ಗುರುವಾರ , ಮೇ 19, 2022
23 °C
ಪೊಲೀಸ್ ಠಾಣೆ ಎದುರು ಎಸ್ ಎಸ್ ಕೆ ಸಮಾಜ ಪ್ರತಿಭಟನೆ

ಮುಸ್ಲಿಂ ಯುವಕ, ಹಿಂದೂ ಯುವತಿ ಪ್ರೇಮ ವಿವಾಹ: ಹುಡುಗಿ ಪೋಷಕರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

PV Photo

ಹುಬ್ಬಳ್ಳಿ: ನಗರದ ಹಿಂದೂ ಯುವತಿ ಮತ್ತು ಮುಸ್ಲಿಂ ಯುವಕ‌ ಪ್ರೀತಿಸಿ ವಿವಾಹವಾಗಿದ್ದು, ಅದನ್ನು ಖಂಡಿಸಿ ಯುವತಿ ಕುಟುಂಬದವರು ಹಾಗೂ ಎಸ್ ಎಸ್ ಕೆ ಸಮಾಜದವರು ಇಲ್ಲಿನ ಉಪನಗರ ಠಾಣೆ ಪೊಲೀಸ್ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

ಪರಸ್ಪರ ಪ್ರೀತಿಸುತ್ತಿದ್ದ ಕೇಶ್ವಾಪುರದ‌ ಇಬ್ರಾಹಿಂ ಮತ್ತು ಕಮರಿಪೇಟೆ ಸ್ನೇಹಾ ಪರಸ್ಪರ ಪ್ರೀತಿಸಿ, ಗದುಗಿನಲ್ಲಿ ರಿಜಿಸ್ಟರ್ ಮದುವೆಯಾಗಿದ್ದಾರೆ.

ವಿಷಯ ಗೊತ್ತಾಗುತ್ತಿದ್ದಂತೆ ಠಾಣೆ ಎದುರು ಜಮಾಯಿಸಿದ ಯುವತಿ ಕುಟುಂಬದವರು ಹಾಗೂ ಎಸ್ ಎಸ್ ಕೆ ಸಮುದಾಯದವರು ಪ್ರತಿಭಟನೆ ಆರಂಭಿಸಿದರು. ಪ್ರೀತಿ ಹೆಸರಿನಲ್ಲಿ ಲವ್ ಜಿಹಾದ್ ನಡೆಸಲಾಗಿದೆ. ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡುವ ಹುನ್ನಾರ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು