ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹೈಡ್ ಆ್ಯಂಡ್ ಸೀಕ್’ ಬಿಡುಗಡೆ 15ರಂದು

Published 10 ಮಾರ್ಚ್ 2024, 6:05 IST
Last Updated 10 ಮಾರ್ಚ್ 2024, 6:05 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಹೈಡ್‌ ಆ್ಯಂಡ್‌ ಸೀಕ್ ಸಿನಿಮಾ ಮಾರ್ಚ್ 15ರಂದು 70ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ’ ಎಂದು ಸಿನಿಮಾದ ನಾಯಕ ನಟ ಅನೂಪ್ ರೇವಣ್ಣ ಹೇಳಿದರು.

ಶನಿವಾರ ಪತ್ರಿಕಾಷ್ಠಿಯಲ್ಲಿ ಮಾತನಾಡಿದ ಅವರು, ‘ಉದ್ಯಮಿಯೊಬ್ಬರ ಪುತ್ರಿಯ ಅಪಹರಣದ ಸುತ್ತ ಚಿತ್ರಕಥೆ ಹೆಣೆಯಲಾಗಿದೆ. ಇದು ಸಸ್ಪೆನ್ಸ್, ಥ್ರಿಲ್ಲರ್ ಸಿನಿಮಾ. ಧನ್ಯ ರಾಮ್‌ಕುಮಾರ್ ಚಿತ್ರದ ನಾಯಕಿಯಾಗಿದ್ದಾರೆ’ ಎಂದರು.

‘ಇದು ನನ್ನ ನಾಲ್ಕನೇ ಸಿನಿಮಾ. ಇದರಲ್ಲಿ ನಾನು ಕಿಡ್ನ್ಯಾಪರ್ ಪಾತ್ರ ನಿರ್ವಹಿಸಿದ್ದೇನೆ. ಸಿನಿಮಾದಲ್ಲಿ ಎರಡು ಹಾಡುಗಳಿವೆ’ ಎಂದು ತಿಳಿಸಿದರು.

ಸಿನಿಮಾದ ನಿರ್ದೇಶಕ ಪುನೀತ್‌ ಕುಮಾರ್ ಮಾತನಾಡಿ, ‘ಇದು ನನ್ನ ನಿರ್ದೇಶನದ ಮೊದಲ ಸಿನಿಮಾ. ಮಾಗಡಿ, ಚಿಕ್ಕಮಗಳೂರು, ಬೆಂಗಳೂರು ಸುತ್ತಮುತ್ತ 35 ದಿನ ಚಿತ್ರೀಕರಣ ಮಾಡಲಾಗಿದೆ’ ಎಂದರು.

‘ಸ್ಯಾಂಡಿ ಅದ್ದಂಕಿ ಸಂಗೀತ ನಿರ್ದೇಶನ, ರಿಜೋ ಪಿ.ಜಾನ್ ಛಾಯಾಗ್ರಣ ಮಾಡಿದ್ದಾರೆ. ಅರವಿಂದರಾವ್, ರಾಜೇಶ ನಟರಂಗ, ಕೃಷ್ಣ ಹೆಬ್ಬಾಳೆ, ರಕ್ಷಾ ಉಮೇಶ್‌, ಕಾಮಿಡಿ ಕಿಲಾಡಿಗಳು ಖ್ಯಾತಿಯ ಸೂರಜ್ ಅಭಿನಯಿಸಿದ್ದಾರೆ’ ಎಂದು ಹೇಳಿದರು.

ಮೈತ್ರಿ ಜಗದೀಶ, ಶಿವಾನಂದ ಮುತ್ತಣ್ಣವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT