ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ: ನೈರುತ್ಯ ರೈಲ್ವೆ ತಂಡ ಶುಭಾರಂಭ

Last Updated 20 ಫೆಬ್ರುವರಿ 2021, 17:00 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಏಕಪಕ್ಷೀಯವಾಗಿ ನಡೆದ ಪಂದ್ಯದಲ್ಲಿ 6–0 ಗೋಲುಗಳಿಂದ ಗೆಲುವು ದಾಖಲಿಸಿದ ನೈರುತ್ಯ ರೈಲ್ವೆ ತಂಡ ನಗರದಲ್ಲಿ ಶನಿವಾರ ಆರಂಭವಾದ ‘7ಎ‘ ಸೈಡ್‌ ‘ಸೆಟ್ಲಮೆಂಟ್ ಹಾಕಿ ಕಪ್‌’ ಟೂರ್ನಿಯಲ್ಲಿ ಶುಭಾರಂಭ ಮಾಡಿತು.

ಫ್ರೆಂಡ್ಸ್‌ ಸರ್ಕಲ್‌ ಸೆಟ್ಲಮೆಂಟ್‌ ಹಾಕಿ ಸಮಿತಿ ಆಯೋಜಿಸಿರುವ ಟೂರ್ನಿಯಲ್ಲಿ ರೈಲ್ವೆ ತಂಡ ಗದಗನ ಹನುಮಾನ ಬ್ಲೆಸ್ಸಿಂಗ್ ತಂಡವನ್ನು ಮಣಿಸಿತು. ಟೂರ್ನಿಯಲ್ಲಿ ಎಂಟು ತಂಡಗಳು ಪಾಲ್ಗೊಂಡಿದ್ದು ಮೊದಲ ದಿನ ಲೀಗ್‌ ಪಂದ್ಯಗಳು ಜರುಗಿದವು. ಇಂದು ಇನ್ನುಳಿದ ಲೀಗ್‌ ಹಾಗೂ ನಾಕೌಟ್‌ ಹಣಾಹಣಿ ನಡೆಯಲಿವೆ. ರೈಲ್ವೆ ತಂಡ ದಿನದ ತನ್ನ ಇನ್ನೊಂದು ಪಂದ್ಯದಲ್ಲಿ ಬಳ್ಳಾರಿ ಜಿಲ್ಲಾ ಹಾಕಿ ತಂಡದ ಎದುರು 3–3 ಗೋಲುಗಳ ಸಮಬಲ ಸಾಧಿಸಿತು.

ದಿನದ ಲೀಗ್‌ ಪಂದ್ಯಗಳಲ್ಲಿ ಬೆಂಗಳೂರಿನ ಡಿವೈಇಎಸ್‌ ತಂಡ 2–1 ಗೋಲುಗಳಿಂದ ಕೊಲ್ಹಾಪುರ ತಂಡದ ಮೇಲೂ, ಹುಬ್ಬಳ್ಳಿಯ ಯಂಗ್‌ ಸ್ಟರ್ಸ್‌ ಸ್ಪೋರ್ಟ್ಸ್ ಕ್ಲಬ್‌ 4–0ರಲ್ಲಿ ಹುಬ್ಬಳ್ಳಿ ಹಾಕಿ ಅಕಾಡೆಮಿ ವಿರುದ್ಧವೂ, ಹುಬ್ಬಳ್ಳಿಯ ವಾಸು ಇಲೆವನ್‌ 4–1ರಿಂದ ಹನುಮಾನ ಬ್ಲೆಸ್ಸಿಂಗ್‌ ಮೇಲೂ, ಡಿವೈಇಎಸ್‌ 4–0ರಲ್ಲಿ ಹುಬ್ಬಳ್ಳಿ ಹಾಕಿ ಅಕಾಡೆಮಿ ವಿರುದ್ಧವೂ, ಕೊಲ್ಹಾಪುರ ತಂಡ 2–1ರಲ್ಲಿ ಯಂಗ್‌ ಸ್ಟರ್ಸ್‌ ಕ್ಲಬ್‌ ಮೇಲೂ ಗೆಲುವು ಪಡೆದವು. ಬಳ್ಳಾರಿ ಜಿಲ್ಲಾ ತಂಡ ಹಾಗೂ ವಾಸು ಇಲೆವನ್‌ ನಡುವಣ ಪಂದ್ಯ ತಲಾ ಒಂದು ಗೋಲುಗಳಿಂದ ಡ್ರಾದಲ್ಲಿ ಅಂತ್ಯ ಕಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT