ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡು ಕೋಳಿಗೆ ಬಲು ನಾಚಿಕೆ

ಹುಬ್ಬಳ್ಳಿ–ಧಾರವಾಡ ಮೆಟ್ರೊ
Last Updated 25 ಆಗಸ್ಟ್ 2019, 19:30 IST
ಅಕ್ಷರ ಗಾತ್ರ

ಹೊರವಲಯದಲ್ಲಿ ಈಚೆಗೆ ಪಕ್ಷಿಗಳ ಚಿತ್ರ ಸೆರೆ ಹಿಡಿಯುತ್ತಿರುವಾಗ ಬೇಲಿಯೊಳಗಿಂದ ಹುಂಜದ ‘ಅಲಾರಾಂ’ ಕೇಳಿಬಂತು. ಸುತ್ತಮುತ್ತ ಕಣ್ಣು ಹಾಯಿಸಿದರೂ ಯಾವುದೇ ಗುಡಿಸಲು, ಮನೆಗಳಿರಲಿಲ್ಲ. ಆಗ ಧ್ವನಿ ಬರುತ್ತಿದ್ದ ದಿಕ್ಕಿನಲ್ಲಿ ಹೆಜ್ಜೆ ಹಾಕಿದೆ. ದೂರದಲ್ಲಿ ನವಿಲುಗಳ ಜೊತೆ ಕೋಳಿ, ಹುಂಜದ ಹಿಂಡು ಮೇಯುತ್ತಿದ್ದ ದೃಶ್ಯ ಕಂಡುಬಂತು. ಧಾರವಾಡ ಜಿಲ್ಲೆಯ ಕಾಡುಪ್ರಾಣಿಗಳ ಅಸ್ತಿತ್ವ, ಉಳಿವಿನಲ್ಲಿ ಕಾಡು ಕೋಳಿಗಳ ಪಾತ್ರ ಪ್ರಮುಖವಾಗಿದೆ. ನಮ್ಮನ್ನೂ ದೂರದಿಂದಲೇ ಗಮನಿಸಿದ್ದ ಕೋಳಿಗಳ ಹಿಂಡು ಕಣ್ಣು ರೆಪ್ಪೆ ಬಡಿಯುವಷ್ಟರಲ್ಲಿ ಪೊದೆ, ಬೇಲಿಗಳ ಮೂಲಕ ದೂರ ಸರಿದಿದ್ದವು. ಭಾರಿ ನಾಚಿಕೆ ಸ್ವಭಾವದ ಇವುಗಳಿಗೆ ಕಾಡುಪ್ರಾಣಿಗಿಂತ ಮನುಷ್ಯರನ್ನು ಕಂಡರೆ ಭಯ ಇದ್ದಂತೆ ಭಾಸವಾಯಿತು.

ಉಷ್ಣವಲಯದ ಪಕ್ಷಿಯಾಗಿರುವ ಇದನ್ನು ಮನುಷ್ಯ ಸಾವಿರಾರು ವರ್ಷಗಳ ಹಿಂದೆಯೇ ಪಳಗಿಸಿದ್ದಾನೆ. ನಗರ, ಗ್ರಾಮೀಣ ಪ್ರದೇಶಗಳ ನಾಟಿಕೋಳಿಗಳ ಪೂರ್ವಜರಾಗಿರುವ ಕಾಡುಕೋಳಿ (Gallus gallus)ಯು Pheasant ಕುಟುಂಬಕ್ಕೆ ಸೇರಿದೆ. ಇವುಗಳು ಭಾರತ ಹೊರತುಪಡಿಸಿ ಚೀನಾ, ಮಲೇಷ್ಯಾ, ಫಿಲಿಫೈನ್ಸ್, ಇಂಡೋನೇಷ್ಯಾ, ಹವಾಯಿ ದ್ವೀಪಗಲ್ಲಿ ಹೆಚ್ಚಾಗಿವೆ.

ಆಹಾರ, ಗೂಡು ಕ್ರಮ

ಇವುಗಳ ಕೀಟ, ಕಾಳು, ಗೆದ್ದಲು, ಹಣ್ಣು ಸೇವಿಸುತ್ತವೆ. 4ರಿಂದ 7 ಮೊಟ್ಟೆಗಳನ್ನು ಇಡುವ ಇವುಗಳು ಫೆಬ್ರುವರಿಯಿಂದ ಮೇ ತಿಂಗಳವರೆಗೆ ನೆಲದಲ್ಲೇ ಗೂಡು ಮಾಡಿ ಮರಿ ಮಾಡುತ್ತವೆ. 9 ವಾರಗಳ ನಂತರ ಅವುಗಳನ್ನು ಸ್ವತಂತ್ರವಾಗಿ ಅಲೆದಾಡಲು ಬೀಡುತ್ತವೆ.

ಲಕ್ಷಣಗಳು

ಕೊಕ್ಕೊ...ಕು...ಕಯಾಕ್, ಕ್ಯೂಕ್‌ ಎಂದು ಹೊರಹಾಕುವ ಇವುಗಳ ಧ್ವನಿ ಪ್ರದೇಶಗಳನು ಗುಣವಾಗಿ ಭಿನ್ನ ಎನ್ನಲಾಗಿದೆ. ಗಂಡು ಹಕ್ಕಿ(ಹುಂಜ) ಕೆಂಪು, ನೇರಳೆ, ಹಸಿರು ನೀಲಿ, ಕಪ್ಪು ಹೊಳಪಿನ ಉದ್ದ ಮತ್ತು ಕಮಾನಿನ ಗರಿ ಇರುತ್ತದೆ. ತಲೆ ಮೇಲೆ ಉದ್ದ, ಹೊಳೆಯುವ ಚಿನ್ನ, ಕಂಚಿನ ಬಣ್ಣದ ಗರಿ ಹೊಂದಿರುತ್ತದೆ. ಹೆಣ್ಣು ಬೂದು, ಮಾಸಲು ಬಣ್ಣದ್ದಾಗಿರುತ್ತದೆ. ಎರಡರದ್ದೂ ಕಾಲಿನ ಬಣ್ಣ ಹಳದಿಯಾಗಿರುತ್ತದೆ. ಇವುಗಳ ಗರಿಗಳನ್ನು ಮೀನು ಹಿಡಿಯುವವರು ಗಾಳಕ್ಕೆ ಬಳಸುತ್ತಾರೆ. ಅರಣ್ಯ ನಾಶ, ಮನುಷ್ಯರ ಹಾವಳಿಯಿಂದ ಇವುಗಳ ಸಂಖ್ಯೆ ಕ್ಷೀಣಿಸುತ್ತಿದೆ. ಇದು ಪರಿಸರ ಅಸಮತೋಲನಕ್ಕೆ ಕಾರಣವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT