ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡಿಕೆ, ವಿಎಂಸಿಎ ಶುಭಾರಂಭ

ಕ್ರಿಕೆಟ್‌: ವೀರಜ್‌ ಹಾವೇರಿ ಶತಕ, ಶ್ರೀಕೇಶ್‌ ಶೆಟ್ಟಿ ಆರು ವಿಕೆಟ್‌
Last Updated 13 ಫೆಬ್ರುವರಿ 2021, 14:39 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದ ಬಿಡಿಕೆ ಸ್ಪೋರ್ಟ್ಸ್ ಫೌಂಡೇಷನ್‌ ಮತ್ತು ಧಾರವಾಡದ ವಸಂತ ಮುರ್ಡೇಶ್ವರ ಕ್ರಿಕೆಟ್‌ ಅಕಾಡೆಮಿ (ವಿಎಂಸಿಎ) ತಂಡಗಳು ಶನಿವಾರ ಆರಂಭವಾದ 16 ವರ್ಷದ ಒಳಗಿನವರ ‘ಪಿಆರ್‌ಎನ್‌’ ಟ್ರೋಫಿ ಅಂತರ ಕ್ಯಾಂಪ್‌ಗಳ ಆಹ್ವಾನಿತ ಕ್ರಿಕೆಟ್ ಟೂರ್ನಿಯಲ್ಲಿ ಶುಭಾರಂಭ ಮಾಡಿವೆ.

ಹುಬ್ಬಳ್ಳಿ ಕ್ರಿಕೆಟ್‌ ಅಕಾಡೆಮಿ (ಎಚ್‌ಸಿಎ) ರೈಲ್ವೆ ಇನ್‌ಸ್ಟಿಟ್ಯೂಟ್‌ ಆಫ್‌ ಸ್ಪೋರ್ಟ್ಸ್‌ ಮೈದಾನದಲ್ಲಿ ಆಯೋಜಿಸಿರುವ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಬಿಡಿಕೆ 30 ಓವರ್‌ಗಳಲ್ಲಿ ಎರಡು ವಿಕೆಟ್‌ ಕಳೆದುಕೊಂಡು 218 ರನ್‌ ಕಲೆಹಾಕಿತು. ವೀರಜ್‌ ಹಾವೇರಿ (100, 84ಎಸೆತ) ಶತಕ ಮತ್ತು ವೃಷಭ ಪಾಟೀಲ (56, 45ಎಸೆತ) ಅರ್ಧಶತಕದ ಬ್ಯಾಟಿಂಗ್‌ ಇದಕ್ಕೆ ಕಾರಣವಾಯಿತು. ವೀರಜ್‌ 11 ಬೌಂಡರಿ ಮತ್ತು ಎರಡು ಸಿಕ್ಸರ್‌ಗಳನ್ನು ಸಿಡಿಸಿದರು. ಎದುರಾಳಿ ತೇಜಲ್‌ ಶಿರಗುಪ್ಪಿ ಅಕಾಡೆಮಿ 22 ಓವರ್‌ಗಳಲ್ಲಿ 87 ರನ್‌ ಗಳಿಸಿ ಆಲೌಟ್‌ ಆಯಿತು. ಬಿಡಿಕೆ ತಂಡದ ಬಿ. ಭುವನ ನಾಲ್ಕು, ಪ್ರಭಂಜನ್‌ ಎರಡು ವಿಕೆಟ್‌ ಕಬಳಿಸಿದರು.

ದಿನದ ಇನ್ನೊಂದು ಪಂದ್ಯದಲ್ಲಿ ವಿಎಂಸಿಎ ತಂಡ 30 ಓವರ್‌ಗಳಲ್ಲಿ ಎಂಟು ವಿಕೆಟ್‌ ಕಳೆದುಕೊಂಡು 145 ರನ್‌ ಗಳಿಸಿತು. ನಾಗರಾಜ ಮಾದರ (24) ಗರಿಷ್ಠ ಸ್ಕೋರರ್‌ ಎನಿಸಿದರು. ಎದುರಾಳಿ ಚಾಂಪಿಯನ್ಸ್‌ ನೆಟ್‌ ತಂಡ 12.2 ಓವರ್‌ಗಳಲ್ಲಿ 34 ರನ್ ಗಳಿಸಿ ಸರ್ವಪತನ ಕಂಡಿತು. ವಿಎಂಸಿಎ ತಂಡದ ಶ್ರೀಕೇಶ್‌ ಶೆಟ್ಟಿ ಆರು ಓವರ್‌ ಬೌಲಿಂಗ್‌ನಲ್ಲಿ ಆರು ವಿಕೆಟ್‌ಗಳನ್ನು ಕಬಳಿಸಿ ಪಂದ್ಯ ಶ್ರೇಷ್ಠರಾದರು.

ಚಾಲನೆ: ನೈರುತ್ಯ ರೈಲ್ವೆಯ ಮುಖ್ಯ ಸಿಬ್ಬಂದಿ ಅಧಿಕಾರಿ ಶುಜಾ ಮಹಮ್ಮೂದ್‌ ಬ್ಯಾಟಿಂಗ್ ಮಾಡುವ ಮೂಲಕ ಟೂರ್ನಿಗೆ ಚಾಲನೆ ನೀಡಿದರು. ಎಚ್‌ಸಿಎ ಸಹಾಯಕ ಕಾರ್ಯದರ್ಶಿ ಡಿ.ಆರ್‌. ಕುಲಕರ್ಣಿ, ಸಲಹೆಗಾರ ವಿಜಯ ಕಾಮತ್‌, ಕಾರ್ಯದರ್ಶಿ ವಿನ್ಸೆಂಟ್‌ ಬಾಬುರಾವ್‌, ಕೋಚ್‌ ಬಾಬುರಾಯನ್‌, ಕಾರ್ಯಕಾರಿ ಸಮಿತಿ ಸದಸ್ಯ ಪಾಂಡುರಂಗ ನಾಯ್ಡು, ನಿಜಾಮುದ್ದೀನ್‌ ಇದ್ದರು.

ಭಾನುವಾರದ ಪಂದ್ಯಗಳು: ಬಿಡಿಕೆ ಹುಬ್ಬಳ್ಳಿ–ಫಸ್ಟ್ ಕ್ರಿಕೆಟ್‌ ಅಕಾಡೆಮಿ ಧಾರವಾಡ (ಬೆ. 8.30) ಮತ್ತು ಹುಬ್ಬಳ್ಳಿ ಕೋಲ್ಟ್ಸ್‌–ತೇಜಲ್‌ ಶಿರಗುಪ್ಪಿ ಅಕಾಡೆಮಿ, ಹುಬ್ಬಳ್ಳಿ (ಮ. 1.20).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT