ಹುಬ್ಬಳ್ಳಿ: ನಗರದ ಸಿದ್ಧಾರೂಢ ಮಠ ಸಮೀಪದ ಸಿದ್ಧಾರೂಢ ನಗರದ ಮುಖ್ಯ ರಸ್ತೆಯ ಸಿ.ಸಿ ರಸ್ತೆಯನ್ನು ಈಗಿರುವ ಹಳೇ ರಸ್ತೆಗಿಂತ ಎತ್ತರಗೊಳಿಸಬಾರದು ಎಂದು ಸ್ಥಳೀಯ ನಿವಾಸಿಗಳು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರಿಗೆ ಇತ್ತೀಚೆಗೆ ಮನವಿ ಸಲ್ಲಿಸಿದರು.

ಸಿ.ಸಿ ರಸ್ತೆ ಕಾಮಗಾರಿಗೆ ಸಚಿವರು ಇತ್ತೀಚೆಗೆ ಚಾಲನೆ ನೀಡಿದ್ದು, ಕಾಮಗಾರಿ ಕೂಡ ಪ್ರಾರಂಭಿಸಲಾಗಿದೆ. ಆದರೆ, ಈಗಾಗಲೇ ಹಳೇ ರಸ್ತೆಯು ಇಲ್ಲಿನ ಮನೆಗಳಿಗಿಂತ ಹೆಚ್ಚು ಎತ್ತರವಿದೆ.ಪ್ರತಿ ಸಲ ರಸ್ತೆಯ ಎತ್ತರವನ್ನು ಏರಿಸುತ್ತಾ ಬರಲಾಗಿದೆ. ರಸ್ತೆಗೆ ಸಮಾನವಾಗಿ ಇದ್ದ ಮನೆಗಳು ಈಗ ಅರ್ಧ ಮುಚ್ಚಿದಂತಾಗಿವೆ. ಇದರಿಂದ ವಾಸ ಮಾಡಲು ತೊಂದರೆಯಾಗುತ್ತಿದೆ. ಹಾಗಾಗಿ, ರಸ್ತೆ ಎತ್ತರವನ್ನು ಹೆಚ್ಚಿಸಬಾರದು ಎಂದು ಮನವಿ ಮಾಡಿದರು.

ಸ್ಥಳೀಯ ನಿವಾಸಿಗಳಾದ ಎಚ್. ರೂಗಿ, ತೋಟಪ್ಪ, ಚನ್ನಬಸಪ್ಪ ಗೊಳಸಂಗಿ, ರವಿ ಕಟ್ಟೀಮನಿ, ಗುರುರಾಜ ಚಿಲ್ಲಾಳ, ವೀರೋಬಾ ಢಗೆ, ವಿನಾಯಕ ಗುಗ್ಗರಿ, ಮೋಹನ ಕುಂದಗೋಳ, ರವಿ ರೂಗಿ, ಬಸವರಾಜ ಸ್ಥಾವರಮಠ, ಸಂತೋಷ ಜೋಶಿ, ಜಿ.ಬಿ. ಗುಂಜಾಳ, ಸುಭಾಷ ಕುದರಿ, ಉದಯ ಜೋಶಿ, ಪವನ ನಾಯ್ಡು, ಕವಿತಾ ಚಿಲ್ಲಾಳ, ಯಶೋಧಾ ಸವಣೂರ, ಕೋಮಲ್ ಕಟ್ಟಿಮನಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.