ಗುರುವಾರ , ಆಗಸ್ಟ್ 5, 2021
29 °C

ನಿಯಮ ಉಲ್ಲಂಘಿಸಿ ಸಾಕ್ಷ್ಯಚಿತ್ರ: ತನಿಖೆಗೆ ಎಸ್.ಆರ್. ಹಿರೇಮಠ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಹುಬ್ಬಳ್ಳಿ: ಅರಣ್ಯ ಹಾಗೂ ವನ್ಯಜೀವಿ ಸಮೃದ್ಧಿ ಕುರಿತು ಸಾಕ್ಷ್ಯಚಿತ್ರ ಮಾಡಿರುವ ತಂಡವೊಂದು ನಿಯಮಗಳನ್ನು ಉಲ್ಲಂಘಿಸಿದ್ದು, ಅವರ ವಿರುದ್ಧ ತನಿಖೆಯಾಗಬೇಕು ಎಂದು‌ ಸಮಾಜ ಪರಿವರ್ತನ ಸಮುದಾಯದ ಮುಖ್ಯಸ್ಥ ಎಸ್.ಆರ್. ಹಿರೇಮಠ ಆಗ್ರಹಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಕ್ಷ್ಯಚಿತ್ರದ ಸಂಪೂರ್ಣ ಹಕ್ಕು ಕರ್ನಾಟಕ ಅರಣ್ಯ ಇಲಾಖೆಯದ್ದಾಗಿರುತ್ತದೆ.‌ ಆದರೆ ಇದನ್ನು ಸಾಕ್ಷ್ಯಚಿತ್ರ ತಯಾರಿಸಿದ‌ ಶರತ್ ಚಂಪತಿ ಹಾಗೂ ಸಂಗಡಿಗರು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದರು.

ಕೆಎಫ್‌ಡಿ ಹಕ್ಕಾಗಿದ್ದರೂ ಸಾಕ್ಷ್ಯಚಿತ್ರವನ್ನು ಬೇರೆ, ಬೇರೆ ಸಂಸ್ಥೆಗಳ ಹೆಸರಿನಲ್ಲಿ ಫ್ರಾನ್ಸ್ 5, ಸ್ವೀಡನ್‌ನ ಎಸ್‌ವಿಟಿ, ಡಿಸ್ಕವರಿ, ಬಿಬಿಸಿ ಗಳಿಗೆ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿದರು.

ಅಧಿಕಾರಿಗಳೂ ಇದರಲ್ಲಿ‌ ಶಾಮೀಲಾಗಿದ್ದಾರೆ. ಸಾಕ್ಷ್ಯಚಿತ್ರ ಸಂದರ್ಭದಲ್ಲಿ ಸರ್ಕಾರದ ₹ 38 ಕೋಟಿ ವೆಚ್ಚದ ಸೌಲಭ್ಯಗಳನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು