ಗುರುವಾರ , ನವೆಂಬರ್ 26, 2020
20 °C

ಹುಬ್ಬಳ್ಳಿ: ಚನ್ನಮ್ಮ ವೃತ್ತದಲ್ಲಿ ಲಾರಿ ಪಲ್ಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ನಗರದ ಹೃದಯಭಾಗವಾದ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಶುಕ್ರವಾರ ಬೆಳಗಿನ ಜಾವ ಸರಕು ತುಂಬಿದ ಲಾರಿ ಪಲ್ಟಿಯಾಗಿದೆ.

ಹರಿಯಾಣದಿಂದ ಬೆಳ್ಳುಳ್ಳಿ ಮತ್ತು ಪೇಸ್ಟ್‌ ಹೊತ್ತು ತಂದಿದ್ದ ಲಾರಿ ಇಲ್ಲಿಗೆ ಸಮೀಪದ ತಾರಿಹಾಳ ಕೈಗಾರಿಕಾ ಪ್ರದೇಶಕ್ಕೆ ಹೊರಟಿತ್ತು. ಚಾಲಕ ಸಾಹುಲ್ ಖಾನ್‌ ಮತ್ತು ಕ್ಲೀನರ್‌ ಮೊಹಮ್ಮದ್‌ ಸಾಹೀಫ್‌ ಲಾರಿಯಿಂದ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ. ರಸ್ತೆ ಮಧ್ಯೆದಲ್ಲಿಯೇ ವಾಹನ ಪಲ್ಟಿಯಾಗಿದ್ದರಿಂದ ವಾಹನಗಳ ಸಂಚಾರಕ್ಕೆ ಅಡ್ಡಿಯಾಯಿತು. ಕ್ರೇನ್‌ಗಳ ಸಹಾಯದಿಂದ ಲಾರಿ ತೆರವು ಮಾಡುವ ಕಾರ್ಯಾಚರಣೆ ನಡೆಯುತ್ತಿದೆ.

10 ಗಾಲಿಗಳ ಲಾರಿ ಇದಾಗಿದ್ದು, ಮೀತಿಮೀರಿ ಸರಕು ಹೊತ್ತುತಂದಿದ್ದು, ಏಕಮುಖಿ ಮಾರ್ಗದಲ್ಲಿ ಚಾಲಕ ಲಾರಿ ಚಲಾಯಿಸಿಕೊಂಡು ಬಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಪೂರ್ವ ಸಂಚಾರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು