ಧಾರವಾಡ: ಕೊಲೆ ಯತ್ನ ಪ್ರಕರಣದಲ್ಲಿ ಮೆಹಬೂಬನಗರ, ದಾದಾ ಖಲಂದರ್, ಖುರ್ಷಿದ ಅಹ್ಮದ್, ಅಕೀಲ್, ಅಬ್ದುಲ್ ಸಮೀರ ಹಾಗೂ ಚಾಂದಸಾಬ ಎಂಬವರಿಗೆ ಎಂಟು ವರ್ಷ ಜೈಲು ಹಾಗೂ ತಲಾ ₹ 14 ಸಾವಿರ ದಂಡವನ್ನು ಸೋಮವಾರ ನಾಲ್ಕನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ವಿಧಿಸಿದೆ.

ನ್ಯಾಯಾಧೀಶೆ ಪೂರ್ಣಿಮಾ ಪೈ ಅವರು ಆದೇಶ ನೀಡಿದ್ದಾರೆ. ದಂಡದ ಹಣದಲ್ಲಿ ಪ್ರಕರಣದ ಗಾಯಾಳುವಿಗೆ ₹ 50 ಸಾವಿರ ಪರಿಹಾರ ನೀಡಲು ಆದೇಶಿಸಿದ್ದಾರೆ.

ಏನಿದು ಪ್ರಕರಣ: 2017 ಜೂನ್ 6ರಂದು ಹಲ್ಲೆ ಪ್ರಕರಣ ನಡೆದಿತ್ತು. ಧಾರವಾಡ ದೊಡ್ಡಮನಿ ಚಾಳದ ಮನೆಯ ಮುಂದೆ ಮೆಹಬೂಬ ಅಲಿ ದೊಡಮನಿ ಎಂಬವರಿಗೆ ಕೋಲಿನಿಂದ ತಲೆಗೆ ಹೊಡೆದು ಗಾಯಗೊಳಿಸಿ, ಕೊಲೆಗೆ ಯತ್ನ ನಡೆಸಲಾಗಿತ್ತು. ಅವರ ಪುತ್ರ ರೆಹಮಾನಸಾಬ ದೊಡಮನಿ ಅವರಿಗೂ ಹೊಡೆದು ಗಾಯಗೊಳಿಸಲಾಗಿತ್ತು. ಮೆಹಬೂಬ ಅಲಿ ಅವರ ಪತ್ನಿಯನ್ನೂ ಎಳೆದಾಡಲಾಗಿತ್ತು.

ಉಪನಗರ ಪೊಲೀಸ್ ಠಾಣೆಯಲ್ಲಿ ಮೆಹಬೂಬ ಅಲಿ ಅವರ ಪತ್ನಿ ದೂರು ದಾಖಲಿಸಿದ್ದರು. ಆಗಿನ ಇನ್ಸ್ಪೆಕ್ಟರ್ ಆರ್.ಎಚ್. ಭಾಗವಾನ್ ಮತ್ತು ಮೋತಿಲಾಲ ಆರ್. ಪವಾರ ಅವರು ತನಿಖೆ ನಡೆಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಶಾಂತ ಎಸ್. ತೊರಗಲ್ ವಾದ ಮಂಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.