ಧಾರವಾಡ: ಕೃಷಿ ವಿಶ್ವವಿದ್ಯಾಲಯದ ರೈತ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಆಯೋಜಿಸಿರುವ ಕೃಷಿ ಮೇಳದಲ್ಲಿ ವಿಸ್ಮಯಕಾರಿ ಕೀಟ ಪ್ರಪಂಚ ಪ್ರದರ್ಶನದಲ್ಲಿ ವಿವಿಧ ಕೀಟಗಳ ಜೀವನ ಚಕ್ರ, ವೈವಿಧ್ಯಗಳನ್ನು ಅನಾವರಣಗೊಳಿಸಲಾಗಿದೆ. ವಿವಿಧ ಕೀಟ ಬಳಸಿ ಸಿದ್ಧಪಡಿಸಿರುವ 16ಕ್ಕೂ ಹೆಚ್ಚು ಖಾದ್ಯಗಳನ್ನು ಸಿದ್ಧಪಡಿಸಿ ಪ್ರದರ್ಶಿಸಲಾಗಿದೆ.

ವಿಶ್ವವಿದ್ಯಾಲಯದ ಕೀಟ ಶಾಸ್ತ್ರ ಅಧ್ಯಯನ ವಿಭಾಗದ ವತಿಯಿಂದ ಪ್ರದರ್ಶನ ಏರ್ಪಡಿಸಲಾಗಿದೆ. ರೇಷ್ಮೆಕೋಶ ಸೂಪ್, ಕಪ್ಪು ಸೈನಿಕ ನೋಣದ ಸೂಪ್, ಮಿಡತೆ ಹಾಗೂ ಶಿವನ ಕುದುರೆ–65, ಕೀಟ ಮಿಶ್ರಣ ಟಿಕ್ಕ, ದುಂಬಿಯ ಡೈ, ರೇಷ್ಮೆ ಕೋಶದ ಟಿಕ್ಕಾ, ರೇಷ್ಮೆ ಕೋಶದ ಕಟ್ಲೆಟ್, ಕಪ್ಪು ಸೈನಿಕ ನೋಣದ ಮಸಾಲ, ಮಿಶ್ರ ಕೀಟಗಳ ಡೈ, ಮಿಡತೆಯ ವೈ, ಸ್ಯಾಂಡ್ರಿಚ್, ರೇಷ್ಮೆಕೋಶ ಡೈ, ಸಿಕಾಡ ಡೈ, ಮಿಡತೆಯ ಬರ್ಗರ್, ರೈಸೋ ಡೈ ಮೊದಲಾದವುಗಳು ಇವೆ.

‘ಚೀನಾ, ಥಾಯ್ಲೆಂಡ್ ಮೊದಲಾದ ದೇಶಗಳಲ್ಲಿ ಈ ಭಕ್ಷ್ಯಗಳನ್ನು ಸೇವಿಸುತ್ತಾರೆ. ಭಾರತದಲ್ಲಿ ಕೆಲವು ಪ್ರದೇಶದಲ್ಲಿ ಕೆಂಪು ಇರುವೆಯ ಫ್ರೈ ಸೇವಿಸುತ್ತಾರೆ' ಎಂದು ಕೀಟಶಾಸ್ತ್ರ ಅಧ್ಯಯನ ವಿಭಾಗದ ವಿದ್ಯಾರ್ಥಿನಿ ಕಾವ್ಯ ’ಪ್ರಜಾವಾಣಿ‘ಗೆ ತಿಳಿಸಿದರು.

ಕೀಟಗಳ ಬೆಳವಣಿಗೆ, ರೂಪಾಂತರ, ಕೀಟಗಳ ಹುಟ್ಟು, ಸಾವು, ಕೀಟಗಳ ಪ್ರಾಮುಖ್ಯ, ಅವುಗಳಿಂದಾಗುವ ಹಾನಿ, ಉಪಯೋಗ, ಜೀವಿತಾವಧಿ, ಕೀಟಗಳ ಉಪಯೋಗಗಳ ಬಗ್ಗೆ ವಿವರ ಇದೆ. ಕೀಟಗಳಿಂದಲೇ ತಯಾರಿಸಿರುವ ಕೀಟೋಲಿಂಪಿಕ್ಸ್ ಕ್ರೀಡಾಂಗಣರೋಪದಲ್ಲಿ ವಿನ್ಯಾಸಗೊಳಿಸಲಾಗಿದೆ. ಅದರಲ್ಲಿ ಇದರ ಹಿಂದೆ ಗೆದ್ದಲು ಹುತ್ತ, ಚಿಟ್ಟೆ ಚಿಕಿತ್ಸಾಲಯ ಮಾದರಿ ಇದೆ.

ವೈವಿಧ್ಯಮಯ ಕೀಟಗಳ ಚಿತ್ರ, ಗೊಂಬೆ ಸೇರಿದಂತೆ ವಿವಿಧ ಕಲಾಕೃತಿಗಳು, ಕೀಟಗಳ ಏಣಿ ಆಟ ಸೇರಿದಂತೆ ವಿವಿಧ ಆಟಗಳ ಮಾದರಿ ಮಾಹಿತಿ ಇದೆ.

ಕೀಟಗಳಿಂದ ಅನುಕೂಲಗಳು ಅನಾನುಕೂಲಗಳು ಎರಡೂ ಇವೆ. ರೈತರಿಗೆ ಕೀಟಗಳ ಬಗ್ಗೆ ತಿಳಿವಳಿಕೆ ಇರಬೇಕು. ಕೀಟ ಪ್ರಪಂಚದಲ್ಲಿ ಕೀಟಗಳ ಸಮಗ್ರ ಮಾಹಿತಿ ಇದೆ
ಎಸ್.ಜಿ. ರಾಯರ ಕೀಟಶಾಸ್ತ್ರ ವಿಭಾಗದ ಮುಖ್ಯಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.