ಕಲಘಟಗಿ: ಚಿನ್ನದ ಆಭರಣ ಕಳವು ಮಾಡುತ್ತಿದ್ದ ನಾಲ್ವರು ಆರೋಪಿಗಳ ಬಂಧಿಸುವಲ್ಲಿ ಕಲಘಟಗಿ ಪೊಲೀಸರ ತಂಡವು ಯಶಸ್ವಿಯಾಗಿದೆ. ಬಂಧಿತರಿಂದ 85 ಗ್ರಾಂ ಚಿನ್ನಾಭರಣ ಹಾಗೂ 200 ಗ್ರಾಂ ತೂಕದ ಬೆಳ್ಳಿಯ ಆಭರಣ ವಶಪಡಿಸಿಕೊಂಡಿದ್ದಾರೆ.

ಕಿತ್ತೂರ ತಾಲ್ಲೂಕಿನ ಅಲಸಿ ಗ್ರಾಮದ ರಾಜು ಕಿತ್ತೂರಕರ, ಹುಬ್ಬಳ್ಳಿಯ ತೊರವಿಹಕ್ಕಲ್ ನಿವಾಸಿ ಪ್ರೇಮ ಶ್ರೀಕಾಂತ ಬದ್ದಿ, ಕಮರಿಪೇಟೆಯ ಪವನ ವಿನೋದ ಮೆರವಾಡ, ಕಲಘಟಗಿ ತಾಲ್ಲೂಕಿನ ಕುರುವಿನಕೊಪ್ಪ ಗ್ರಾಮದ ಮಂಜುನಾಥ ಚೆನ್ನಬಸಪ್ಪ ಇದ್ದಿಕಾರ ಬಂಧಿತ ಆರೋಪಿಗಳು. ಕಲಘಟಗಿ ಪೊಲೀಸರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ವಿವಿಧ ಆಭರಣ ಕಳವಾಗಿದ್ದ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು.

ಮೇಲಧಿಕಾರಿಗಳ ನಿರ್ದೇಶನದಂತೆ ಠಾಣೆಯ ಸಿಪಿಐ ಶ್ರೀಶೈಲ ಕೌಜಲಗಿ ನೇತೃತ್ವದಲ್ಲಿ ಬೆರಳು ಮುದ್ರೆ ಘಟಕದ ಪಿಐ ಮಹಾಂತೇಶ, ಪಿಎಸ್ಐ ಸಿ.ಎನ್ ಕರವೀರಪ್ಪನವರ ಹಾಗೂ ಎ.ಎಂ.ನವಲೂರ, ಶಂಕರ ಮುತ್ತಲಗೇರಿ, ಲೋಕೇಶ ಬೆಂಡಿಕಾಯಿ, ಮಹಾಂತೇಶ ಎನ್., ಮಹಮ್ಮದ್ ಹುಸೇನ ಯಲಿಗಾರ, ಮಲ್ಲಿಕಾರ್ಜುನ ಎಂ., ಗೋಪಾಲ ಪಿರಗಿ, ಪ್ರಕಾಶ ಘೋಳಪ್ಪಗೌಡ್ರ, ಯಶವಂತ ಹಂಚಿನಮನಿ, ಮಹಾಂತೇಶ ಹಡಪದ, ರಮೇಶ ನೇಕಾರ, ಜಾವೀದ್ ಇಟಗಿ ಬೆರಳು ಮುದ್ರೆ ಘಟಕ, ಆರೀಪ್ ಗೋಲಂದಾಜ, ವಿಠಲ ಡಂಗನವರ ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.