ಮಹದಾಯಿ ಚರ್ಚೆಯಾಗಲೇಬೇಕಾದ ವಿಷಯ: ಚಂದ್ರಶೇಖರ ಕಂಬಾರ

7

ಮಹದಾಯಿ ಚರ್ಚೆಯಾಗಲೇಬೇಕಾದ ವಿಷಯ: ಚಂದ್ರಶೇಖರ ಕಂಬಾರ

Published:
Updated:

ಹುಬ್ಬಳ್ಳಿ: ಧಾರವಾಡದಲ್ಲಿ ನಡೆಯುವ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಮಹದಾಯಿ‌ ಚರ್ಚೆಯಾಗಲೇಬೇಕಾದ ವಿಷಯ ಎಂದು ಸಮ್ಮೇಳನದ ಅಧ್ಯಕ್ಷ ಚಂದ್ರಶೇಖರ ಕಂಬಾರ ಹೇಳಿದರು.

ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಧಾರವಾಡಕ್ಕೆ ತೆರಳುವ ಮೊದಲು ಇಲ್ಲಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ‌ ಮಾತನಾಡಿದ ಅವರು ನಾಡಿನ ನೆಲ, ಜಲ‌ ಮತ್ತು ಭಾಷೆ ರಕ್ಷಣೆಗೆ ಸಾಹಿತ್ಯ ಸಮ್ಮೇಳನ ವೇದಿಕೆಯಾಗಬೇಕು. ಈ ಭಾಗದ ಸಮಸ್ಯೆಗಳ ಬಗ್ಗೆ ಚರ್ಚೆಯಾಗಬೇಕು ಎಂದರು.

ನನ್ನ ಆತ್ಮೀಯ ಸ್ನೇಹಿತರು ಹಾಗೂ ಗುರುಗಳನ್ನು ಕಂಡ ನೆಲದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದರಿಂದ ತುಂಬಾ ಸಂತೋಷವಾಗುತ್ತಿದೆ. ಜೊತೆಗೆ ‌ಬೇಸರವೂ ಆಗುತ್ತಿದೆ. ಎಂ.ಎಂ.ಕಲಬುರ್ಗಿ ಹಾಗೂ ಗಿರಡ್ಡಿ ಗೋವಿಂದರಾಜ್ ಅವರಂಥ ಸ್ನೇಹಿತರನ್ನು ಕಳೆದುಕೊಂಡ ಬೇಸರ ಕಾಡುತ್ತಿದೆ ಎಂದರು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !