ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ಆಯಿಲ್‌ ಟ್ಯಾಂಕರ್‌ನಲ್ಲಿ ಸಾಗಿಸುತ್ತಿದ್ದ ₹50 ಲಕ್ಷ ಮೌಲ್ಯದ ಮದ್ಯ ವಶ

Published 17 ಜನವರಿ 2024, 4:55 IST
Last Updated 17 ಜನವರಿ 2024, 4:55 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಆಯಿಲ್ ಟ್ಯಾಂಕರ್‌ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ₹50 ಲಕ್ಷ ಮೌಲ್ಯದ ಮದ್ಯವನ್ನು ವಾಣಿಜ್ಯ ತೆರಿಗೆ ಇಲಾಖೆಯ (ಜಾರಿ ವಿಭಾಗ) ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತ ವಿಜಯಕುಮಾರ ಸನದಿ, ಜನವರಿ 11ರಂದು ಧಾರವಾಡದ ನರೇಂದ್ರ ಟೋಲ್‌ನಲ್ಲಿ ಟ್ಯಾಂಕರ್‌ ತಡೆದು ತಪಾಸಣೆ ನಡೆಸಿದಾಗ, ಪ್ರಕರಣ ಬೆಳಕಿಗೆ ಬಂದಿದೆ.

‘ಲಾರಿ ಬೆಂಗಳೂರಿನಿಂದ ಬೆಳಗಾವಿಗೆ ಹೋಗುತಿತ್ತು. 3 ಸಾವಿರ ಲೀಟರ್ ಸುಟ್ಟ ಆಯಿಲ್‌ ಸಾಗಿಸಲು ಕಬ್ಬಿಣದ ಸ್ಕ್ರ್ಯಾಪ್ ಮಾರಾಟಗಾರರ ಹೆಸರಿನಲ್ಲಿ ₹7 ಲಕ್ಷ ನಕಲಿ ಬಿಲ್ ಸೃಷ್ಟಿಸಲಾಗಿತ್ತು. ಬಿಲ್‌ ಪರಿಶೀಲಿಸಿದಾಗ ನಕಲಿ ಎಂದು ಗೊತ್ತಾಗಿದೆ’ ಎಂದು ಅಧಿಕಾರಿಗಳು ತಿಳಿಸಿದರು.

‘ಘಟನೆ ನಂತರ ಲಾರಿ ಚಾಲಕ ರಾಜಸ್ಥಾನದ ಮೋಹನ್‌ಲಾಲ್‌ ಪರಾರಿಯಾಗಿದ್ದ. ಹೀಗಾಗಿ ಟ್ಯಾಂಕರ್ ಜಪ್ತಿ ಮಾಡಲಾಗಿತ್ತು. ಎರಡನೇ ಶನಿವಾರ, ಸಂಕ್ರಾಂತಿ ಹಬ್ಬದ ನಿಮಿತ್ತ ರಜೆ ಇದ್ದುರಿಂದ ಟ್ಯಾಂಕರ್‌ ತಪಾಸಣೆ ಮಾಡಿರಲಿಲ್ಲ. ಜನವರಿ 16ರಂದು ಭೌತಿಕ ತಪಾಸಣೆ ಮಾಡಿದಾಗ ಟ್ಯಾಂಕರ್‌ನಲ್ಲಿ ಮದ್ಯ ಬಾಟಲಿಗಳಿದ್ದ ಬಾಕ್ಸ್‌ಗಳಿದ್ದವು’ ಎಂದರು.

‘ಬೆಂಗಳೂರಿನ ಸೋಮಾನಿ ಟ್ರೇಡರ್ಸ್ ಹೆಸರಲ್ಲಿ ರಾಜಸ್ಥಾನದ ನಿಶಾಂತ ಲುಬ್ರಿಕಂಟ್ಸ್‌ಗೆ ಸಾಗಾಟ ಮಾಡಲು ನಕಲಿ ಬಿಲ್ ಸೃಷ್ಟಿಸಲಾಗಿದೆ. ಈ ಎರಡೂ ಹೆಸರುಗಳೂ ನಕಲಿಯಾಗಿವೆ. 20 ಸಾವಿರ ಲೀಟರ್‌ ಸಾಮರ್ಥ್ಯದ ಟ್ಯಾಂಕರ್‌ನಲ್ಲಿ ಕೇವಲ 3 ಸಾವಿರ ಲೀಟರ್ ಸುಟ್ಟ ಆಯಿಲ್‌ಗೆ ಸಾಗಣೆ ಮಾಡಲು ಬಿಲ್‌ನಲ್ಲಿ ನಮೂದಿಸಲಾಗಿತ್ತು’ ಎಂದರು.

‘ಟ್ಯಾಂಕರ್‌ನ ನೋಂದಣಿ ಸಂಖ್ಯೆ ಸಹ ನಕಲಿಯಾಗಿದ್ದು, ನಾಗಾಲ್ಯಾಂಡ್ ನೋಂದಣಿ ಸಂಖ್ಯೆ ಬಳಸಲಾಗಿದೆ. ಮದ್ಯದ ಬಾಟಲಿ ಮೇಲೆ ಅಂಟಿಸಿರುವ ಲೇಬಲ್‌ ಸಹ ನಕಲಿಯಾಗಿದೆ. ವಶಪಡಿಸಿಕೊಳ್ಳಲಾಗಿರುವ ಮದ್ಯವನ್ನು ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ’ ಎಂದು ಹೇಳಿದರು.

ವಾಣಿಜ್ಯ ತೆರಿಗೆ ಇಲಾಖೆಯ (ಜಾರಿ) ಜಂಟಿ ಆಯುಕ್ತ ರವಿಕುಮಾರ್, ಉಪ ಆಯುಕ್ತ ಬಾಳಪ್ಪ ಸಂಪಗಾಂವ್ ಅವರ ನೇತೃತ್ವದಲ್ಲಿ ತಪಾಸಣೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT