ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲರೊಂದಿಗೂ ಬೆರೆಯುತ್ತಿದ್ದ ಬಿಪಿನ್​ ರಾವತ್: ನಿವೃತ್ತ ರೈಲ್ವೆ ಉದ್ಯೋಗಿಯ ಮನದಾಳ

Last Updated 10 ಡಿಸೆಂಬರ್ 2021, 3:42 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಸೇನಾಪಡೆಗಳ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್‌ ಸಾರ್ವಜನಿಕ ಜೀವನದಲ್ಲಿ ಎಲ್ಲರೊಂದಿಗೂ ಬರೆಯುತ್ತಿದ್ದರು. ಜೀವನದಲ್ಲಿ ಅವರನ್ನು ಭೇಟಿಯಾಗಲು ಅವಕಾಶ ಸಿಕ್ಕಿದ್ದು ನನ್ನ ಜೀವನದ ಭಾಗ್ಯ ಎಂದು ಇಲ್ಲಿನ ನಿವೃತ್ತ ರೈಲ್ವೆ ಉದ್ಯೋಗಿ ಸತ್ಯಬೋಧ ಬಾಗಲ್ ನೆನಪು ಹಂಚಿಕೊಂಡರು.

ಪ್ರವೃತ್ತಿಯಿಂದ ಕ್ರೀಡಾ ಲೇಖಕರಾಗಿರುವ ಬಾಗಲ್ ಅವರು ‘ಪ್ರಜಾವಾಣಿ’ ಜೊತೆ ಮಾತನಾಡಿ ‘ನನ್ನ ಸಹೋದರ ವಿ.ಎಂ. ಪಾಟೀಲ ಪುಣೆಯಲ್ಲಿ ಸದರ್ನ್ ಕಮಾಂಡ್‌ನಲ್ಲಿ ಲೆಫ್ಟಿನೆಂಟ್‌ ಜನರಲ್‌ ಆಗಿದ್ದರು. ಅವರ 80ನೇ ಜನ್ಮದಿನದ ಕಾರ್ಯಕ್ರಮದಲ್ಲಿ ಬಿಪಿನ್‌ ರಾವತ್‌ ಕೂಡ ಪಾಲ್ಗೊಂಡಿದ್ದರು. ಆಗ ಅವರನ್ನು ಹತ್ತಿರದಿಂದ ನೋಡುವ ಅವಕಾಶ ಸಿಕ್ಕಿತ್ತು’ ಎಂದರು.

ವಕೀಲರ ಸಂಘದಿಂದ ಗೌರವ: ಹೆಲಿಕಾಪ್ಟರ್‌ ದುರಂತದಲ್ಲಿ ಮೃತಪಟ್ಟ ಬಿಪಿನ್‌ ರಾವತ್‌ ಅವರಿಗೆ ಹುಬ್ಬಳ್ಳಿ ವಕೀಲರ ಸಂಘದ ವತಿಯಿಂದ ಬುಧವಾರ ನ್ಯಾಯಾಲಯದ ಹೊಸ ಕಟ್ಟಡದ ಮುಂದೆ ಗೌರವ ಸಲ್ಲಿಸಲಾಯಿತು. ರಾವತ್‌ ಭಾವಚಿತ್ರದ ಮುಂದೆ ವಕೀಲರು ಮೇಣದ ಬತ್ತಿ ಹಚ್ಚಿ ಶ್ರದ್ಧಾಂಜಲಿ ಸಲ್ಲಿಸಿದರು.

ಸಂಘದ ಅಧ್ಯಕ್ಷ ಸಿ.ಆರ್‌. ಪಾಟೀಲ, ಪ್ರಧಾನ ಕಾರ್ಯದರ್ಶಿ ಅಶೋಕ ಅಣ್ವೇಕರ, ಎಸ್‌.ಎಂ. ಹೂಲಿ, ಎಂ. ಲೋಕೇಶ, ಸಾವಿತ್ರಿ ಪೊಲೀಸ್‌ ಪಾಟೀಲ, ಮುರಳಿ ಪೂಜಾರ, ಎಸ್‌.ಎಂ. ವಡ್ಡಟ್ಟಿ, ಎಸ್‌.ಕೆ. ಕುಲಕರ್ಣಿ, ಮಹೇಶ ಹಿರೇಮಠ ಹಾಗೂ ಪಿ.ಎಸ್‌. ಸರ್ದೇಶಪಾಂಡೆ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಶ್ರದ್ಧಾಂಜಲಿ: ಉಣಕಲ್‌ನಲ್ಲಿ ಬಿಪಿನ್‌ ರಾವತ್‌ ದಂಪತಿ ಹಾಗೂ ಉಳಿದ 11 ಜನರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಜಿಲ್ಲಾ ಕಾಂಗ್ರೆಸ್ ವಕ್ತಾರ ಗಂಗಾಧರ ದೊಡ್ಡವಾಡ, ಮುಖಂಡರಾದ ಶಂಕರ ಮಲಕಣ್ಣವರ, ಅಡಿವೆಪ್ಪ ಮೆಣಸಿನಕಾಯಿ, ಶಶಿಧರ ಕಟ್ಟಿಮನಿ, ಅಪ್ಪಣ್ಣ ನಾಡಗೇರ, ಬಸವರಾಜ ಬಳಿಗಾರ, ಮುತ್ತು ತಟ್ಟಿಮನಿ, ಕಲ್ಲಪ್ಪ ಶಿಸನಳ್ಳಿ, ಗುರುಸಿದ್ದಪ್ಪ ಮೆಣಸಿನಕಾಯಿ, ಮಲ್ಲಪ್ಪಹೆಡ್ಡದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT