‘ಆಚರಣೆ ವಿಧಿವತ್ತಾಗಿ ಪಾಲಿಸಿ’
‘ಹವ್ಯಕರೆಲ್ಲರೂ ಎಚ್ಚೆತ್ತು ಸಂಸ್ಕೃತಿ ನಡೆ-ನುಡಿ ಆಚರಣೆಗಳನ್ನು ವಿಧಿವತ್ತಾಗಿ ಪಾಲಿಸಬೇಕು. ಸಂಕೋಚ ಮತ್ತು ಸಂಕುಚಿತತೆ ಬಿಟ್ಟು ಬದುಕಬೇಕು’ ಎಂದು ಸೆಲ್ಕೊ ಸೋಲಾರ್ ಸಿಇಒ ಮೋಹನ ಹೆಗಡೆ ಹೇಳಿದರು. ‘ಭೌತಿಕವಾಗಿ ನಮ್ಮದು ಚಿಕ್ಕ ಸಮಾಜವಾಗಿದ್ದರೂ ದೊಡ್ಡ ಸಾಧನೆ ಮಾಡುತ್ತ ಸಮಾಜದ ಗೌರವ ಕಾಪಾಡಿಕೊಂಡು ಬಂದಿದ್ದೇವೆ. ಹಲವು ಸಣ್ಣ ಸಮುದಾಯಗಳು ಹೆಸರಿಲ್ಲದಂತೆ ನಶಿಸಿ ಹೋಗಿವೆ. ನಮ್ಮ ಸಮುದಾಯಕ್ಕೆ ಆ ಸ್ಥಿತಿ ಬರಬಾರದು. ಪರಂಪರೆ ಕಾಪಾಡುವ ಹಠ ನಮ್ಮಲ್ಲಿ ಕ್ಷೀಣಿಸುತ್ತಿದೆ. ಈ ನಿಟ್ಟಿನಲ್ಲಿ ಹವ್ಯಕರು ಮಕ್ಕಳನ್ನು ಮಠದ ಆವರಣಕ್ಕೆ ಕರೆ ತರಬೇಕು. ಇದರಿಂದ ಧೈರ್ಯ ಭರವಸೆ ಬೆಳೆಯುತ್ತದೆ. ರಾಜಕೀಯವಾಗಿ ಧ್ವನಿ ಹೆಚ್ಚಾಗಬೇಕು’ ಎಂದು ತಿಳಿಸಿದರು.