ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯಮಿ ಖಾತೆಯಿಂದ ಅಕ್ರಮ ಹಣ ವರ್ಗಾವಣೆ

ಕೆನಡಾದಲ್ಲಿ ವಾಸವಿರುವ ಅಮೀರ್‌ ಹಮ್ಜಾ ಶೇಖ್‌
Last Updated 1 ಜುಲೈ 2020, 17:29 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕೆನಡಾದಲ್ಲಿ ವಾಸವಿರುವ ಹುಬ್ಬಳ್ಳಿ ಮೂಲದ ಉದ್ಯಮಿ ಅಮೀರ್‌ ಹಮ್ಜಾ ಶೇಖ್‌ ಅವರ ಎಸ್‌ಬಿಐ ಖಾತೆಯಿಂದ ಅಕ್ರಮವಾಗಿ ₹17.21ಲಕ್ಷವನ್ನು ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಿದ ಆರೋಪದ ಮೇಲೆ ಇಲ್ಲಿನ ಗೋಕುಲ ರಸ್ತೆ ನೆಹರೂನಗರದಲ್ಲಿರುವ ಎಸ್‌ಬಿಐ ಶಾಖೆಯ ಸಹಾಯಕ ವ್ಯವಸ್ಥಾಪಕರ ವಿರುದ್ಧ ದೂರು ದಾಖಲಾಗಿದೆ.

2018 ಆಗಸ್ಟ್‌ 4ರಿಂದ 2019 ಮೇ 6ರವರೆಗೆ ಹಂತ ಹಂತವಾಗಿ ಎಂಟು ಮಂದಿಯ ಖಾತೆಗಳಿಗೆ ಹಣ ವರ್ಗಾವಣೆಯಾಗಿದೆ. ಬ್ಯಾಂಕ್‌ ಸಹಾಯಕ ವ್ಯವಸ್ಥಾಪಕ ಮೊಹಮ್ಮದ್‌ ಅಜರುದ್ದೀನ್‌ ಅವರು ಕೋರ್‌ ಬ್ಯಾಂಕಿಂಗ್‌ ವ್ಯವಸ್ಥೆಯ ಜವಾಬ್ದಾರಿ ವಹಿಸಿದ್ದರು. ಈ ವ್ಯವಸ್ಥೆಯಡಿ ಗ್ರಾಹಕರ ಒಪ್ಪಿಗೆ ಪಡೆದೇ ಹಣ ವರ್ಗಾವಣೆ ಮಾಡುವ ಅಧಿಕಾರ ನೀಡಲಾಗಿರುತ್ತದೆ. ಆದರೆ, ಈ ಪ್ರಕರಣದಲ್ಲಿ ಗ್ರಾಹಕರ ಅನುಮತಿ ಇಲ್ಲದೇ ಹಣ ವರ್ಗಾವಣೆ ಮಾಡಿರುವುದು ಪತ್ತೆಯಾಗಿದೆ. ಈ ಸಂಬಂಧ ಮೇಲಧಿಕಾರಿಗಳೊಂದಿಗೆ ಚರ್ಚಿಸಿ ತಡವಾಗಿ ಪ್ರಕರಣ ದಾಖಲಿಸಲಾಗಿದೆ ಎಂದು ಅದೇ ಬ್ಯಾಂಕ್‌ ನೌಕರ ರೋಹಿತ್‌ ರಘು ಸೋನವಾಣೆ ಎಂಬುವರು ದೂರಿನಲ್ಲಿ ತಿಳಿಸಿದ್ದಾರೆ.

2018 ಆಗಸ್ಟ್‌ 4ರಂದು ಅಮ್ರೀನ್‌ ಮೊಹಮದ್‌ ಅಜರುದ್ದೀನ್‌ ಮನಿಯಾರ್‌ ಎಂಬುವರ ಖಾತೆ ₹1.90 ಲಕ್ಷ, 2018 ಆಗಸ್ಟ್‌ 16ರಂದು ರಮೇಶ್‌ ಡಿ.ಅರಟ್ಟಿ ಖಾತೆಗೆ ₹2 ಲಕ್ಷ, 2018 ಅಕ್ಟೋಬರ್‌ 11ರಂದು ರುದ್ರಗೌಡ ಸಿದ್ದನಗೌಡ ಪಾಟೀಲರ ಖಾತೆಗೆ ₹6 ಲಕ್ಷ, 2019 ಫೆಬ್ರುವರಿ 2ರಂದು ಶಾರದಾ ಹೊಸಮನಿ ಅವರ ಖಾತೆಗೆ ₹2.31,320 ಲಕ್ಷ, ಮಾರ್ಚ್‌ 20 ರಂದು ಸಲೀಂ ಮಕ್ತುಮ್‌ ಹುಸೇನ್‌ ಮನಿಯಾರ್‌ ಖಾತೆಗೆ ₹50 ಸಾವಿರ, ಅದೇ ದಿನ ಹುಸೇನ್‌ ಸಾಬ್‌ ನಾಲಬಂದ ಖಾತೆಗೆ ₹2 ಲಕ್ಷ, ಏಪ್ರಿಲ್‌ 22ರಂದು ಸಲೀಂ ಮುಕ್ತಮ್‌ ಹುಸೇನ್‌ ಮನಿಯಾರ್‌ ಖಾತೆಗೆ ₹1.50 ಲಕ್ಷ ಹಾಗೂ ಮೇ 6ರಂದು ರಮೇಶ್‌ ಡಿ.ಅರಟ್ಟಿ ಖಾತೆಗೆ ₹1 ಲಕ್ಷ ಸೇರಿ ಒಟ್ಟು ₹17,21,320 ವರ್ಗಾವಣೆಯಾಗಿದೆ.

ಬ್ಯಾಂಕ್‌ ವ್ಯವಸ್ಥಾಪಕರು ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು, ದಾಖಲೆಗಳನ್ನು ಸಂಗ್ರಹಿಸುತ್ತಿದ್ದೇವೆ ಎಂದು ಗೋಕುಲ ರಸ್ತೆ ಪೊಲೀಸ್‌ ಠಾಣೆ ಪಿಎಸ್‌ಐ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT