ಹುಬ್ಬಳ್ಳಿ: ಆಸನ ಕಾಯ್ದಿರಿಸುವ ಸೌಲಭ್ಯ ರಹಿತವಾದ ಹುಬ್ಬಳ್ಳಿ–ಮೀರಜ್ ಎರಡು ವಿಶೇಷ ರೈಲಿನ ಸಂಚಾರ ಸೇವೆಯನ್ನು ಪ್ರಯಾಣಿಕರ ದಟ್ಟಣೆ ತಗ್ಗಿಸಲು ಇದೇ ಆಗಸ್ಟ್ 10ರವರೆಗೆ ವಿಸ್ತರಿಸಲಾಗಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.
ಬೆಳಗಾವಿಯಿಂದ ಮೀರಜ್‌ವರೆಗೆ 07301 ಹಾಗೂ 07303 ಸಂಖ್ಯೆಯ ರೈಲುಗಳು ಸಂಚರಿಸಲಿವೆ. ಬೆಳಿಗ್ಗೆ 6 ಗಂಟೆಗೆ ಬೆಳಗಾವಿಯಿಂದ ಹೊರಡುವ ರೈಲು ಬೆಳಿಗ್ಗೆ 9ಕ್ಕೆ ಮೀರಜ್‌ಗೆ ತಲುಪಲಿದೆ. ಮೀರಜ್‌ನಿಂದ 07302 ಹಾಗೂ 07304 ಸಂಖ್ಯೆಯ ರೈಲು ಬೆಳಗಾವಿಗೆ ಪ್ರಯಾಣಿಸಲಿವೆ.