ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹುಬ್ಬಳ್ಳಿ: ಸಿಐಡಿ ಅಧಿಕಾರಿಗಳ ಸೋಗಿನಲ್ಲಿ ಮಹಿಳೆಗೆ ₹30,000 ವಂಚನೆ

Published 22 ಮೇ 2024, 16:10 IST
Last Updated 22 ಮೇ 2024, 16:10 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಸಿಐಡಿ ಅಧಿಕಾರಿಗಳ ಸೋಗಿನಲ್ಲಿ ಮಹಿಳೆಯೊಬ್ಬರನ್ನು ಹೆದರಿಸಿ, ಅವರಿಂದ ₹30,000 ವರ್ಗಾಯಿಸಿಕೊಂಡು ವಂಚಿಸಲಾಗಿದೆ.

ಗೋಕುಲ ರಸ್ತೆಯಲ್ಲಿರುವ ಮನೆಯೊಂದಕ್ಕೆ ಬಂದ ಅಪರಿಚಿತರಿಬ್ಬರು, ಸಿಐಡಿ ಅಧಿಕಾರಿಗಳು ಎಂದು ಹೇಳಿಕೊಂಡಿದ್ದಾರೆ. ಮನೆಯಲ್ಲಿ ವೇಶ್ಯಾವಾಟಿಕೆ ನಡೆಸುತ್ತಿರುವುದಾಗಿ ಆರೋಪಿಸಿ, ವಿಡಿಯೊ ಮಾಡಿದ್ದಾರೆ. ₹ 50,000 ನೀಡದಿದ್ದರೆ ವಿಡಿಯೊವನ್ನು ಮಾಧ್ಯಮದವರಿಗೆ ನೀಡುವುದಾಗಿ ಹೆದರಿಸಿ, ಕೊನೆಗೆ ₹30,000 ಫೋನ್ ಪೇ ಮಾಡಿಸಿಕೊಂಡು ಪರಾರಿಯಾಗಿದ್ದಾರೆ.

ಈ ಕುರಿತು ಗೋಕುಲ ರಸ್ತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

₹3.89 ಲಕ್ಷ ವಂಚನೆ: ಹಳೇ ಹುಬ್ಬಳ್ಳಿಯಲ್ಲಿರುವ ಕೆ.ಎಲ್.ಎಂ. ಆಕ್ಸಿವಾ ಫಿನ್ ವಿಷ್ಟಲಿ ಎಂಬ ಕಂಪನಿಯ ಇಬ್ಬರು ಸಿಬ್ಬಂದಿ ಗ್ರಾಹಕರೊಂದಿಗೆ ಸೇರಿ ನಕಲಿ ದಾಖಲೆ ಸೃಷ್ಟಿಸಿ, ಆ ಕಂಪನಿಯಿಂದಲೇ ₹3,89,800 ಸಾಲ ಪಡೆದು ವಂಚಿಸಿದ್ದಾರೆ.

ಕಂಪನಿ ಸಿಬ್ಬಂದಿ ಸಮೀರ್‌ ಅಹ್ಮದ್‌ ಹಗಲದೇವಟಗಿ, ಶಿಲ್ಪಾ ವಿಜಯ ಬಾಕಳೆ ಹಾಗೂ ಗ್ರಾಹಕಿ ಫರೀದಾ ಎಂಬುವರ ವಿರುದ್ಧ ವಿನೋದ ಶಾಪುರಕರ ದೂರು ನೀಡಿದ್ದಾರೆ. ಕಂಪನಿ ಸಿಬ್ಬಂದಿ ನಕಲಿ ದಾಖಲೆ ಸೃಷ್ಟಿಸಿದ್ದಾರೆ. ಫರೀದಾ ನಕಲಿ ಬಂಗಾರ ಬಳೆಗಳನ್ನು ತೋರಿಸಿ, ಸಾಲ ಪಡೆದು ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT