ಧಾರವಾಡ: ಹೈಕೋರ್ಟ್ ಧಾರವಾಡ ಪೀಠದಲ್ಲಿ ಶನಿವಾರ ನಡೆದ ವಿಶೇಷ ಲೋಕ ಅದಾಲತ್ನಲ್ಲಿ 1274 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ.

ಆರು ಪೀಠಗಳನ್ನು ವ್ಯವಸ್ಥೆ ಮಾಡಲಾಗಿತ್ತು. ನ್ಯಾಯಮೂರ್ತಿಗಳಾದ ಎಸ್. ಜಿ.ಪಂಡಿತ, ಇ.ಎಸ್.ಇಂದಿರೇಶ್, ವಿ.ಶ್ರೀಶಾನಂದ, ಸಿ.ಎಂ. ಪೂಣಚ್ಚ, ಜಿ. ಬಸವರಾಜ ಮತ್ತು ಉಮೇಶ ಎಂ.ಅಡಿಗ ಪ್ರಕರಣಗಳನ್ನು ಇತ್ಯರ್ಥಪಡಿಸಿದರು. ಅದಾಲತ್ನ ಸದಸ್ಯರಾದ ಗೋಪಾಲ ಬಿ. ಪಾಟೀಲ, ಸಾಜೀದ ಗೂಡವಾಲಾ, ರಾಕೇಶ ಎಂ.ಬಿಳ್ಕಿ, ವಿ.ಪಿ. ವಡವಿ, ಸೀತಾಲಕ್ಷ್ಮಿ ಪುರ್ಲಿ ಮತ್ತು ಶೈಲಾ ಬೆಳ್ಳಿಕಟ್ಟಿ ಇದ್ದರು.

ಚೆಕ್ ಅಮಾನ್ಯ ಪ್ರಕರಣಗಳ ಮೇಲ್ಮನವಿ 43, ಸಿವಿಲ್ ಪ್ರಕರಣ ಎರಡು, ರಿಟ್ ಅರ್ಜಿ ಐದು ಸಹಿತ 1274 ಪ್ರಕರಣ ಇತ್ಯರ್ಥಪಡಿಸಲಾಗಿದೆ. 1274 ಪ್ರಕರಣಗಳಲ್ಲಿ 173 ಪ್ರಕರಣಗಳನ್ನು ₹ 3.70 ಕೋಟಿ ಮೊತ್ತಕ್ಕೆ ಇತ್ಯರ್ಥಪಡಿಸಲಾಯಿತು. ಹಲವರು ವರ್ಷಗಳಿಂದ ಬಾಕಿ ಇದ್ದ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ಹೈಕೋರ್ಟ್ ಕಾನೂನು ಸೇವಾ ಸಮಿತಿ ಧಾರವಾಡ ಪೀಠದ ಕಾರ್ಯದರ್ಶಿ ಜೆರಾಲ್ಡ್ ರುಡಾಲ್ಫ್ ಮೆಂಡೋನ್ಸಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.