ಶುಕ್ರವಾರ, ಜುಲೈ 30, 2021
23 °C

28ರಿಂದ ಹುಬ್ಬಳ್ಳಿ–ಗಂಗಾವತಿ ರೈಲು ಪುನರಾರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಕೋವಿಡ್‌ ಪ್ರಕರಣಗಳು ಹೆಚ್ಚಿದ್ದ ಕಾರಣಕ್ಕಾಗಿ ರದ್ದಾಗಿದ್ದ ಹುಬ್ಬಳ್ಳಿ–ಗಂಗಾವತಿ ಎಕ್ಸ್‌ಪ್ರೆಸ್‌ ವಿಶೇಷ ರೈಲು ಜೂ. 28ರಿಂದ ಪುನರಾರಂಭವಾಗಲಿದೆ ಎಂದು ನೈರುತ್ಯ ರೈಲ್ವೆ ತಿಳಿಸಿದೆ. ಈ ರೈಲು 29ರಿಂದ ಗಂಗಾವತಿಯಿಂದ ಸಂಚರಿಸಲಿದೆ.

ಹೊಸಪೇಟೆ–ಹರಿಹರ ವಿಶೇಷ ರೈಲು 29ರಿಂದ ಹೊಸಪೇಟೆಯಿಂದ, 30ರಿಂದ ಹರಿಹರದಿಂದ ಆರಂಭವಾಗಲಿದೆ. ಈ ರೈಲುಗಳಿಗೆ ನಿಲ್ದಾಣಗಳಲ್ಲಿಯೇ ಟಿಕೆಟ್‌ ಪಡೆದು ಪ್ರಯಾಣಿಸಬೇಕು.

28ರಿಂದ ಹುಬ್ಬಳ್ಳಿಯಿಂದ ಕೆಎಸ್‌ಆರ್‌ ಬೆಂಗಳೂರು ಎಕ್ಸ್‌ಪ್ರೆಸ್‌ ವಿಶೇಷ ರೈಲು ಸಂಚಾರ ಆರಂಭವಾಗಲಿದೆ. ಈ ರೈಲು 30ರಿಂದ ಬೆಂಗಳೂರಿನಿಂದ ಹುಬ್ಬಳ್ಳಿಗೆ ತೆರಳಲಿದೆ.

29ರಿಂದ ಕೆಎಸ್‌ಆರ್‌ ಬೆಂಗಳೂರಿನಿಂದ–ಹೊಸಪೇಟೆಗೆ ಮತ್ತು 30ರಿಂದ ಹೊಸಪೇಟೆಯಿಂದ ಬೆಂಗಳೂರಿಗೆ ರೈಲು ಸಂಚಾರ ಮತ್ತೆ ಆರಂಭವಾಗಲಿದೆ. ಈ ರೈಲುಗಳಲ್ಲಿ ಪ್ರಯಾಣಿಸಲು ಮುಂಗಡ ಟಿಕೆಟ್‌ ಪಡೆಯಬೇಕು. ಪ್ರಯಾಣಿಕರು ಕೋವಿಡ್‌ ನಿಯಮಾವಳಿಗಳನ್ನು ಕಡ್ಡಾಯಬಾಗಿ ಪಾಲಿಸಬೇಕು ಎಂದು ಇಲಾಖೆ ಮನವಿ ಮಾಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು