ಸೋಮವಾರ, ಸೆಪ್ಟೆಂಬರ್ 27, 2021
21 °C

‘ಏಕಾಂಗಿ ನಾನಲ್ಲ’ ಹಾಡು ಬಿಡುಗಡೆ ಇಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಎಸ್‌.ಎನ್‌. ಜಾಲ್ಸ್‌ ಕ್ರಿಯೇಟಿವ್‌ ಸ್ಟುಡಿಯೊ ನಿರ್ಮಿಸಿರುವ ಅಲ್ಬಮ್‌ನ ಎರಡನೇ ಹಾಡು ‘ಏಕಾಂಗಿ ನಾನಲ್ಲ’ ಬಿಡುಗಡೆ ಆ. 1ರಂದು ಸಂಜೆ 6.03 ನಿಮಿಷಕ್ಕೆ ಧಾರವಾಡದ ಹಳಿಯಾಳ ರಸ್ತೆಯಲ್ಲಿರುವ ಸ್ಟುಡಿಯೊದಲ್ಲಿ ಜರುಗಲಿದೆ.

ಹಾಡಿನ ನಿರ್ದೇಶಕ ಸುಭಾಷ್ ಹವಾಲ್ದಾರ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ‘ನಮ್ಮ ಸ್ಟುಡಿಯೊ ವತಿಯಿಂದ ತಯಾರಿಸಿದ ಮೊದಲ ಹಾಡು ಯಶಸ್ಸು ಕಂಡಿದೆ. ಈಗ ಎರಡನೇ ಹಾಡಿಗೂ ಯಶ ಸಿಗುವ ನಿರೀಕ್ಷೆಯಿದೆ. ಸ್ನೇಹ ಹಾಗೂ ಪ್ರೀತಿ ನಮ್ಮೊಂದಿಗೆ ಇದ್ದಾಗ ನಾವು ಹೇಗೆ ಸಂತೋಷವಾಗಿ ಇರುತ್ತೇವೆ. ಇಲ್ಲದಾಗ ನಮ್ಮ ಮನಸ್ಥಿತಿ ಹೇಗಿರುತ್ತದೆ ಎನ್ನುವುದನ್ನು ಈ ಹಾಡಿನ ಮೂಲಕ ತೋರಿಸಲಾಗಿದೆ’ ಎಂದರು.

ಹುಬ್ಬಳ್ಳಿ–ಧಾರವಾಡ ಹಾಗೂ ಮಹಾರಾಷ್ಟ್ರದಲ್ಲಿ ಚಿತ್ರೀಕರಣ ಮಾಡಲಾಗಿದ್ದು, ಮುಂಬರುವ ದಿನಗಳಲ್ಲಿ ಸಿನಿಮಾ ಮಾಡುವ ಉದ್ದೇಶವಿದೆ ಎಂದರು.

ಸ್ಥಳೀಯ ಕಲಾವಿದರಾದ ಸಿದ್ದಾರ್ಥ್‌ ಜಾಲಿಯಾಳ, ದೇವಿಕಾ ಹಾಗೂ ಆರ್‌.ಜೆ. ರಾಘವೇಂದ್ರ ಹಾಡಿನಲ್ಲಿ ಅಭಿನಯಿಸಿದ್ದಾರೆ. ಎಚ್‌. ವಾಣಿಶ್ರೀ ಹಾಡು ರಚಿಸಿದ್ದಾರೆ. ವಿದ್ಯಾರ್ಥಿ ಚೇತನ್ ಪಾವಟಿ ಸಂಯೋಜಿಸಿ ಹಾಡಿದ್ದಾರೆ. ಹಾಡಿನ ನಿರ್ಮಾಪಕ ಸಿದ್ದಾರ್ಥ ಜಾಲಿಯಾಳ, ಶ್ರೀನಿವಾಸ ವೈ, ನವೀನ ವರ್ಣೇಕರ್‌ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು