ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೆಕ್ಕಪರಿಶೋಧಕರ ಸಮ್ಮೇಳನ 13ರಿಂದ

Last Updated 11 ಡಿಸೆಂಬರ್ 2019, 12:12 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ ಹುಬ್ಬಳ್ಳಿ ಶಾಖೆಯ 33ನೇ ವಾರ್ಷಿಕ ಸಮ್ಮೇಳನ ಡಿ.13 ಮತ್ತು 14ರಂದು ಕೇಶ್ವಾಪುರದ ಶ್ರೀನಿವಾಸ ಗಾರ್ಡನ್‌ನಲ್ಲಿ ನಡೆಯಲಿದೆ.

ರೇರಾ ಹೊಸ ಕಾಯ್ದೆ, ಜಿಎಸ್‌ಟಿ, ಆದಾಯ ತೆರಿಗೆ, ಕಂಪನಿ ಕಾಯ್ದೆ, ಡಿಜಿಟಲ್‌ ತಂತ್ರಜ್ಞಾನ ವಿಷಯಗಳ ಕುರಿತು ಸಮ್ಮೇಳನದಲ್ಲಿ ಪ್ರಮುಖವಾಗಿ ಚರ್ಚೆ ನಡೆಯಲಿದೆ ಎಂದು ಹುಬ್ಬಳ್ಳಿ ಶಾಖೆಯ ಅಧ್ಯಕ್ಷ ಕೆ.ವಿ.ದೇಶಪಾಂಡೆ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಆಂಧ್ರಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಕೇರಳ ಮತ್ತು ಕರ್ನಾಟಕದ 400ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಡಿ.13ರಂದು ಬೆಳಿಗ್ಗೆ 9.30ಕ್ಕೆ ಆರಂಭವಾಗುವ ಸಮ್ಮೇಳನವನ್ನು ಚೆನ್ಹೈನ ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆಯ ದಕ್ಷಿಣ ಪ್ರಾದೇಶಿಕ ಪರಿಷತ್ತಿನ ಅಧ್ಯಕ್ಷ ಜೋಮನ್ ಜಾರ್ಜ್‌ ಉದ್ಘಾಟಿಸಲಿದ್ದಾರೆ ಎಂದು ಹೇಳಿದರು.

ಹೈದರಾಬಾದ್‌ನ ಲೆಕ್ಕಪರಿಶೋಧಕರಾದ ಅರುಣ ಶರ್ಮಾ, ದಯಾ ನಿವಾಸ ಶರ್ಮಾ, ಬೆಂಗಳೂರಿನ ವಿನಯ ತ್ಯಾಗರಾಜ, ಕೆ.ಪಿ.ನಾರಾಯಣನ್‌, ಮೊಹಮ್ಮದ್‌ ರಮೀಜ್‌, ಪೈಜಲ್‌, ಸಚಿನ ಕುಮಾರ್‌ ಬಿ.ಪಿ., ಮುಂಬೈನ ತನ್ಮಯ ಮೋದಿ, ಮಂದಾರ ವೈದ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಲಿದ್ದಾರೆ ಎಂದರು.

ದಾಸ ಸಾಹಿತ್ಯ ಉಪನ್ಯಾಸಕ ಡಾ.ಅರಳುಮಲ್ಲಿಗೆ ಪಾರ್ಥಸಾರಥಿ ಅವರು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಮೈಸೂರಿನ ಸುಮಾ ರಾಜಕುಮಾರ್‌ ಅವರು ಮ್ಯಾಜಿಕ್‌ ಹಾಗೂ ಮಾತನಾಡುವ ಗೊಂಬೆ ಕಾರ್ಯಕ್ರಮ ನಡೆಸಿಕೊಡುವರು ಎಂದು ತಿಳಿಸಿದರು.

ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆಯ ಹುಬ್ಬಳ್ಳಿ ಶಾಖೆಯ ಪದಾಧಿಕಾರಿಗಳಾದ ಹಿತೇಶ್‌ಕುಮಾರ್‌ ಮೋದಿ, ಎಚ್‌.ಎನ್‌.ಆಡಿನವರ, ಸುಭಾಶ್‌ ಪಾಟೀಲ, ಜಿ.ಎಂ.ಕಟ್ವಾಕರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT