ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ: ಹೊಲಕ್ಕೆ ನುಗ್ಗಿ ಮೂರು ಕರುಗಳನ್ನು ಕೊಂದ ಚಿರತೆ

Published 30 ಮಾರ್ಚ್ 2024, 7:54 IST
Last Updated 30 ಮಾರ್ಚ್ 2024, 7:54 IST
ಅಕ್ಷರ ಗಾತ್ರ

ಧಾರವಾಡ: ತಾಲ್ಲೂಕಿನ ಮನಸೂರು ಗ್ರಾಮದ ಹೊಲಕ್ಕೆ ಚಿರತೆಯೊಂದು ನುಗ್ಗಿ ಮೂರು ಕರುಗಳನ್ನು ಕೊಂದಿದೆ.

ಬೆಳಿಗ್ಗೆ 3 ಗಂಟೆ ವೇಳೆಯಲ್ಲಿ ರಾಜೀವ ದೀಕ್ಷಿತ ಅವರ ಹೊಲಕ್ಕೆ ಚಿರತೆ ದಾಳಿ ಮಾಡಿದೆ. ಮೂರು ಕರುಗಳ ಮೇಲೆ ಎರಗಿದೆ ಒಂದು ಗ್ರಾಮ ಪಂಚಾಯಿತಿ ಸದಸ್ಯ ಬಸವರಾಜ ಅಮರಗೋಳ ತಿಳಿಸಿದರು.

ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿದರು. ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಚಿರತೆಯನ್ನು ಸೆರೆ ಹಿಡಿಯುವಂತೆ ಒತ್ತಾಯಿಸಿದರು.

'ಚಿರತೆ ಸೆರೆ ನಿಟ್ಟಿನಲ್ಲಿ 'ಕೂಂಬಿಂಗ್' ಆರಂಭಿಸಲಾಗಿದೆ. ಮತ್ತೆ ಎರಡು ಕಡೆ ಬೋನು ಇಟ್ಟಿದ್ದೇವೆ' ಎಂದು ಉಪ ಅರಣ್ಯಸಂರಕ್ಷಣಾಧಿಕಾರಿ ವಿವೇಕ್ ಕೌರಿ 'ಪ್ರಜಾವಾಣ' ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT