ಉರುಸಿನ ಅಂಗವಾಗಿ ರಾತ್ರಿ ಅಮರಅಲಿ ಗವನಾಳ ಇವರಿಂದ ರಾತೀಬ ಖೇಲ್ ಹಾಗೂ ಸಂದಲ್ (ಗಂಧ) ಕಾರ್ಯಕ್ರಮ ಜರುಗಲಿದೆ.
ಸೆ.26 ರಂದು ಉಪ್ಪಿನಬೆಟಗೇರಿ ಮೂರುಸಾವಿರ ವಿರಕ್ತಮಠದ ಕುಮಾರ ವಿರೂಪಾಕ್ಷ ಸ್ವಾಮೀಜಿ ಹಾಗೂ ಇಸ್ಲಾಂ ಧರ್ಮಗುರು ಅರಿಫುಲ್ ಹಕ್ ಶಾ ಖಾದ್ರಿ ಕಲಂದರ ಇವರ ಸಾನ್ನಿಧ್ಯದಲ್ಲಿ ಉರುಸು ಪ್ರಾರ್ಥನೆ ನಡೆಯಲಿದೆ. ಸೆ.27ರಂದು ರಾತ್ರಿ 9.30ಕ್ಕೆ ಕವ್ವಾಲಿ ನಡೆಯಲಿದೆ.
ಹಜರತ್ ಪೀರ ಸಯ್ಯದ ರೆಹಮಾನ ಶಾವಲಿಯವರ ಉರುಸಿನಲ್ಲಿ ಎಲ್ಲ ಸಮುದಾಯದ ಜನರು ಪಾಲ್ಗೊಂಡು ಸೇವೆ ಮಾಡುತ್ತಾರೆ. ಇದು ಭಾವೈಕ್ಯದ ಉರುಸ್ ಎಂದು ಹೆಸರಾಗಿದೆ ಎಂದು ಮುಖಂಡ ನೂರಅಹ್ಮದ ಮುಜಾವರ ಹೇಳುತ್ತಾರೆ.
ಕರ್ನಾಟಕ, ಮಹಾರಾಷ್ಟ್ರ, ಗೋವಾ ರಾಜ್ಯದ ಭಕ್ತರು ಇಲ್ಲಿ ಬಂದು ಪೂಜೆ ಸಲ್ಲಿಸಿ ಬೇಡಿಕೊಂಡು, ಇಷ್ಟಾರ್ಥ ಸಿದ್ಧಿಸಿದ ನಂತರ ಹರಕೆ ತೀರಿಸುತ್ತಾರೆ ಎಂದು ಹಟೇಲಸಾಬ ಕುಡಚಿ, ಕಮಾಲಸಾಬ ಶೇತಸನದಿ, ಬಾಬಾಜಾನ ಜಾವೂರ, ಅಬ್ದುಲ್ ರೆಹಮಾನ ಮುಜಾವರ, ಅಬ್ದುಲ್ ಖಾದರ ಕಿತ್ತೂರ ಹೇಳುತ್ತಾರೆ.