ಭಾನುವಾರ, ಮಾರ್ಚ್ 26, 2023
23 °C

ಸಂಗೀತ, ನೃತ್ಯ ತರಬೇತಿ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಅವಳಿ ನಗರಗಳ ಆಸಕ್ತ ಕಲಾವಿದರಿಗೆ ಆದಿರಂಗ ಕಲಾ ಶಾಲೆ ಒಂದು ಉತ್ತಮ ಅವಕಾಶ ಕಲ್ಪಿಸಿದ್ದು, ಜನ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕನ್ನೂರ ಮಠದ ಶ್ರೀಕೃಷ್ಣ ಸಂಪಗಾವಕರ್ ಗುರೂಜಿ ಹೇಳಿದರು.

ಗುರು ಇನ್‌ಸ್ಟಿಟ್ಯೂಟ್‌ ಮತ್ತು ತಮಿಳುನಾಡಿನ ನೈವೇಲಿಯ ಎನ್‌ಎಲ್‌ಸಿ ಸಂಸ್ಥೆಗಳು ನಗರದ ಆದಿರಂಗ ಕಲಾ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ನಟನೆ, ಸಂಗೀತ ಮತ್ತು ನೃತ್ಯ ಕಲೆಗಳ ಬೇಸಿಕ್‌ ಕೋರ್ಸ್‌ ಕಲಿಕಾ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ  ‘ಸ್ಥಳೀಯವಾಗಿ ಸಿಕ್ಕಿರುವ ಅವಕಾಶ ಬಳಸಿಕೊಂಡು ಉತ್ತಮ ಕಲಾವಿದರಾಗಿ, ನಾಗರಿಕರಾಗಿ ದೇಶಕಟ್ಟುವ ಕೆಲಸ ಮಾಡಬೇಕು' ಎಂದರು.

ನಟನೆ ವಿಭಾಗದ ಮುಖ್ಯಸ್ಥ ವಿಶ್ವನಾಥ ಕುಲಕರ್ಣಿ ಅವರು ಸಿನಿಮಾ, ಟಿವಿ ಮತ್ತು ರಂಗಾಭಿನಯದ ವಿವರಗಳನ್ನು ಹೇಳಿ, ನಾಟಕ ಕಲೆಯಿಂದ ಮಕ್ಕಳ ಅಭಿವ್ಯಕ್ತಿ ಸಾಮರ್ಥ್ಯ ಹೆಚ್ಚಾಗುತ್ತದೆ ಎಂದರು.

ಗುರು ಇನ್‌ಸ್ಟಿಟ್ಯೂಟ್‌ ಅಧ್ಯಕ್ಷ ಯಶವಂತ ಸರದೇಶಪಾಂಡೆ ಮಾತನಾಡಿ ‘ಮುಂಬರುವ ದಿನಗಳಲ್ಲಿ ಆದಿರಂಗ ಕಲಾ ಶಾಲೆಯಲ್ಲಿ ನಟನೆ, ಸಂಗೀತ ಮತ್ತು ನೃತ್ಯ ಕಲೆಗಳ ಜೊತೆಗೆ ಸಿನಿಮಾ, ಟಿವಿ ಮಾಧ್ಯಮಗಳಿಗೆ ಬೇಕಾಗುವ ವಿವಿಧ ತರಬೇತಿ ನೀಡಲಾಗುವುದು. ಹುಬ್ಬಳ್ಳಿ– ಧಾರವಾಡ ಮತ್ತು ಸುತ್ತಮುತ್ತಲಿನ ಜನ ಕಲಾ ತರಬೇತಿಗಾಗಿ ಇನ್ನು ಮುಂದೆ ಬೆಂಗಳೂರು ಹಾಗೂ ಮುಂಬೈಗೆ ಹೋಗುವ ಅಗತ್ಯವಿಲ್ಲ’ ಎಂದರು.

ಸಂಗೀತ ತರಗತಿಗಳ ನಿರ್ವಾಹಕಿ ಡಾ. ಗಾಯತ್ರಿ ದೇಶಪಾಂಡೆ, ನೃತ್ಯ ಗುರು ಲಾಸ್ಯ ಶಿವಪ್ರಕಾಶ, ಇನ್‌ಸ್ಟಿಟ್ಯೂಟ್‌ನ ಜೀವನ್ ಫರ್ನಾಂಡಿಸ್, ಪ್ರದೀಪ ಮುಧೋಳ, ಮಲ್ಲಿಕಾರ್ಜುನ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.