ ಸದಸ್ಯರು ಕರೆ ಮಾಡಿದಾಗ ಸಕಾಲಕ್ಕೆ ಹಾಗೂ ಸಮರ್ಪಕವಾಗಿ ಸ್ಪಂದಿಸಲು ಸರ್ಕಾರಿ ಅಧಿಕಾರಿಗಳಿಗೆ ಸೂಚನೆ ನೀಡಬೇಕು’ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಟಿಪ್ಪಣಿ ಸಲ್ಲಿಸಿದ್ದಾರೆ.

‘ಸಾರ್ವಜನಿಕರ ಕೆಲಸಗಳು ಹಾಗೂ ಕುಂದು ಕೊರತೆ ಕುರಿತು ಚರ್ಚಿಸಲು ವಿಧಾನ ಪರಿಷತ್ ಸದಸ್ಯರು ದೂರವಾಣಿ ಮೂಲಕ ಸಂಪರ್ಕಿಸಿದಾಗ ಕೆಲವು ಅಧಿಕಾರಿಗಳು ಕರೆ ಸ್ವೀಕರಿಸುವುದಿಲ್ಲ. ವಾಪಸ್ ಕರೆಯನ್ನೂ ಮಾಡುವುದಿಲ್ಲವೆಂದು ಪರಿಷತ್ ಸದಸ್ಯರು ಮೌಖಿಕವಾಗಿ ದೂರಿದ್ದಾರೆ’ ಎಂದು ತಿಳಿಸಿದ್ದಾರೆ.

‘ಅಧಿಕಾರಿಗಳ ಈ ವರ್ತನೆ ತೀವ್ರ ಅಸಮಾಧಾನ ಉಂಟುಮಾಡಿದೆ. ಇದು ಆಡಳಿತದ ವಿಶ್ವಾಸಕ್ಕೆ ಧಕ್ಕೆ ಉಂಟುಮಾಡುತ್ತದೆ. ಶಾಸಕರ ಹಕ್ಕುಚ್ಯುತಿ ವಾಪ್ತಿಗೆ ಇದು ಒಳಪಡುವುದರಿಂದ ಅನಿವಾರ್ಯವಾಗಿ ಹಕ್ಕು ಬಾಧ್ಯತಾ ಸಮಿತಿಗೆ ವಹಿಸಬೇಕಾಗುತ್ತದೆ. ಹಾಗಾಗಿ, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದು ಉಲ್ಲೇಖಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.