ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ತಿ ತೆರಿಗೆ ಕಟ್ಟುವ ಅವಧಿ ವಿಸ್ತರಿಸಲಿಸಲು ಆಗ್ರಹ

Last Updated 21 ಏಪ್ರಿಲ್ 2021, 5:43 IST
ಅಕ್ಷರ ಗಾತ್ರ

ದಾವಣಗೆರೆ: ಆಸ್ತಿ ತೆರಿಗೆ ಕಟ್ಟಲು ಹೊಸ ಪದ್ಧತಿ ಜಾರಿಗೆ ತರಲಾಗಿದೆ. ಹಾಗಾಗಿ ಎಲ್ಲವೂ ಆನ್‌ಲೈನ್‌ ಎಂಟ್ರಿ ಆಗಬೇಕು. ಕಾಂಗ್ರೆಸ್‌ನ ವಿರೋಧದ ನಡುವೆ ಅವಸರದಲ್ಲಿ ಈ ಪದ್ಧತಿಯನ್ನು ಜಾರಿಗೆ ತರಲಾಗಿದೆ. ಆದರೆ ತೆರಿಗೆ ಕಟ್ಟಲು ಬೇಕಾದ ವ್ಯವಸ್ಥೆ ಮಾಡಿಕೊಂಡಿಲ್ಲ. ಹಾಗಾಗಿ ರಿಯಾಯಿತಿಯಲ್ಲಿ ಕಟ್ಟುವ ಅವಧಿ ಮತ್ತು ದಂಡ ರಹಿತವಾಗಿ ತೆರಿಗೆ ಕಟ್ಟುವ ಅವಧಿ ವಿಸ್ತರಿಸಬೇಕು ಎಂದು ಪಾಲಿಕೆ ವಿರೋಧ ಪಕ್ಷದ ನಾಯಕ ಎ. ನಾಗರಾಜ್‌ ಒತ್ತಾಯಿಸಿದ್ದಾರೆ.

ಏಪ್ರಿಲ್‌ 30ರ ಒಳಗೆ ತೆರಿಗೆ ಕಟ್ಟಿದರೆ ಶೇ 5 ರಿಯಾಯಿತಿ ನೀಡಲಾಗುತ್ತಿತ್ತು. ಮೇ ಮತ್ತು ಜೂನ್‌ನಲ್ಲಿ ಕಟ್ಟಿದರೆ ದಂಡ ಇರಲಿಲ್ಲ. ಈ ಬಾರಿ ಆನ್‌ಲೈನ್‌ ಎಂಟ್ರಿ ಪದ್ಧತಿ ಅನುಷ್ಠಾನಕ್ಕೆ ಬಾರದೇ ಇರುವುದರಿಂದ ಜನರಿಗೆ ಕಂದಾಯ ಪಾವತಿ ಮಾಡಲು ಆಗುತ್ತಿಲ್ಲ. ಹಾಗಾಗಿ ಶೇ 5 ರಿಯಾಯಿತಿಯಲ್ಲಿ ಕಂದಾಯ ಕಟ್ಟುವುದನ್ನು ಮೇ ಅಂತ್ಯದವರೆಗೆ ವಿಸ್ತರಿಸಬೇಕು. ದಂಡರಹಿತವಾಗಿ ಕಂದಾಯ ಪಾವತಿಸಲು ಮತ್ತೆ ಮೂರು ತಿಂಗಳು ಅಂದರೆ ಸೆಪ್ಟೆಂಬರ್‌ ಅಂತ್ಯದವರೆಗೆ ವಿಸ್ತರಿಸಬೇಕು ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT