ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ಗೀಗೀಪದ ಹಾಡುಗಾರ್ತಿ ಸಾವಿತ್ರಿ ಪೂಜಾರಗೆ ‘ರಾಜ್ಯೋತ್ಸವ’ ಗೌರವ

Last Updated 30 ಅಕ್ಟೋಬರ್ 2022, 15:41 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕಡು ಬಡತನದಲ್ಲಿ ಬೆಳೆದು ಗೀಗೀ ಪದಗಳ ಮೂಲಕ ಜನಪದ ಕಲೆಯನ್ನು ಉಳಿಸಿ ಬೆಳೆಸುತ್ತಿರುವ ಧಾರವಾಡ ಜಿಲ್ಲೆಯ ನವಲಗುಂದ ತಾಲ್ಲೂಕಿನ ಬೆಳವಟಗಿ ಗ್ರಾಮದ ಜನಪದ ಕಲಾವಿದೆ ಸಾವಿತ್ರಿ ಶಿವಪ್ಪ ಪೂಜಾರ ಅವರು, ಪ್ರಸಕ್ತ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

1991ರಲ್ಲಿ ಬೆಳವಟಗಿ ಗ್ರಾಮದಲ್ಲಿ ಜನಿಸಿರುವ ಸಾವಿತ್ರಿ ಅವರು, ನಾಲ್ಕನೇ ತರಗತಿವರೆಗೆ ಓದಿದ್ದಾರೆ. ಕಡು ಬಡತನದಲ್ಲಿ ಬೆಳೆದ ಅವರು, ಸಮಸ್ಯೆಗಳನ್ನೇ ಮೆಟ್ಟಿಲಾಗಿ ಮಾಡಿಕೊಂಡರು. ಚಿಕ್ಕಂದಿನಿಂದಲೇ ಜಾನಪದ ಕ್ಷೇತ್ರದಲ್ಲಿ ಒಲವು ಬೆಳೆಸಿಕೊಂಡು ಸಾಧನೆ ಮಾಡಿದವರು.

ದೇವದಾಸಿ ವಿಮೋಚನಾ ಸಂಘಟನೆಯಲ್ಲಿ ಸಕ್ರಿಯವಾಗಿರುವ ಸಾವಿತ್ರಿ, ದೇವದಾಸಿ ಪದ್ಧತಿ ವಿರುದ್ಧ ನಡೆಸಿದ ಅನೇಕ ಹೋರಾಟಗಳಲ್ಲಿ ಪಾಲ್ಗೊಂಡು, ಧ್ವನಿ ಎತ್ತಿದ್ದಾರೆ. ಜನಪದ ಹಾಡುಗಳ ಮೂಲಕ, ಮಹಿಳೆಯರ ಮೇಲಾಗುತ್ತಿರುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ಅನೇಕ ಸಂಘ, ಸಂಸ್ಥೆಗಳಲ್ಲೂ ಗುರುತಿಸಿಕೊಂಡಿದ್ದಾರೆ.

ಅವರ ಸಾಧನೆಗೆ ತತ್ವಸಿರಿ ಕಲಾ ಸನ್ಮಾನ, ಜಾನಪದ ವಿಶ್ವ ವಿದ್ಯಾಲಯದಿಂದ ಸನ್ಮಾನ, ಕರ್ನಾಟಕ ವಿದ್ಯಾವರ್ಧಕ ಸಂಘದಿಂದ ಜಾನಪದ ಕೋಗಿಲೆ ಫಕ್ಕಿರಪ್ಪ ಗುಡಿಸಾಗರ ಪ್ರಶಸ್ತಿ, ಜಿಲ್ಲಾಡಳಿತದಿಂದ ಬಾಬು ಜಗಜೀವನರಾಮ್‌ ಪ್ರಶಸ್ತಿ ಸೇರಿದಂತೆ ಅನೇಕ ಸಂಘ–ಸಂಸ್ಥೆಗಳು ಅವರಿಗೆ ಪ್ರಶಸ್ತಿ–ಪುರಸ್ಕಾರ ನೀಡಿ ಗೌರವಿಸಿವೆ.

*

ಹಳ್ಳಿಗಾಡಿನ ನನ್ನಂತಹ ಕಲಾವಿದರನ್ನು ಸರ್ಕಾರ ಗುರುತಿಸಿ ಪ್ರಶಸ್ತಿ ನೀಡಿದ್ದು ಸಂತೋಷ ತಂದಿದೆ. ನನ್ನನ್ನು ಪ್ರೋತ್ಸಾಹಿಸಿದವರಿಗೆ ಹಾಗೂ ನನ್ನೂರ ಮಂದಿಗೆ ಈ ಪ್ರಶಸ್ತಿ ಅರ್ಪಿಸುತ್ತೇನೆ
– ಸಾವಿತ್ರಿ ಪೂಜಾರ, ಜಾನಪದ ಕಲಾವಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT