ಲೆಕ್ಕ ಪರಿಶೋಧಕರ ದಿನಾಚರಣೆ

ಹುಬ್ಬಳ್ಳಿ: ಭಾರತ ಲೆಕ್ಕ ಪರಿಶೋಧಕರ (ಸಿಎ) ಸಂಘದ ಹುಬ್ಬಳ್ಳಿ ಶಾಖೆಯ ವತಿಯಿಂದ ಗುರುವಾರ 73ನೇ ವರ್ಷದ ಲೆಕ್ಕ ಪರಿಶೋಧಕರ ದಿನ ಆಚರಿಸಲಾಯಿತು.
ಹುಬ್ಬಳ್ಳಿ ಶಾಖೆಯ ಚೇರ್ಮನ್ ಎಚ್.ಎನ್. ಅಡಿನವರ ಸಿ.ಎ. ಸಂಸ್ಥೆಯ ಧ್ವಜಾರೋಹಣ ನೆರವೇರಿಸಿ ಮಾತನಾಡಿ ‘ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಲೆಕ್ಕ ಪರಿಶೋಧಕರ ಪಾತ್ರ ಬಹಳ ಮುಖ್ಯವಾಗಿದೆ. ಆದ್ದರಿಂದ ಎಲ್ಲರೂ ಎಚ್ಚರಿಕೆಯಿಂದ ಕೆಲಸ ಮಾಡಬೇಕು. ನಿತ್ಯದ ಜೀವನ ನಿರ್ವಹಣೆ ಸಾಕಷ್ಟು ಒತ್ತಡದಿಂದ ಕೂಡಿದೆ. ಆದ್ದರಿಂದ ಒತ್ತಡಕ್ಕೆ ಒಳಗಾಗದೆ ಕೆಲಸ ನಿರ್ವಹಿಸಬೇಕು’ ಎಂದರು.
ಹುಬ್ಬಳ್ಳಿ ಶಾಖೆಯ ಕಾರ್ಯದರ್ಶಿ ಮಲ್ಲಿಕಾರ್ಜುನ ಪಿಸೆ, ಲೆಕ್ಕ ಪರಿಶೋಧಕರಾದ ಕೆ.ವಿ. ದೇಶಪಾಂಡೆ, ಸುಭಾಷ ಪಾಟೀಲ, ಎಸ್. ಓಸ್ವಾಲ್, ಚನ್ನವೀರ ಮುಂಗರವಾಡಿ, ಸಿ.ಆರ್. ಧವಳಗಿ, ಹಿತೇಶಕುಮಾರ ಮೋದಿ, ಜಿ.ವಿ. ದೇಸಾಯಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ರಾಷ್ಟ್ರೋತ್ಥಾನ ರಕ್ತನಿಧಿ ಕೇಂದ್ರದ ಸಹಯೋಗದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಶಾಖೆಯ ಸದಸ್ಯರು ರಕ್ತದಾನ ಮಾಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.