ಮಂಗಳವಾರ, ಸೆಪ್ಟೆಂಬರ್ 27, 2022
27 °C

ಉಕ್ಕಿ ಹರಿದ ಬೆಣ್ಣಿಹಳ್ಳ: ರಸ್ತೆ ಸಂಪರ್ಕ ಕಡಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವಲಗುಂದ: ತಾಲ್ಲೂಕಿನ ಪಡೆಸೂರ ಮತ್ತು ಯಮನೂರ ಗ್ರಾಮಗಳ ಮಧ್ಯೆ ಮಳಾಳ ಹಳ್ಳದದಲ್ಲಿ ನೀರು ತುಂಬಿ ಹರಿಯುತ್ತಿರುವ ಪರಿಣಾಮ ರಸ್ತೆ ಸಂಪರ್ಕ ಕಡಿತಗೊಂಡು ವಾಹನ ಸಂಚಾರ ಸ್ಥಗಿತಗೊಂಡಿದೆ.

ಗುರವಾರ ರಾತ್ರಿ ಕುಂದಗೋಳ ಭಾಗದಲ್ಲಿ ಹೆಚ್ಚು ಮಳೆ ಸುರಿದ ಪರಿಣಾಮ ಬೆಣ್ಣಿ ಹಳ್ಳ ಉಕ್ಕಿ ಹರಿಯುತ್ತಿದ್ದು ಬೆಣ್ಣಿ ಹಳ್ಳದ ನೀರು ಮಳಾಳ ಹಳ್ಳಕ್ಕೆ ಬಂದು ಸೇರುತ್ತದೆ. ಮೊರಬ ಮತ್ತು ತಿರ್ಲಾಪೂರ ಗ್ರಾಮದ ಭಾಗದಲ್ಲಿ ಸ್ಪಲ ಮಳೆಯಾದರೂ ಈ ಹಳ್ಳ ತುಂಬಿ ಹರಿದು ಪ್ರತಿಬಾರಿ ರಸ್ತೆ ಸಂಪರ್ಕ ಕಡಿತಗೊಳ್ಳತ್ತದೆ.

ಕಳೆದ ವರ್ಷ ಈ ಸೇತುವೆ ಕಾಮಗಾರಿಗೆ ಸುಮಾರು ₹ 50 ಲಕ್ಷ ವೆಚ್ಚ ಮಾಡಲಾಗಿತ್ತು. ಇದರಿಂದ ಏನೂ ಪ್ರಯೋಜನವಾಗಿಲ್ಲ ಎಂದು ಪಡೆಸೂರ ಗ್ರಾಮದ ರೈತ ರಮೇಶ ನವಲಗುಂದ ತಿಳಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು