ಹುಬ್ಬಳ್ಳಿ: ‘ಕೃತಕ ಬುದ್ದಿಮತ್ತೆ (ಎ.ಐ) ತಂತ್ರಜ್ಞಾನವನ್ನು ವಿವೇಕ ಬಳಸಿ ಉಪಯೋಗಿಸಬೇಕು. ನಮ್ಮ ಮೌಲ್ಯಗಳು ಹಾಗೂ ತತ್ವ– ಸಿದ್ಧಾಂತಗಳಿಗೆ ಧಕ್ಕೆ ಬಾರದಂತೆ ಬಳಸಬೇಕು’ ಎಂದು ವಿಶ್ವವಿದ್ಯಾಲಯ ಅನುದಾನ ಆಯೋಗದ (ಯು.ಜಿ.ಸಿ) ಕಾರ್ಯದರ್ಶಿ ಮನೀಷ ಜೋಶಿ ಹೇಳಿದರು.

ಇಲ್ಲಿನ ವಿದ್ಯಾನಗರದ ಕೆಎಲ್ಇ ಸಂಸ್ಥೆಯ ಬಿ.ವಿ.ಬಿ ಕ್ಯಾಂಪಸ್ನಲ್ಲಿ ಎ.ಐ ಸಂಶೋಧನಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.

ಎ.ಐ ತಂತ್ರಜ್ಞಾನವು ಇಂದು ಹಲವು ರಂಗಗಳಲ್ಲಿ ವಿಸ್ತಾರಗೊಂಡಿದೆ. ಎ.ಐ ತಂತ್ರಜ್ಞಾನದ ಭಾಗವಾಗಿರುವ ಚಾಟ್ ಜಿ.ಪಿ.ಟಿ.ಯನ್ನು ಅಭಿವೃದ್ಧಿಪಡಿಸಲಾಗಿದೆ. ಈ ಮೊದಲು ಭಾಷಾ ಆಧಾರಿತ ಮಾಡ್ಯೂಲ್ಗಳನ್ನು (ಎಲ್.ಎಲ್.ಎಂ) ಅಭಿವೃದ್ಧಿಪಡಿಸಲಾಗಿತ್ತು. ಈಗ ಸಂವೇದನಾ ಆಧಾರಿತ ಮಾಡ್ಯೂಲ್ಗಳನ್ನು ಅಭಿವೃದ್ಧಿಪಡಿಸಲಾಗಿದೆ. ಇವುಗಳ ಮೂಲಕ ಚಾಟ್ ಜಿ.ಪಿ.ಟಿ ಕೂಡ ಮನುಷ್ಯರಂತೆ ಸುವಾಸನೆಯನ್ನು ಗ್ರಹಿಸಬಲ್ಲದು, ಆಹಾರದ ರುಚಿ ಆಸ್ವಾದಿಸಬಹುದು. ದೃಶ್ಯ ಹಾಗೂ ಧ್ವನಿಯಂತೆ ಸುವಾಸನೆಯನ್ನು ಡಿಜಿಟಲ್ ಅವತಾರದಲ್ಲಿ ಮಾರ್ಪಡಿಸಿ ಇಡಬಹುದಾದಷ್ಟು ತಂತ್ರಜ್ಞಾನ ಮುಂದುವರಿದಿದೆ. ಹುಬ್ಬಳ್ಳಿ–ಧಾರವಾಡದ ಪ್ರಸಿದ್ಧ ಮಾವಿನ ಹಣ್ಣಿನ ಸುವಾಸನೆಯನ್ನು ಎ.ಐ ಮೂಲಕ ಗ್ರಹಿಸಬಹುದಾಗಿದೆ ಎಂದು ತಿಳಿಸಿದರು.

‘ಸಾಂಪ್ರದಾಯಿಕ ಯೋಚನಾ ಲಹರಿಯಿಂದ ಭಿನ್ನವಾಗಿ, ಹೊಸ ರೀತಿಯಲ್ಲಿ ಯೋಚಿಸಬಲ್ಲವರಿಗೆ ಎ.ಐ ತಂತ್ರಜ್ಞಾನದಲ್ಲಿ ಸಾಕಷ್ಟು ಅವಕಾಶಗಳಿವೆ. ಎ.ಐ ತಂತ್ರಜ್ಞಾನ ಸಾಕಷ್ಟು ವೇಗದಲ್ಲಿ ಅಭಿವೃದ್ಧಿಯಾಗುತ್ತಿದೆ. ಇದನ್ನು ಅತ್ಯಂತ ಎಚ್ಚರಿಕೆಯಿಂದ ಬಳಸಬೇಕಾಗಿದೆ’ ಎಂದು ಎಚ್ಚರಿಕೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಮಾತನಾಡಿ, ‘ಬಿವಿಬಿ ಕ್ಯಾಂಪಸ್ನಲ್ಲಿ ₹ 24 ಕೋಟಿ ವೆಚ್ಚದಲ್ಲಿ ಎ.ಐ. ಸಂಶೋಧನಾ ಕೇಂದ್ರವನ್ನು ನಿರ್ಮಿಸಲಾಗಿದೆ. ಅತ್ಯಂತ ಅತ್ಯಾಧುನಿಕ ಸಾಧನಗಳನ್ನು ಬಳಸಲಾಗಿದೆ. ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕು’ ಎಂದರು.

ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ಪ್ರೊ–ಕುಲಪತಿ ಅಶೋಕ ಷಟ್ಟರ್ ಮಾತನಾಡಿ, ‘ಮುಂಬರುವ ದಿನಗಳಲ್ಲಿ ಎ.ಐ ತಂತ್ರಜ್ಞಾನವು ಸಾಮಾಜಿಕವಾಗಿಯೂ ಬದಲಾವಣೆ ತರಲಿದೆ’ ಎಂದು ನುಡಿದರು.

ವಿಶ್ವವಿದ್ಯಾಲಯದ ಕುಲಪತಿ ಪ್ರಕಾಶ ತಿವಾರಿ ಮಾತನಾಡಿದರು. ಡೀನ್ ಮೀನಾ ಉಪಸ್ಥಿತರಿದ್ದರು. ಬಸವರಾಜ ಅನಾಮಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.