ಮಂಗಳವಾರ, ಜನವರಿ 18, 2022
23 °C

ಹುಬ್ಬಳ್ಳಿ: ವಿವಿಧ ಕಾಮಗಾರಿಗೆ ಶಾಸಕ ಜಗದೀಶ ಶೆಟ್ಟರ್‌ ಭೂಮಿಪೂಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ನಗರದ ವಿವಿಧ ಬಡಾವಣೆಗಳಲ್ಲಿ ಶಾಸಕ ಜಗದೀಶ ಶೆಟ್ಟರ್‌ ಅವರು ಭಾನುವಾರ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು.

ಶಬರಿ ನಗರದಲ್ಲಿ ಪಾಲಿಕೆ ಅನುದಾನದಡಿ ₹42 ಲಕ್ಷ ವೆಚ್ಚದಲ್ಲಿ ತೆರೆದ ಚರಂಡಿ ಕಾಮಗಾರಿ, ವಾರ್ಡ್ ಸಂಖ್ಯೆ 59ರ ವ್ಯಾಪ್ತಿಯಲ್ಲಿ ₹40 ಲಕ್ಷ ವೆಚ್ಚದಲ್ಲಿ ನವೀನ್ ಪಾರ್ಕ್ ಕಾಂಪೌಂಡ್‌ ನಿರ್ಮಾಣ, ₹19.50 ಲಕ್ಷ ವೆಚ್ಚದಲ್ಲಿ ಎಸ್‌ಎಲ್‌ಎನ್‌ ಎಸ್ಟೇಟ್‌ನಲ್ಲಿ ಮುಖ್ಯ ರಸ್ತೆ ಡಾಂಬರೀಕರಣ, ಲೋಕಪ್ಪನ ಹಕ್ಕಲದಲ್ಲಿ ₹30 ಲಕ್ಷ ವೆಚ್ಚದಲ್ಲಿ ಪೇವರ್ಸ್ ಅಳವಡಿಕೆ, ₹16 ಲಕ್ಷ ವೆಚ್ಚದಲ್ಲಿ ಚಾಮುಂಡೇಶ್ವರಿ ನಗರದ ರಸ್ತೆ ಡಾಂಬರೀಕರಣ, ₹4 ಲಕ್ಷ ವೆಚ್ಚದಲ್ಲಿ ತೆರೆದ ಚರಂಡಿ ನಿರ್ಮಾಣ, ₹33 ಲಕ್ಷ ವೆಚ್ಚದಲ್ಲಿ ಮಹಾಲಕ್ಷ್ಮಿ ಲೇಔಟ್ ರಸ್ತೆ ಹಾಗೂ ₹ 34 ಲಕ್ಷ ವೆಚ್ಚದಲ್ಲಿ ಸಪ್ತಗಿರಿ ಲೇಔಟ್ ರಸ್ತೆ ಡಾಂಬರೀಕರಣ ಕಾಮಗಾರಿಗಳಿಗೆ ಶೆಟ್ಟರ್‌ ಚಾಲನೆ ನೀಡಿದರು. ನವೀನ ಪಾರ್ಕ್ ಉದ್ಯಾನ ಅಭಿವೃದ್ಧಿ ಕಾಮಗಾರಿ ಆರಂಭಿಸಿದರು.

ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಪ್ರಮುಖರಾದ ಉಮಾ ಮುಕುಂದ್, ಶಂಕರ ಸುಂಕದ, ನಿಜಗುಣ ದೇವೂರು, ಮಲ್ಲಿಕಾರ್ಜುನ ಸಾವುಕಾರ, ಸುವರ್ಣ ಕಲಕುಂಟ್ಲ, ವಿರೂಪಾಕ್ಷ ರಾಯನಗೌಡ್ರ, ವಸಂತ ಹೊರಟ್ಟಿ, ನೀಲಕಂಠ ಆಕಳವಾಡಿ, ಗೋವಿಂದ ಜೋಶಿ, ಎನ್. ಎ. ಚರಂತಿಮಠ, ವಿ. ಎಸ್. ವಿ ಪ್ರಸಾದ ಬಾಗಲಕೋಟೆ ವೀರೇಂದ್ರ ಶೆಟ್ಟಿ ಬೆಂಬಳಗಿ ಮತ್ತಿತರರು ಇದ್ದರು.

ಸಭೆ: ಬಿಆರ್‌ಟಿಎಸ್ ಕಾರಿಡಾರ್, ಮಿಶ್ರಪಥ ಮತ್ತಿತರ ಕಡೆಗಳಲ್ಲಿ ವಾಹನ ಸಂಚಾರ ಕುರಿತು ನಗರದ ಸರ್ಕಿಟ್‌ ಹೌಸ್‌ನಲ್ಲಿ ಶೆಟ್ಟರ್‌ ಅವರು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಗುರುದತ್ ಹೆಗಡೆ, ಮುಖ್ಯ ಸಂಚಾರ ವ್ಯವಸ್ಥಾಪಕ ರಾಜೇಂದ್ರ ಹುದ್ದಾರ, ಮುಖ್ಯ ಕಾನೂನು ಅಧಿಕಾರಿ ಬಾಲಾನಾಯಕ ಸೇರಿದಂತೆ ಇತರ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು