ಧಾರವಾಡ: ನಗರದ ಹಲವೆಡೆ (ರಸ್ತೆ ಬದಿ, ಮಾರುಕಟ್ಟೆ, ಪಾದಚಾರಿ ಮಾರ್ಗ...) ವಾಹನಗಳನ್ನು ಅಡ್ಡಾದಿಡ್ಡಿ ನಿಲುಗಡೆ ಮಾಡುವುದು ಓಡಾಟಕ್ಕೆ ತಾಪತ್ರಯವಾಗಿ ಪರಿಣಮಿಸಿದೆ. ವಾಹನ ನಿಲುಗಡೆ ನಿಷೇಧ ಫಲಕದ ಬಳಿಯೇ ವಾಹನಗಳನ್ನು ನಿಲ್ಲಿಸುತ್ತಾರೆ.

ಸುಭಾಷ ರಸ್ತೆ, ವಿವೇಕಾನಂದ ವೃತ್ತ, ಟಿಕಾರೆ ರಸ್ತೆ, ಮಹಾನಗರ ಪಾಲಿಕೆ ಕಚೇರಿ ವೃತ್ತ, ಸಿಬಿಟಿ (ನಗರ ಬಸ್ ನಿಲ್ದಾಣ) ಭಾಗದಲ್ಲಿ ವಾಹನ ನಿಲುಗಡೆ (ಪಾರ್ಕಿಂಗ್) ಸಮಸ್ಯೆ ಇದೆ. ಕೆಲವೆಡೆ ಪಾದಚಾರಿ ಮಾರ್ಗದಲ್ಲೇ ವಾಹನಗಳನ್ನು ನಿಲ್ಲಿಸುವ ಪರಿಪಾಠ ಇದೆ. ಇಂಥ ಕಡೆ ಪಾದಚಾರಿಗಳು ಓಡಾಡಲು ಪ್ರಯಾಸ ಪಡಬೇಕಾದ ಸ್ಥಿತಿ ಇದೆ.

ರಸ್ತೆಯ ಯಾವ ಬದಿಯಲ್ಲಿ ಯಾವ ದಿನ ವಾಹನ ನಿಲುಗಡೆ ಮಾಡಬೇಕು ಎಂದು ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ. ಆದರೆ, ಸೂಚನೆ ಫಲಕಕ್ಕೆ ಸೀಮಿತವಾಗಿದೆ. ಇಕ್ಕೆಲಗಳಲ್ಲೂ ವಾಹನಗಳನ್ನು ನಿಲ್ಲಿಸುತ್ತಾರೆ.

ಕೆಲವು ರಸ್ತೆ ಬದಿಗಳಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ ಎಂಬ ಫಲಕಗಳನ್ನು ಅಳವಡಿಸಲಾಗಿದೆ. ಈ ಫಲಕಗಳು ಲೆಕ್ಕಕ್ಕೆ ಇಲ್ಲದಂತಾಗಿವೆ. ವಾಹನ ನಿಲುಗಡೆ ನಿರ್ವಹಣೆ ಸವಾಲಾಗಿದೆ.

‘ಕೆಲವು ಕಡೆ ವಾಹನ ನಿಲುಗಡೆ ನಿಗದಿಪಡಿಸಿರುವ ಶುಲ್ಕಕ್ಕಿಂತ ಹೆಚ್ಚು ಹಣ ವಸೂಲಿ ಮಾಡುತ್ತಾರೆ. ಹೀಗಾಗಿ, ಹಲವರು ರಸ್ತೆ ಬದಿಯಲ್ಲೇ ವಾಹನಗಳನ್ನು ನಿಲ್ಲಿಸುತ್ತಾರೆ. ಇದರಿಂದಾಗಿ ಸಂಚಾರಕ್ಕೆ ತೊಂದರೆಯಾಗಿದೆ’ ಎಂದು ವಾಹನ ಸವಾರ ಶಿವಕುಮಾರ ಜಿ. ‘ಪ್ರಜಾವಾಣಿ’ಗೆ ತಿಳಿಸಿದರು.

ಗಾಂಧಿ ಚೌಕ, ಭೂಸಪ್ಪ ಚೌಕ, ಶಿವಾಜಿ ವೃತ್ತ, ರೀಗಲ್ ಟಾಕೀಸ್ ವೃತ್ತ, ಹಳೇ ಬಸ್ ನಿಲ್ದಾಣ, ಸಂಗಮ ವೃತ್ತ, ರೈಲು ನಿಲ್ದಾಣ ರಸ್ತೆ, ಸಪ್ತಾಪುರ, ಶ್ರೀನಗರ, ವಿಶ್ವಕರ್ಮ ವೃತ್ತ, ತಹಶೀಲ್ದಾರ್ ಕಚೇರಿ ರಸ್ತೆಗಳಲ್ಲಿ ಅಡ್ಡಾದಿಡ್ಡಿ ವಾಹನ ನಿಲ್ಲಿಸುವುದರಿಂದ ಸಾರ್ವಜನಿಕರು ನಿತ್ಯ ಕಿರಿಕಿರಿ ಅನುಭವಿಸುವಂತಾಗಿದೆ.

ಸೂಪರ್ ಮಾರುಕಟ್ಟೆ ಪ್ರದೇಶದಲ್ಲಿ ವಾಹನಗಳನ್ನು ರಸ್ತೆ ಭಾಗದಲ್ಲೇ ನಿಲ್ಲಿಸುತ್ತಾರೆ. ಜನದಟ್ಟಣೆಯ ಈ ರಸ್ತೆಯಲ್ಲಿ ತಲೆ ಮೇಲೆ ಚೀಲ ಹೊತ್ತವರು, ಕೈಯಲ್ಲಿ ದೊಡ್ಡ ಚೀಲ ಹಿಡಿದವರು ಈ ವಾಹನಗಳ ನಡುವೆ ಓಡಾಡಲು ಪಡಿಪಾಟಲು ಪಡಬೇಕು.

‘ಸುಭಾಷ ರಸ್ತೆ ಸಹಿತ ಹಲವಡೆ ‘ಪೇ ಪಾರ್ಕಿಂಗ್’ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಹೀಗಾಗಿ, ಹಲವು ಮಾರುಕಟ್ಟೆ ಭಾಗದಲ್ಲಿ ವಾಹನ ನಿಲ್ಲಿಸುತ್ತಾರೆ. ಸಂಚಾರ ದಟ್ಟಣೆ ಜೊತೆಗೆ ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸುವುದರಿಂದ ವ್ಯಾಪಾರಕ್ಕೂ ತೊಂದರೆಯಾಗುತ್ತದೆ’ ಎಂದು ನೆಹರೂ ಮಾರುಕಟ್ಟೆಯ ವ್ಯಾಪಾರಿಯೊಬ್ಬರು ಹೇಳುತ್ತಾರೆ.

ಬಿಆರ್ಟಿಎಸ್ ಮಾರ್ಗದ ಪಕ್ಕದ ರಸ್ತೆಯಲ್ಲಿ ಜುಬಿಲಿ ವೃತ್ತದಿಂದ ಗಾಂಧಿನಗರದವರೆಗೆ ರಸ್ತೆ ಬದಿ ಅಲ್ಲಲ್ಲಿ ವಾಹನಗಳನ್ನು ನಿಲುಗಡೆ ಮಾಡುತ್ತಾರೆ. ಟ್ರಾಫಿಕ್ ಗ್ರೀನ್ ಸಿಗ್ನಲ್ ಬಂದ ಕೂಡಲೇ ಹತ್ತಾರು ವಾಹನ ಸವಾರರು ಒಮ್ಮೆಲೆ ವೇಗವಾಗಿ ಬರುತ್ತಿದ್ದು ಕೆಲವಡೆ ಅಪಘಾತಗಳು ಸಂಭವಿಸುತ್ತಿರುವ ನಿದರ್ಶನಗಳೂ ಇವೆ.

ನಗರದ ರಸ್ತೆಗಳಲ್ಲಿ ವಾಹನಗಳ ಸಂಚಾರ ದಟ್ಟಣೆ ಹೆಚ್ಚುತ್ತಿದೆ. ಮಹಾನಗರ ಪಾಲಿಕೆ ಹಾಗೂ ಸಂಚಾರ ಪೋಲಿಸರು ಜಂಟಿಯಾಗಿ ಸಮೀಕ್ಷೆ ನಡೆಸಿ ಪಾರ್ಕಿಂಗ್ ಸುವ್ಯವಸ್ಥೆಗೆ ಕ್ರಮವಹಿಸಬೇಕು
ಉದಯ ಯಂಡಿಗೇರಿ ವರ್ತಕ ಸೂಪರ್ ಮಾರ್ಕೆಟ್

‘ನೋ ಪಾರ್ಕಿಂಗ್’ ಇರುವಲ್ಲಿ ಹಾಗೂ ಎಲ್ಲೆಂದರದಲ್ಲಿ ವಾಹನ ನಿಲ್ಲಿಸದಂತೆ ಬಿಗಿ ಕ್ರಮ ವಹಿಸಲಾಗುವುದು. ಹೊಸದಾಗಿ 200 ವೀಲ್ ಕ್ಲಾಂಪ್ಗಳನ್ನು ವಿವಿಧ ಠಾಣೆಗಳಿಗೆ ನೀಡಿದ್ದೇವೆ
ಸಿ.ಆರ್.ರವೀಶ್ ಡಿಸಿಪಿ ಸಂಚಾರ ವಿಭಾಗ

ಪಾದಚಾರಿ ಮಾರ್ಗ ಅತಿಕ್ರಮಣ ಕೆಲ ರಸ್ತೆಗಳಲ್ಲಿ ಪಾದಚಾರಿ ಮಾರ್ಗ ಪಾರ್ಕಿಂಗ್ ಜಾಗದಲ್ಲಿ ಅಂಗಡಿ ಮಳಿಗೆಗಳು ಫಲಕ ಇಡುವುದು ವಸ್ತುಗಳನ್ನು ಇಡುತ್ತಿದ್ಧಾರೆ. ಕೆಲವು ದೊಡ್ಡ ವಾಣಿಜ್ಯ ಮಳಿಗೆಗಳಲ್ಲಿ ಪಾರ್ಕಿಂಗ್ ಸೌಲಭ್ಯ ಇದ್ದರೂ ಶುಲ್ಕ ವಸೂಲಿ ಮಾಡುತ್ತಾರೆ. ಹೀಗಾಗಿ ಹಲವು ಗ್ರಾಹಕರು ರಸ್ತೆ ಬದಿ ವಾಹನ ನಿಲ್ಲಿಸಿ ಮಳಿಗೆಗೆ ಹೋಗುತ್ತಾರೆ. ಕೆಲವು ಮಳಿಗೆಗಳಲ್ಲಿ ಪಾರ್ಕಿಂಗ್ಗೆ ಜಾಗವೇ ಇಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.