ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂದೆಯೊಂದಿಗೆ ಭಿನ್ನಾಭಿಪ್ರಾಯವಿಲ್ಲ: ವೈಷ್ಣವಿ ಹಾನಗಲ್

Last Updated 17 ಏಪ್ರಿಲ್ 2021, 8:31 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಗಂಗಾಲಹರಿಯಲ್ಲಿ ಸಂಗೀತದ ಪರಂಪರೆ ಮುಂದುವರೆಸಲು ಬಂದಿದ್ದೆ. ಬೇರೆ ಯಾವುದೇ ಉದ್ದೇಶವಿಲ್ಲ ಎಂದು ಗಂಗೂಬಾಯಿ ಹಾನಗಲ್ ಅವರ ಮೊಮ್ಮಗಳು ವೈಷ್ಣವಿ ಹಾನಗಲ್ ಹೇಳಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಂದೆ ಬಾಬುರಾವ್ ಹಾನಗಲ್ ಅವರು ದೂರು ನೀಡಿರುವುದು ಆಶ್ಚರ್ಯ ತಂದಿದೆ. ಬೇರೆ ಯಾರೋ ಅವರಿಗೆ ತಪ್ಪು ಮಾಹಿತಿ ನೀಡಿದ್ದಾರೆ ಎಂದರು.

ತಂದೆಯವರ ಮಾತು ಮೀರಿ ಏನನ್ನೂ ಮಾಡುವುದಿಲ್ಲ. ಎರಡು ತಿಂಗಳು ಇಲ್ಲಿ ಯಾವುದೇ ಚಟುವಟಿಕೆ ನಡೆಸುವುದಿಲ್ಲ. ಆ ನಂತರವ ಕುಟುಂಬದ ಎಲ್ಲ ಸದಸ್ಯರು ಸೇರಿ, ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

ವಿಷ ಘಳಿಗೆಯಲ್ಲಿ ಘಟನೆ ನಡೆದಿದೆ. ಅವರು ಪೊಲೀಸ್ ಸ್ಟೇಷನ್ ಗೆ ಹೋಗಿರುವುದು ಆಶ್ಚರ್ಯ ತಂದಿದೆ. ಕುಟುಂಬ ಸದಸ್ಯರ ನಡುವೆ ಯಾವುದೇ ಒಡಕಿಲ್ಲ ಎಂದರು.

ಗಂಗೂಬಾಯಿ ಹಾನಗಲ್ ಅವರ ಸಂಗೀತ ಪರಂಪರೆ ಮುಂದುವರೆಯಬೇಕು. ನನ್ನ ಹಾಗೂ ತಂದೆಯವರ ನಡುವೆ ಭಿನ್ನಾಭಿಪ್ರಾಯವಿಲ್ಲ. ಅವರನ್ನು ಶೀಘ್ರವೇ ಭೇಟಿ ಮಾಡಲಿದ್ದೇನೆ. ಘಟನೆಯ ನಂತರವೂ ಮಾತನಾಡಿದ್ದೇನೆ. ಮೊದಲಿನಂತೆಯೇ ಮಾತನಾಡಿದರು ಎಂದು ತಿಳಿಸಿದರು.

ಚಿಕ್ಕಪ್ಪ ನಾರಾಯಣರಾವ್ ಅವರ ಮನೆಯಲ್ಲಿದ್ದ ಕೀ ತೆಗೆದುಕೊಂಡು ಹೋಗಿ ಬಾಗಿಲು ತೆರೆದಿದ್ದೇನೆ. ಯಾವುದನ್ನು ಒಡೆದಿಲ್ಲ ಎಂದರು.

ಪ್ರಮೋದ ಮುತಾಲಿಕ್, ಮಹೇಶ ಹಾನಗಲ್, ವೀಣಾ ಹಾನಗಲ್, ಜ್ಞಾನೇಶ್ವರ ವಾರಂಗಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT