ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವೃತ್ತಿಪರ, ಕೌಶಲ ಆಧಾರಿತ ವಿಷಯಕ್ಕೆ ಒತ್ತು ನೀಡಿ: ಎಸ್.ಗಣೇಶನ್

Published 8 ಡಿಸೆಂಬರ್ 2023, 5:27 IST
Last Updated 8 ಡಿಸೆಂಬರ್ 2023, 5:27 IST
ಅಕ್ಷರ ಗಾತ್ರ

ಧಾರವಾಡ: ವೃತ್ತಿ ತರಬೇತಿ, ಕೌಶಲ ಆಧಾರಿತ ವಿಷಯಗಳಿಗೆ ಇಂದಿನ ಶಿಕ್ಷಣ ಸಂಸ್ಥೆಗಳು ಹೆಚ್ಚು ಒತ್ತು ನೀಡಬೇಕು ಎಂದು ಚೆನ್ನೈನ ಲಾಜಿಸ್ಟಿಕ್ಸ್ ಸೆಕ್ಟರ್ ಸ್ಕಿಲ್ ಕೌನ್ಸಿಲ್ ಸಂಸ್ಥೆಯ ಪ್ರಾಧ್ಯಾಪಕ ಎಸ್.ಗಣೇಶನ್ ಸಲಹೆ ನೀಡಿದರು.

ಕರ್ನಾಟಕ ಕಲಾ ಕಾಲೇಜಿನ ಬಿಬಿಎ ವಿಭಾಗ, ಐಕ್ಯೂಎಸಿ, ಮತ್ತು ಲಾಜಿಸ್ಟಿಕ್ ಸೆಕ್ಟರ್ ಸ್ಕಿಲ್ ಕೌನ್ಸಿಲ್ ವತಿಯಿಂದ  ಬಿಬಿಎ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ  ಮಾತನಾಡಿದರು.

ವಿದ್ಯಾರ್ಥಿಗಳು ಸ್ವಯಂ ಕಲಿಕೆಗೆ ಹೆಚ್ಚು ಮಹತ್ವ ನೀಡಬೇಕು. ಕೇಂದ್ರ ಸರ್ಕಾರವು ಮಹತ್ವದ ವೃತ್ತಿ ತರಬೇತಿ ಆಧಾರಿತ ಕೋರ್ಸ್‌ಗಳನ್ನು ಪರಿಚಯಿಸುತ್ತಿದೆ. ವೃತ್ತಿ ಸಂಸ್ಕೃತಿಯನ್ನು ಮೂಡಿಸುವಲ್ಲಿ ಕೌಶಲ ಆಧಾರಿತ ಕೋರ್ಸ್‌ಗಳು ಅಗತ್ಯವಾಗಿವೆ ಎಂದರು.

ಚೆನೈನ ಲಾಜಿಸ್ಟಿಕ್ ಸೆಕ್ಟರ ಸ್ಕಿಲ್ ಕೌನ್ಸಿಲ್ ಸಂವಹನ ಕೌಶಲ್ಯ ವಿಭಾಗದ ಮುಖ್ಯಸ್ಥೆ ಗಾಯತ್ರಿ ಹರೀಶ್ ಮಾತನಾಡಿ, ಸಂವಹನ ಕೌಶಲ ಮತ್ತು ಇಂಗ್ಲಿಷ್‌ ಭಾಷಾ ಪ್ರಭುತ್ವವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಉದ್ಯಮ ಆಧಾರಿತ ಪ್ರಾಯೋಗಿಕ ಕಲಿಕೆಗೆ ಒತ್ತು ನೀಡಬೇಕು ಎಂದು ಹೇಳಿದರು.

ಕರ್ನಾಟಕ ಕಲಾ ಕಾಲೇಜಿನ ಪ್ರಾಚಾರ್ಯ ಪ್ರೊ.ಡಿ.ಬಿ.ಕರಡೋಣಿ, ಪ್ರೊ.ಮುಕುಂದ ಲಮಾಣಿ, ಈರಣ್ಣ ಮುಳಗುಂದ, ಕಿರಣಕುಮಾರ, ಬಿ.ಬಿ.ಬಿರಾದಾರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT