ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲವ್ಯಾಧಿಗೆ ಉಚಿತ ಚಿಕಿತ್ಸೆ ಶಿಬಿರ ಇಂದಿನಿಂದ

Last Updated 20 ನವೆಂಬರ್ 2019, 12:09 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ವಿಶ್ವ ಮೂಲವ್ಯಾಧಿ ದಿನಾಚರಣೆ ಅಂಗವಾಗಿ, ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್ (ಎನ್‌ಐಎಂಎ) ಧಾರವಾಡ ಘಟಕದ ವತಿಯಿಂದ, ನ. 21ರಿಂದ 30ರವರೆಗೆ ಉಚಿತ ಚಿಕಿತ್ಸೆ ಹಾಗೂ ಸಮಾಲೋಚನೆ ಹಮ್ಮಿಕೊಳ್ಳಲಾಗಿದೆ’ ಎಂದು ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಡಾ.ಸಿ. ತ್ಯಾಗರಾಜು ಹೇಳಿದರು.

‘21ರಿಂದ 23ರವರೆಗೆ ಹೊಸೂರಿನಲ್ಲಿರುವ ಡಾ. ಜೇಡರ ಪೈಲ್ಸ್ ಸ್ಪೆಷಾಲಿಟಿ ಸೆಂಟರ್‌ನಲ್ಲಿ, 24ರಿಂದ 26ರವರೆಗೆ ತೊರವಿ ಹಕ್ಕಲದಲ್ಲಿರುವ ರೋಣಿಮಠ ಕ್ಲಿನಿಕ್‌ನಲ್ಲಿ ಹಾಗೂ 27ರಿಂದ 29ರವರೆಗೆ ಸಿದ್ದಾರೂಢ ಮಠದ ಬಳಿ ಇರುವ ಸುರಕ್ಷಾ ಕ್ಲಿನಿಕ್‌ನಲ್ಲಿ ಬೆಳಿಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ತಜ್ಞ ವೈದ್ಯರು ಚಿಕಿತ್ಸೆ ನೀಡಲಿದ್ದಾರೆ. ಅಲ್ಲದೆ, ಆಯುರ್ವೇದ ಕಾಲೇಜಿನಲ್ಲೂ ನ. 30ರವರೆಗೆ ಚಿಕಿತ್ಸೆ ಹಾಗೂ ಸಮಾಲೋಚನೆ ಜರುಗಲಿದೆ’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಅಸೋಸಿಯೇಷನ್‌ ಜಂಟಿ ಕಾರ್ಯದರ್ಶಿ ಡಾ. ಮಾರ್ಕಂಡೇಯ ಜೇಡರ ಮಾತನಾಡಿ, ’ಬದಲಾದ ಜೀವನ ಶೈಲಿಯಿಂದಾಗಿ ಮಲಬದ್ಧತೆ, ಮೂಲವ್ಯಾಧಿಯಂತಹ ಸಮಸ್ಯೆಗಳು ಜನರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಆದರೆ, ಸಂಕೋಚದಿಂದಾಗಿ ಯಾರೂ ಈ ಕುರಿತು ಹೇಳಿಕೊಳ್ಳುತ್ತಿಲ್ಲ. ಹಾಗಾಗಿ, ಈ ಬಗ್ಗೆ ಎನ್‌ಐಎಂಎ ಜಾಗೃತಿ ಮೂಡಿಸುತ್ತಿದೆ’ ಎಂದರು.

ಅಸೋಸಿಯೇಷನ್‌ರಾಜ್ಯ ಸಮಿತಿ ಸದಸ್ಯ ಡಾ. ಪ್ರದೀಪ್ ಕೆ. ದೇಸಾಯಿ ಹಾಗೂ ಡಾ. ಮಹೇಂದ್ರ ರೋಣಿಮಠ ಇದ್ದರು.

ಹೆಚ್ಚಿನ ಮಾಹಿತಿಗೆ ಸಂಪರ್ಕ ಸಂಖ್ಯೆ: 98441 52726, 98862 45072.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT