ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಸ್‌ಎಸ್‌ಎಸ್‌ ಕಾಲೇಜು ವಿದ್ಯಾರ್ಥಿಗಳ ಸಾಧನೆ

Last Updated 22 ಜೂನ್ 2022, 2:33 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದ ಹೊರವಲಯದ ಬುಡರಸಿಂಗಿಯಲ್ಲಿರುವ ಕರ್ನಾಟಕ ಶಿಕ್ಷಣ ಸೇವಾ ಸಮಿತಿ (ಕೆ.ಎಸ್‌.ಎಸ್‌.ಎಸ್‌) ವಿಜ್ಞಾನ ಹಾಗೂ ವಾಣಿಜ್ಯ ಪದವಿಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.

ಪರೀಕ್ಷೆ ಹಾಜರಾದ ವಿಜ್ಞಾನ ವಿಭಾಗದ 139 ವಿದ್ಯಾರ್ಥಿಗಳ ಪೈಕಿ 55 ಮಂದಿ ಉನ್ನತ ಶ್ರೇಣಿ, 63 ಪ್ರಥಮ ಹಾಗೂ 8 ಮಂದಿ ದ್ವಿತೀಯ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ವಾಣಿಜ್ಯ ವಿಭಾಗದ 52 ಮಂದಿಯ ಪೈಕಿ 14 ಉನ್ನತ ಶ್ರೇಣಿ, 24 ಪ್ರಥಮ ಶ್ರೇಣಿ ಹಾಗೂ 7 ಮಂದಿ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಉತ್ತೀರ್ಣರಾದ ವಿದ್ಯಾರ್ಥಿಗಳ ವಿವರ: ವಿಜ್ಞಾನ ವಿಭಾಗ– ಸಹನಾ ಹಿರೇಮಠ (ಶೇ 99.75), ಶಿವಲೀಲಾ ಹಿರೇಮಠ (ಶೇ 99.25), ಚಿನ್ಮಯಿ ಮೇಲಗೇರಿ (ಶೇ 98.75), ಪ್ರದೀಪಗೌಡ ಬಿ.ಡಿ (ಶೇ 98.75), ಸತ್ಯಬೋಧ ಬೆಳಗಲಿ (ಶೇ 98.50), ಚೇತನ ಘೋರ್ಪಡೆ (ಶೇ 98), ಐಶ್ವರ್ಯಾ ದೇಸಾಯಿ (ಶೇ 98), ಬಸವರಾಜ ಅಬ್ಬಿಗೇರಿ (ಶೇ 98), ರವೀಂದ್ರ ಸವದತ್ತಿ (ಶೇ 97.50), ವೈಷ್ಣವಿ ಮೇಲಗೇರಿ (ಶೇ 97.50), ರೋಹಿತ್ ಹೆಗಡೆ (ಶೇ 97.50)

ವಾಣಿಜ್ಯ ವಿಭಾಗ– ಸ್ಫೂರ್ತಿ ಬೆಂಡಿಗೇರಿಮಠ (ಶೇ 95.67), ಮೇಘಾ ಕೆ. ಪಾಟೀಲ (ಶೇ 95.33), ಆದಿತ್ಯ ದೊಡ್ಡಮನಿ (ಶೇ 95)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT