ಭಾನುವಾರ, ಏಪ್ರಿಲ್ 2, 2023
32 °C

ಬಿಜೆಪಿ ಸರ್ಕಾರದ ಅಭಿವೃದ್ಧಿ ಮರೆಮಾಚಲು ಭ್ರಷ್ಟಾಚಾರದ ಆರೋಪ: ಶಾಸಕ ಶೆಟ್ಟರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: 'ಬಿಜೆಪಿ ಸರ್ಕಾರ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಮರೆಮಾಚಲು, ಕಾಂಗ್ರೆಸ್ ನಾಯಕರು ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದಾರೆ' ಎಂದು ಶಾಸಕ ಜಗದೀಶ ಶೆಟ್ಟರ್ ಹೇಳಿದರು.

'ಬಿಜೆಪಿ ಬಿ ರಿಪೋರ್ಟ್ ಸರ್ಕಾರ' ಎನ್ನುವ ಡಿ.ಕೆ.‌ ಶಿವಕುಮಾರ್ ಹೇಳಿಕೆ ನಗರದಲ್ಲಿ ಶುಕ್ರವಾರ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, 'ಈಗಾಗಲೇ ಕಾಂಗ್ರೆಸ್ ಐಸಿಯುನಲ್ಲಿದೆ. ಕೀಳುಮಟ್ಟದ ಪ್ರಚಾರದಿಂದ ಪಕ್ಷಕ್ಕೆ ಜೀವ ಬರುವುದಿಲ್ಲ. ಸದ್ಯದಲ್ಲಿಯೇ ಅದರ ಜೀವ ಹೋಗಲಿದೆ' ಎಂದರು.

'ನನ್ನ ಕಂಡರೆ ಬಿಜೆಪಿಗೆ ಭಯ' ಎನ್ನುವ ಸಿದ್ದರಾಮಯ್ಯರ ಹೇಳಿಕೆಗೆ, 'ಅವರನ್ನು ಕಂಡರೆ ಹುಡುಗರೇ ಹೆದರಲ್ಲ. ಹೀಗಿದ್ದಾಗ ಬಿಜೆಪಿ ಯಾಕೆ ಹೆದರುತ್ತದೆ. ಅವರು ಮಾಡಿರುವ ಭ್ರಷ್ಟಾಚಾರದ ಒಂದಾದರೂ ಆರೋಪವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದಿದ್ದಾರೆಯೇ?  ಆರ್.ಎಸ್.ಎಸ್. ಬಗ್ಗೆ ಆರೋಪ ಮಾಡುವುದು ಸರಿಯಲ್ಲ. ದೇಶಕ್ಕಾಗಿ ಹೋರಾಡುವ ಸಂಘಟನೆ ಅದಾಗಿದ್ದು, ಅದರ ವಿರುದ್ಧ ಮಾತನಾಡುವವರ ವ್ಯಕ್ತಿತ್ವವೇ ಕಡಿಮೆಯಾಗಲಿದೆ' ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು