ಶನಿವಾರ, ಮೇ 28, 2022
31 °C

ನಗರದಲ್ಲಿ ಕ್ಷೀಣಿಸುತ್ತಿರುವ ಸಾಮರಸ್ಯ- ಜಾನಪದ ತಜ್ಞ ಡಾ. ಶ್ರೀಶೈಲ ಹುದ್ದಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಧಾರವಾಡ: ‘ಧಾರ್ಮಿಕ ಸಾಮರಸ್ಯದ ಬದುಕು ಗ್ರಾಮೀಣ ಪರಿಸರದಲ್ಲಿ ಮಾತ್ರ ಜೀವಂತವಿದ್ದು, ನಗರದಲ್ಲಿ ಇದು ಕ್ಷೀಣಿಸುತ್ತಿರುವುದು ವಿಪರ್ಯಾಸ’ ಎಂದು ಜಾನಪದ ತಜ್ಞ ಡಾ. ಶ್ರೀಶೈಲ ಹುದ್ದಾರ ಅಭಿಪ್ರಾಯಪಟ್ಟರು.

ಕರ್ನಾಟಕ ವಿದ್ಯಾವರ್ಧಕ ಸಂಘವು ಎಂ.ಡಿ. ಗೋಗೇರಿ ದತ್ತಿ ಅಂಗವಾಗಿ ಆಯೋಜಿಸಿದ್ದ ಗೋಗೇರಿಯವರ ಸಾಹಿತ್ಯದಲ್ಲಿ ಹಾಸ್ಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಗೋಗೇರಿಯವರು ಶಿಕ್ಷಕ ವೃತ್ತಿಯ ಜತೆಗೆ ಕನ್ನಡ ಭಾಷೆಯ ಸಾಧ್ಯತೆಗಳನ್ನೆಲ್ಲ ಅವರು ಸಾಹಿತ್ಯದಲ್ಲಿ ಬಳಸಿದ್ದಾರೆ. ಆಧುನಿಕ ವಚನಗಳನ್ನು ವ್ಯಂಗ್ಯವಾದ ಮತ್ತು ವಿಡಂಬನಾತ್ಮಕವಾಗಿ ಬರೆದಿರುವಂತಹ ಗೋಗೇರಿಯವರ ಸಾಹಿತ್ಯದಲ್ಲಿ ಹಾಸ್ಯದ ಹೊಸತನ ಕಂಡುಬರುತ್ತದೆ. ಚುನಾವಣೆಗೆ ನಿಂತ ನಮ್ಮ ಕಡೆಮನಿ ಹಣುಮಂತ, ಇಂಥ ವಿಡಂಬನಾತ್ಮಕ ಹಾಡುಗಳು ಜನಮಾನಸದಲ್ಲಿ ಉಳಿದಿವೆ’ ಎಂದರು.

‘ಗೋಗೇರಿಯವರ ನವಿರಾದ ಹಾಸ್ಯ ಓದುಗರ ಮನಮುಟ್ಟುತ್ತವೆ. ತಮ್ಮ ಸಾಹಿತ್ಯದಲ್ಲಿ ಭಾಷೆಯನ್ನು ಪ್ರಾಯೋಗಿಕವಾಗಿ ಬಳಸುತ್ತಿದ್ದರು. ಹೀಗಾಗಿ ಜನಮನದ ಕವಿಯಾಗಿ ರೂಪಗೊಂಡರು’ ಎಂದು ನೆನಪಿಸಿಕೊಂಡರು.

ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅವರು ಗೋಗೇರಿ ಅವರೊಂದಿಗಿನ ಒಡನಾಟವನ್ನು ಹಂಚಿಕೊಂಡರು. ಡಾ. ರಾಮು ಮೂಲಗಿ ಅಧ್ಯಕ್ಷತೆ ವಹಿಸಿದ್ದರು. ಆರ್.ಎಂ. ಗೋಗೇರಿ, ಎ.ಎ. ದರ್ಗಾ, ಪ್ರೇಮಾ ನಡುವಿನಮನಿ, ಶರೀಫ್ ನದಾಫ್, ರೂಪಾ ಬಾಳೇಗುಡಿ, ಭಾಗ್ಯಶ್ರೀ, ಶಂಕರ ಹಲಗತ್ತಿ, ಡಾ. ಶೈಲಜಾ ಅಮರಶೆಟ್ಟಿ, ಡಾ. ಜಿನದತ್ತ ಹಡಗಲಿ, ನಿಂಗಣ್ಣ ಕುಂಟಿ, ಎಸ್.ಎಂ. ದಾನಪ್ಪಗೌಡರ, ಡಾ. ಧನವಂತ ಹಾಜವಗೋಳ, ಡಾ. ಮಹೇಶ ಹೊರಕೇರಿ ಇದ್ದರು. ರವಿಶಂಕರ ಗಡಿಯಪ್ಪನವರ ಅವರು ಗೋಗೇರಿ ಅವರ ಕವನಗಳನ್ನು ವಾಚಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು