ಹುಬ್ಬಳ್ಳಿ: ‘ಹುಬ್ಬಳ್ಳಿ ಫಿಟ್ನೆಸ್ ಕ್ಲಬ್ ವತಿಯಿಂದ ನ. 20ರಂದುಬೆಳಿಗ್ಗೆ5.30ಕ್ಕೆವಿಮಾನ ನಿಲ್ದಾಣ ಸಮೀಪದ ಕೆ.ಎಲ್.ಇ ತಾಂತ್ರಿಕ ವಿಶ್ವವಿದ್ಯಾಲಯದ ಬಳಿ ಹುಬ್ಬಳ್ಳಿಹಾಫ್ ಮ್ಯಾರಥಾನ್ –2022 ಆಯೋಜಿಸಲಾಗಿದೆ. ಸತತ ಎಂಟು ವರ್ಷಗಳಿಂದ ಮ್ಯಾರಥಾನ್ ಆಯೋಜಿಸಲಾಗುತ್ತಿದ್ದು, ಈ ಬಾರಿ 2,500 ಜನ ಭಾಗವಹಿಸುವನಿರೀಕ್ಷೆ ಇದೆ. ಈಗಾಗಲೇ 2,200 ಜನ ನೋಂದಣಿ ಮಾಡಿಕೊಂಡಿದ್ದಾರೆ’ ಎಂದು ಕ್ಲಬ್ ಅಧ್ಯಕ್ಷ ಎಸ್.ಪಿ. ಬಳಿಗಾರ ಹೇಳಿದರು.

‘ಮೂರು ಓಟದ ವಿಭಾಗಗಳಲ್ಲಿ ಮ್ಯಾರಥಾನ್ ನಡೆಯಲಿದ್ದು, ಪ್ರತಿ ವಿಭಾಗಕ್ಕೂ ನಿಗದಿತ ಶುಲ್ಕವಿದೆ. ಮಹಿಳೆ ಮತ್ತು ಪುರುಷರಿಗೆ ಪ್ರತ್ಯೇಕ ಸ್ಪರ್ಧೆಗಳಿದ್ದು, ಬಹುಮಾನ ವಿತರಿಸಲಾಗುವುದು.ವಿವಿಧವಯೋಮಾನದವಿಭಾಗದಲ್ಲಿನಗದುಬಹುಮಾನ ಇರಲಿದೆ. ಓಟದ ಸ್ಪರ್ಧೆಯ ಕಿಟ್ ಅನ್ನು ನ. 19ರಂದು ಬೆಳಿಗ್ಗೆ 11ರಿಂದ ಸಂಜೆ 5ರವರೆಗೆ ವಿತರಿಸಲಾಗುವುದು’ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮಾಹಿತಿಗೆ ಮೊ: 93417 38405 ಸಂಪರ್ಕಿಸಬಹುದು. ಕ್ಲಬ್ ಮಾಜಿ ಅಧ್ಯಕ್ಷ ಜಿ.ಸಿ. ಪಾಟೀಲ, ಮಹಿಳಾ ಕ್ಲಬ್ ಮುಖ್ಯಸ್ಥೆ ಭಾರತಿ ಗೋಪಾರಿ, ಕ್ಲಬ್ ಸಂಯೋಜಕ ದೀಪಕ ಕಟಾವಗಾರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.