ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅನಿಲಕುಮಾರ್‌ ಪಾಟೀಲಗೆ ಎಂ.ಎಲ್.ಸಿ ಸ್ಥಾನ ನೀಡಲು ಒತ್ತಾಯ

Published 26 ಫೆಬ್ರುವರಿ 2024, 13:27 IST
Last Updated 26 ಫೆಬ್ರುವರಿ 2024, 13:27 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಜಗದೀಶ ಶೆಟ್ಟರ್‌ ಪಕ್ಷ ಬಿಟ್ಟು ಹೋಗಿದ್ದರಿಂದ ತೆರವಾಗಿರುವ ವಿಧಾನ ಪರಿಷತ್‌ ಸದಸ್ಯ ಸ್ಥಾನವನ್ನು  ಧಾರವಾಡ ಜಿಲ್ಲಾ (ಗ್ರಾಮೀಣ) ಕಾಂಗ್ರೆಸ್‌ ಅಧ್ಯಕ್ಷ ಅನಿಲಕುಮಾರ್‌ ಪಾಟೀಲ ಅವರಿಗೆ ನೀಡಬೇಕೆಂದು ಹುಬ್ಬಳ್ಳಿ ಧಾರವಾಡ ಸೆಂಟ್ರಲ್‌ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರು ಆಗ್ರಹಿಸಿದ್ದಾರೆ.

ಧಾರವಾಡ ಲೋಕಸಭೆಗೆ ರಜತ್‌ ಉಳ್ಳಾಗಡ್ಡಿಮಠ ಅವರಿಗೆ ಟಿಕೆಟ್‌ ನೀಡಬೇಕು ಹಾಗೂ ಅನಿಲಕುಮಾರ್‌ ಪಾಟೀಲ ಅವರಿಗೆ ಎಂ.ಎಲ್‌.ಸಿ ಸ್ಥಾನ ನೀಡಬೇಕೆಂದು ಇತ್ತೀಚೆಗೆ ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಸಭೆಯಲ್ಲಿ ಕೈಮಾಂಡ್‌ಗೆ ಒತ್ತಾಯಿಸಲಾಯಿತು.

ಸಭೆಯಲ್ಲಿ ಮಾತನಾಡಿದ ಹಲವು ಮುಖಂಡರು, ‘ಮುಂಬರುವ ದಿನಗಳಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕಪಾಠ ಕಲಿಸಬೇಕು’ ಎಂದು ಹೇಳಿದರು.

ಈ ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಕಾಂಗ್ರೆಸ್ ಸಮಿತಿಯ ಮಾಜಿ ಅಧ್ಯಕ್ಷರಾದ ಹಿರಿಯ ಮುಖಂಡರಾದ ಶಿವಾ ನಾಯಕ ವಹಿಸಿದ್ದರು. ಹಿರಿಯರಾದ ಪ್ರಫುಲಚಂದ್ರ ರಾಯನಗೌಡರ್ ಹಾಗೂ ರಾಜಾ ದೇಸಾಯಿ ಅವರು ಕಾರ್ಯಕ್ರಮದ ಪ್ರಾಸ್ತಾವಿಕ ಭಾಷಣ ಮಾಡಿದರು.

ಕಾರ್ಯಕ್ರಮದಲ್ಲಿ ಅನಿಲಕುಮಾರ್‌ ಪಾಟೀಲ, ರಜತ್ ಉಳ್ಳಾಗಡ್ಡಿಮಠ, ಶರೀಫ್ ಗರಗದ, ಮಹಾನಗರ ಪಾಲಿಕೆಯ ವಿರೋಧ್ ಪಕ್ಷದ ನಾಯಕಿ  ಸುವರ್ಣಾ ಕಲಕುಂಟ್ಲ, ಪಾಲಿಕೆ ಸದಸ್ಯರಾದ ಪ್ರಕಾಶ್ ಕುರಹಟ್ಟಿ, ಸಂದಿಲ್ ಕುಮಾರ, ಆರಿಫ್ ಭದ್ರಾಪೂರ್, ಇಕ್ಬಾಲ್ ನವಲೂರ, ಚೇತನ್ ಹಿರೇಕೆರೂರ, ಸಂತೋಷ್ ಚಲವಾದಿ, ಶಿವಕುಮಾರ ರಾಯನಗೌಡರ, ಮಾಜಿ ಪಾಲಿಕೆ ಸದಸ್ಯರಾದ ಮೋಹನ್ ಹಿರೇಮನಿ, ಪೀರಾಜಿ ಖಂಡೆಕರ್, ಎಂ.ಎಸ್.ಪಾಟೀಲ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT