ಹುಬ್ಬಳ್ಳಿ: ಇಲ್ಲಿನ ಅರವಿಂದ ನಗರದ ಜನವಸತಿಗಳ ಮುಂದೆ ಚರಂಡಿ ನಿರ್ಮಾಣಕ್ಕೆ ನೆಲ ಅಗೆದು, ಎರಡು ತಿಂಗಳಾದರೂ ಕಾಮಗಾರಿ ಪೂರ್ಣಗೊಳಿಸಿಲ್ಲ. ಮನೆ ಬಾಗಿಲು ಹೊಸ್ತಿಲಿಗೆ ಹೊಂದಿಕೊಂಡು ಕಂದಕವಿದ್ದು, ಇದನ್ನು ದಾಟಿಕೊಂಡು ಓಡಾಡಲು ಮಕ್ಕಳು, ಮಹಿಳೆಯರು ಮತ್ತು ವೃದ್ಧರು ಪರದಾಡುತ್ತಾರೆ.

ಮಳೆಗಾಲದ ಒಳಗೆ ಚರಂಡಿ ನಿರ್ಮಾಣ ಪೂರ್ಣಗೊಳ್ಳಬೇಕಿತ್ತು. ಆದರೆ, ಕಾಮಗಾರಿ ಆಮೆಗತಿಯಲ್ಲಿ ಸಾಗಿದ್ದರಿಂದ ಅಪೂರ್ಣಾವಸ್ಥೆಯಲ್ಲೆ ಉಳಿದಿದೆ. ಚರಂಡಿಗಾಗಿ ಅಗೆದು ಹಾಕಿದ ಕಂದಕದಲ್ಲಿ ಮಳೆನೀರು ತುಂಬಿದ್ದು, ಅದರಲ್ಲಿ ಬೀದಿನಾಯಿಗಳು, ಹಂದಿಗಳು ಹಾಗೂ ದನಕರು ನುಗ್ಗುತ್ತವೆ.

‘ಜನರ ಅನುಕೂಲಕ್ಕೆ ಚರಂಡಿ ಮತ್ತು ರಸ್ತೆ ನಿರ್ಮಿಸುತ್ತಿದ್ದಾರೆ ಎಂದು ಕಷ್ಟವಾದರೂ ಸಹಿಸಿಕೊಂಡಿದ್ದೆವು. ಆದರೆ, ಕಾಮಗಾರಿ ಬೇಗನೆ ಪೂರ್ಣಗೊಳಿಸಿ ಜನರು ಅನುಭವಿಸುತ್ತಿರುವ ತೊಂದರೆ ತಪ್ಪಿಸಲು ಗುತ್ತಿಗೆದಾರರು ಮತ್ತು ಮಹಾನಗರ ಪಾಲಿಕೆ ಎಂಜಿನಿಯರುಗಳು ಕ್ರಮ ವಹಿಸಲಿಲ್ಲ. ಈಗ ಮಳೆಗಾಲದಿಂದ ಚರಂಡಿ ತಗ್ಗು ಭರ್ತಿಯಾಗಿ ಮನೆಗಳ ಮುಂದೆ ಗಲೀಜು ಹೆಚ್ಚಾಗಿದೆ’ ಎಂದು ಅರವಿಂದ ನಗರ ನಿವಾಸಿ ಮಲ್ಲವ್ವ ಪೂಜಾರಿ ತಿಳಿಸಿದರು.

ಹಲವು ಕಡೆ ಸಮಸ್ಯೆ:

ಹುಬ್ಬಳ್ಳಿಯ ಅಕ್ಷಯ ಕಾಲೊನಿ, ಸದಾಶಿವ ನಗರ, ಈಶ್ವರ ನಗರ, ನೇಕಾರ ನಗರ ಮಾರ್ಗಗಳಲ್ಲಿಯೂ ಇದೇ ರೀತಿಯ ಸಮಸ್ಯೆ ಇದೆ. ಚರಂಡಿ ನಿರ್ಮಾಣಕ್ಕೆ ಉದ್ದಕ್ಕೂ ನೆಲ ಅಗೆದು ಹಾಕಲಾಗಿದೆ. ಕಾಮಗಾರಿ ತ್ವರಿತ ಗತಿಯಲ್ಲಿ ಆರಂಭಿಸಲಿಲ್ಲ. ಸಿಮೆಂಟ್ ಬೆಡ್ ಮಾತ್ರ ಹಾಕಲಾಗಿದ್ದು, ಇದೀಗ ಅದರ ಮೇಲೆ ಹೂಳು ತುಂಬಿಕೊಂಡಿದೆ. ನಗರದ ಕೆಲವು ಕಡೆ ಒಳಚರಂಡಿ ನಿರ್ಮಾಣಕ್ಕಾಗಿ ಪಕ್ಕಾ ರಸ್ತೆ ಅಗೆದಿರುವುದ್ದನ್ನು ಮಣ್ಣು ಕಲ್ಲುಗಳಿಂದ ಮುಚ್ಚಲಾಗಿದೆ. ಇದರಿಂದ ಪಕ್ಕಾ ರಸ್ತೆಗಳು ಕಚ್ಚಾ ರಸ್ತೆಗಳಾಗಿ ಮಾರ್ಪಟ್ಟು ಸಮಸ್ಯೆ ಹೆಚ್ಚಾಗಿದೆ.

ಈಗ ಮಳೆಗಾಲ ಆರಂಭವಾಗಿದ್ದರಿಂದ ಅಪೂರ್ಣ ಸ್ಥಿತಿಯಲ್ಲಿರುವ ಕಾಮಗಾರಿ ಸ್ಥಳದಲ್ಲಿ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಜನರು ಸ್ವಲ್ಪ ಯಾಮಾರಿದರೆ ಮುಗ್ಗರಿಸಿ ಬೀಳುವ ಭೀತಿ ಸೃಷ್ಟಿಯಾಗಿದೆ. ಚರಂಡಿಗಾಗಿ ಅಗೆದುಹಾಕಿದ ಮಾರ್ಗಗಳು ಮಳೆನೀರು ಮತ್ತು ಮಣ್ಣಿನಿಂದ ಭರ್ತಿಯಾಗಿವೆ. ಕಾಮಗಾರಿ ಆರಂಭಿಸಲು ಮಳೆಗಾಲ ಮುಗಿಯಲಿ ಎಂದು ಸೆಪ್ಟೆಂಬರ್ ಅಂತ್ಯದವರೆಗೂ ಕಾಯುವ ಅನಿವಾರ್ಯತೆ ಈಗ ಎದುರಾಗಿದೆ.

‘ಸಕಾಲಕ್ಕೆ ಕಾಮಗಾರಿ ಪೂರ್ಣಗೊಳಿಸದ ಕಾರಣ ಹುಬ್ಬಳ್ಳಿಯ ಅನೇಕ ಬಡಾವಣೆಗಳಲ್ಲಿ ಸಿಸಿ ರಸ್ತೆ, ಮಳೆನೀರಿನ ಚರಂಡಿ, ಒಳಚರಂಡಿ ಕಾಮಗಾರಿಗಳು ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿವೆ. ವರ್ಷಗಳು ಉರುಳಿದರೂ ಕೆಲಸ ಮಾತ್ರ ಪೂರ್ಣಗೊಳ್ಳುತ್ತಿಲ್ಲ. ಜನರು ತೊಂದರೆ ಅನುಭವಿಸುವುದು ತಪ್ಪುತ್ತಿಲ್ಲ’ ಎಂಬುದು ಜನರ ಆರೋಪ.

ವಾಹನ ನಿಲುಗಡೆ ಸಮಸ್ಯೆ

ಅರವಿಂದ ನಗರದಲ್ಲಿ ಚರಂಡಿ ನಿರ್ಮಾಣಕ್ಕಾಗಿ ಭೂಮಿ ಅಗೆದಿರುವ ಮಾರ್ಗಗಳಲ್ಲಿ ಜನರು ಬೈಕ್ ಆಟೊ ಸೈಕಲ್ ಹಾಗೂ ಇತರೆ ವಾಹನಗಳನ್ನು ನಿಲುಗಡೆ ಮಾಡುವುದಕ್ಕೆ ಭಾರಿ ಸಮಸ್ಯೆಯಾಗಿದೆ. ದೂರದಲ್ಲಿ ಬೈಕ್ ಆಟೊ ನಿಲುಗಡೆ ಮಾಡಿ ಮನೆಗೆ ಬರುತ್ತಿದ್ದು ಕಳವಾದೀತು ಎನ್ನುವ ಆತಂಕದಲ್ಲೇ ದಿನ ಕಳೆಯುತ್ತಾರೆ. ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ನಿವಾಸಿಗಳು ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.