ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇವರು ಜೀವ ರಕ್ಷಕರು !

Last Updated 1 ಅಕ್ಟೋಬರ್ 2018, 9:43 IST
ಅಕ್ಷರ ಗಾತ್ರ

ಕಳೆದ 22 ವರ್ಷಗಳಿಂದ ವರ್ಷಕ್ಕೆ ಮೂರು ಬಾರಿ ತಪ್ಪದೇ ರಕ್ತದಾನ ಮಾಡುತ್ತಿರುವ ಹುಬ್ಬಳ್ಳಿಯ ‘ಎ’ ಪಾಸಿಟಿವ್‌ರಕ್ತದಾನಿ ಅಮೋಲ್‌ ಪಾಟೀಲ ಅವರು, ಹಲವು ಕ್ಯಾನ್ಸರ್‌ ರೋಗಿಗಳ ಪಾಲಿಗೆ ‘ಜೀವರಕ್ಷಕ’ ರಾಗಿದ್ದಾರೆ.

ನವನಗರದ ಕ್ಯಾನ್ಸರ್ ಆಸ್ಪತ್ರೆಯಲ್ಲಿ ರಕ್ತದಾನ ಮಾಡುವ ಅವರು ಅಲ್ಲಿನ ವೈದ್ಯರ, ರೋಗಿಗಳ ಸಂಪ್ರೀತಿಗೂ ಪಾತ್ರರು. ಕೆಲ ಬಾರಿ ರಕ್ತದಾನ ಮಾಡುವುದರ ಜೊತೆಯಲ್ಲಿ ಬಡವರಿಗೆ ಕೈಲಾದ ಮಟ್ಟಿಗೆ ಹಣವನ್ನೂ ಬಡ ರೋಗಿಗಳ ಕುಟುಂಬಕ್ಕೆ ನೀಡಿ ಬರುತ್ತಾರೆ.

ಯಾವುದೋ ಒಂದು ಸಂದರ್ಭದಲ್ಲಿ ಸ್ವಯಂ ಪ್ರೇರಣೆ ಪಡೆದ ಅವರ ಮೊಬೈಲ್‌ಗೆ ದೂರದ ಊರುಗಳಿಂದ ಈಗ ಕರೆಗಳು ಬರುತ್ತವೆ. ಸಮಯ, ದುಡಿಮೆಯನ್ನು ಲಕ್ಷಿಸದೆ ಸಮಾಧಾನದಿಂದ ರಕ್ತದ ಅಗತ್ಯ ಇರುವವರ ಜೊತೆ ಮಾತನಾಡುತ್ತಾರೆ. ಇಲ್ಲಿತನಕ ಅಂದಾಜು 60ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿರುವ ಅವರಿಗೆ ಯಾವುದೇ ಸನ್ಮಾನ, ಅಭಿನಂದನೆಯ ಪತ್ರ ದೊರಕಿಲ್ಲ. ಆದರೆ ಅಮೋಲ್‌ ಪ್ರಕಾರ ‘ರಕ್ತದಾನದ ನಂತರ ಸಿಗುವ ಅನುಭವಕ್ಕೆ ಬೆಲೆ ಕಟ್ಟಲಾಗುವುದಿಲ್ಲ. ಇದು ಇನ್ನೊಬ್ಬರ ಮೆಚ್ಚುಗೆಗಾಗಿಯೂ ಅಲ್ಲ’ ಎನ್ನುತ್ತಾರೆ.

ನಿಯಮಿತವಾಗಿ ರಕ್ತದಾನ ಮಾಡುವ ಅಮೋಲ್‌ ಅವರ ಮನೋಭಾವ ಮೆಚ್ಚಿಕೊಂಡ ವೈದ್ಯರು ಅವರ ಮೊಬೈಲ್‌ ಸಂಖ್ಯೆಯನ್ನು ಈ ವೆಬ್‌ಸೈಟ್‌ http://www.hublidharwad.info/blooddonors.php ಅಲ್ಲಿ ಸೇರಿಸಿದ್ದಾರೆ. ನಾವು ಗೂಗಲ್‌ನಲ್ಲಿ ಹುಬ್ಬಳ್ಳಿ ಬ್ಲಡ್
ಡೋನರ್ಸ್‌ ಎಂದು ಟೈಪಿಸಿ ದರೆ ಮೊದಲು ತೆರೆದು ಕೊಳ್ಳುವುದೇ ಈವೆಬ್‌ಸೈಟ್‌.

‘ರಾತ್ರಿ 12.30ರ ಸಮಯ, ಭಾರಿ ನಿದ್ರೆ ಇತ್ತು. ಮೊಬೈಲ್‌ ರಿಂಗಣಿಸಿತು. ಆ ಕಡೆಯಿಂದ ಒಂದು ಧ್ವನಿ ‘ಸರ್‌ ಅರ್ಜೆಂಟಾಗಿ ರಕ್ತ ಬೇಕಾಗಿದೆ. ಯಾರೋ ನಿಮ್ಮ ನಂಬರ್‌ ನೀಡಿದರು, ದಯವಿಟ್ಟು ಬನ್ನಿ ಸರ್‌’ ಎಂದು ಕೋರಿದರು. ಅದಕ್ಕೆ ಸ್ವಲ್ಪವೂ ಬೇಸರಿಸಿಕೊಳ್ಳದೆ ಹೊರಟೆ’ ಎನ್ನುತ್ತಾರೆ ಅಮೋಲ್‌ ಪಾಟೀಲ.

‘ರಕ್ತದ ಅಗತ್ಯ ಹೆಚ್ಚುತ್ತಿದ್ದು, ಆದರೆ ಪೂರೈಕೆ ಆಗುತ್ತಿಲ್ಲ. ಪರಿಣಾಮ ರಕ್ತ ಸಿಗದೆ ಸಾವು ಸಂಭವಿಸುವ ಪ್ರಕರಣಗಳು ಹೆಚ್ಚುತ್ತಿವೆ. ಸರಿಯಾದ ತಿಳಿವಳಿಕೆ ಇಲ್ಲದೇ ಇರುವ ಕಾರಣ ಹಲವರಲ್ಲಿ ನಿರಾಸಕ್ತಿ ಇದೆ’ ಎನ್ನುತ್ತಾರೆ. ಇವರಿಗೆ ಇನ್ನೊಂದು ಬೇಸರವಿದೆ ಕೆಲ ಆಸ್ಪತ್ರೆ ಸಿಬ್ಬಂದಿ ರಕ್ತವನ್ನು ಮಾರಿಕೊಳ್ಳುತ್ತಾರೆ. ಇದು ನಿಲ್ಲಬೇಕು ಎನ್ನುವುದು ಅವರ ಒತ್ತಾಸೆ. ಇವರ ಮೊ. ಸಂಖ್ಯೆ 9035656565

ಇವರಿಂದ ಪ್ರೇರಣೆ ಪಡೆದ ಮತ್ತೊಬ್ಬ ರಕ್ತದಾನಿ ಮಹಾಂತೇಶ ಕೊಲ್ಲುರಮಠ ಇವರು (ಮೊ.9945343857) ಸಹ ನಿಯಮಿತವಾಗಿ ರಕ್ತದಾನ ಮಾಡುತ್ತಾರೆ. ಇವರಿಂದ ಹಲವರು ಪ್ರೇರಣೆಗೊಂಡು ರಕ್ತದಾನವನ್ನು ಮಾಡುತ್ತಿದ್ದಾರೆ.

ಹಿಂದೆ ನವನಗರದ ನಿವಾಸಿಯಾಗಿದ್ದ ಅವರು, ಈಗ ಬೆಳಗಾವಿಯ ಖಾಸಗಿ ಕಂಪನಿಯಲ್ಲಿ ದುಡಿಯುತ್ತಿದ್ದಾರೆ. ‘ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡುತ್ತಿದ್ದೆ. ನಂತರ ಅಮೋಲ್ ಅವರ ಸಲಹೆಯಂತೆ ಅಗತ್ಯ ಇರುವವರಿಗೆ ರಕ್ತದಾನ ಮಾಡುತ್ತಿದ್ದೇನೆ’ ಎನ್ನುತ್ತಾರೆ.

‘ಮಧ್ಯರಾತ್ರಿ ಶಸ್ತ್ರಚಿಕಿತ್ಸೆ ಅಗತ್ಯವಿದ್ದ ವ್ಯಕ್ತಿಗೆ ರಕ್ತದಾನ ಮಾಡಿದ್ದು, ಹಸುಗೂಸಿನ ಡಯಾಲಿಸಿಸ್‌ಗೆಧಾವಿಸಿದ್ದ ಘಟನೆ ಮಹಾಂತೇಶ ಅವರಿಗೆ ‘ನಮ್ಮಂತೆ ಎಲ್ಲರ ಬದುಕು ಮಹತ್ವದ್ದು’ ಅನಿಸಿದೆ. ಹೀಗೆ ಹಲವು ಘಟನೆಗಳು ಇವರಂತೆ ಹಲವು ರಕ್ತದಾನಿಗಳ ಜೀವನ ಹೆಚ್ಚು ಸಹ್ಯವಾಗಿದೆ.

‘ಒಂದು ಯೂನಿಟ್‌ ರಕ್ತವು ಒಂದಲ್ಲ, ಎರಡಲ್ಲ, ಬರೋಬ್ಬರಿ ಮೂವರುವ್ಯಕ್ತಿಗಳ ಪ್ರಾಣ ಉಳಿಸಬಲ್ಲದು. ನೀವು 18ರಿಂದ 60 ವಯಸ್ಸಿನವರಾಗಿದ್ದು ಆರೋಗ್ಯವಂತರಾಗಿದ್ದಲ್ಲಿ, ನಿಯಮಿತವಾಗಿ ರಕ್ತದಾನ ಮಾಡುವ ಮೂಲಕ ರಕ್ತದ ಕೊರತೆ ನೀಗಿಸಬಹುದಾಗಿದೆ’ ಎನ್ನುತ್ತಾರೆ ಮಹಾಂತೇಶ ಕೊಲ್ಲೂರಮಠ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT