ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸತತ ಮಳೆಗೆ ಅಪಾರ ಪ್ರಮಾಣದ ಈರುಳ್ಳಿ ಬೆಳೆ ಹಾನಿ

ಕೊಳೆ ರೋಗ ಬಾಧೆ: ಪರಿಹಾರಕ್ಕೆ ರೈತರ ಮೊರೆ
ಅಬ್ದುಲರಝಾಕ ನದಾಫ್
Published 12 ಆಗಸ್ಟ್ 2024, 6:19 IST
Last Updated 12 ಆಗಸ್ಟ್ 2024, 6:19 IST
ಅಕ್ಷರ ಗಾತ್ರ

ನವಲಗುಂದ: ಈರುಳ್ಳಿ ಬಿತ್ತಿದ ರೈತರ ಮೊಗದಲ್ಲಿ ಈ ವರ್ಷ ಮಂದಹಾಸ ಮೂಡಿತ್ತು. ಬೆಳೆ ಚನ್ನಾಗಿ ಬರುತ್ತಿದೆ ಎಂದು ಯೋಜಿಸುತ್ತಿದ್ದರು. ಆ ವೇಳೆಗೆ ಮಳೆ ಸುರಿದ ಪರಿಣಾಮ ಈರುಳ್ಳಿ ಸಂಪೂರ್ಣವಾಗಿ ನೀರುಪಾಲಾಗಿದೆ. ಈರುಳ್ಳಿ ಬೆಳಿದಿದ್ದ ರೈತರು ಕಂಗಾಲಾಗಿದ್ದಾರೆ.

ಕಳೆದ ಗುರುವಾರ ಸುರಿದ ಮಳೆಗೆ ತಾಲ್ಲೂಕಿನ ಯಮನೂರ ಗ್ರಾಮ ಪಂಚಾಯತಿ ವ್ಯಾಪ್ತಿಯ ಕುಮಾರಗೊಪ್ಪ ಹದ್ದಿನಲ್ಲಿರುವ ರೈತನ ಹೊಲದ ಈರುಳ್ಳಿ ಬೆಳೆ ಹೊಲದಲ್ಲಿ ನೀರು ನಿಂತು ಅಪಾರ ಪ್ರಮಾಣದಲ್ಲಿ ಬೆಳೆಹಾನಿಗಿದೆ

ಬಿತ್ತಿದ ದುಬಾರಿ ಬೀಜ, ಬಿತ್ತನೆ ಖರ್ಚು, ಕಳೆ ತಗೆಸುವುದು, ಔಷಧಿ ಸಿಂಪಡಣೆ ಮಾಡುವುದು ಸೇರಿ ಎಕರೆಗೆ ಕನಿಷ್ಟ ₹ 25-30 ಸಾವಿರ ರೂಪಾಯಿ ಖರ್ಚು‌ ಮಾಡಿದ್ದಾರೆ. ಸದ್ಯ ಮಾರುಕಟ್ಟೆಯಲ್ಲಿ ಈರುಳ್ಳೆ ಪ್ರತಿ ಕೆ.ಜಿ.ಗೆ ₹ 45 ರಿಂದ ₹ 55ನಂತೆ ಮಾರಾಟ ಮಾಡಲಾಗುತ್ತಿದೆ ಆದರೆ ಬಿತ್ತಿದ ಈರುಳ್ಳಿ ಬೆಳೆ ನೀರು ನಿಂತು ಕೊಳೆ ರೋಗ ಬಂದು ಬೆಳೆ ಕೈಗೆ ಬಾರದ ಪರಿಸ್ಥಿತಿ ಬಂದೊಗಿದೆ ಎಂದು ರೈತರು ಅಳಲು ತೋಡಿಕೊಂಡರು.

‘ಸಾಲ ಸೋಲ ಮಾಡಿ ಈರುಳ್ಳಿ ಬಿತ್ತಿದ ಬೆಳಗಾರರಿಗೆ ಮಳೆಯಿಂದ ನಷ್ಟ ಉಂಟಾಗಿದೆ. ಕಳೆದ ಕೆಲದಿನಗಳಿಂದ ಮಳೆ ಅಬ್ಬರಿಸಿದ್ದರಿಂದಾಗಿ ಈರುಳ್ಳಿ ಬೆಳೆ ಹಾಳಾಗಿವೆ. ಕೈಗೆ ಬಂದ ತುತ್ತು ಬಾಯಿಗೆ ಬಾರದಂತೆ ಆಗಿದೆ’ ಎಂದರು.

ಕಳೆದ ವರ್ಷವು ಬರಗಾಲಕ್ಕೆ ನಲುಗಿದ ರೈತರು ಮತ್ತೆ ಈ ವರ್ಷ ಅತೀ ಮಳೆಯಿಂದ ಗಾಯದ ಮೇಲೆ ಬರೆ ಎಳೆದಂತೆ ಮಳೆಯಿಂದ ಅಪಾರ ಪ್ರಮಾಣದ ಉಳ್ಳಾಗಡ್ಡಿ, ಹೆಸರು, ಉದ್ದು ಬೆಳೆ‌ಗಳಿಗೆ ಹಾನಿಯಾಗಿದೆ. ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ರೈತರ ಹೊಲಗಳಿಗೆ ಭೇಟಿ ನೀಡಿ ಸರ್ಕಾರದಿಂದ ಬರುವ ಪರಿಹಾರ ಒದಗಿಸಬೇಕು ಎಂದು ರೈತ ಹೋರಾಟಗಾರ ಲೋಕನಾಥ್ ಹೇಬಸೂರ್ ಆಗ್ರಹಿಸಿದರು.

ನವಲಗುಂದ ತಾಲ್ಲೂಕಿನ ಕುಮಾರಗೊಪ್ಪ ಗ್ರಾಮದ ಜಮೀನಿನಲ್ಲಿ ಜಲಾವೃತವಾಗಿರುವ ಈರುಳ್ಳಿ ಬೆಳೆ
ನವಲಗುಂದ ತಾಲ್ಲೂಕಿನ ಕುಮಾರಗೊಪ್ಪ ಗ್ರಾಮದ ಜಮೀನಿನಲ್ಲಿ ಜಲಾವೃತವಾಗಿರುವ ಈರುಳ್ಳಿ ಬೆಳೆ
ಜಮೀನಿನಲ್ಲಿ ನೀರು ನಿಲ್ಲದಂತೆ ಒಡ್ಡು ಒಡೆದು ಹೊರಹೋಗುವಂತೆ ಮಾಡುವುದೊಂದೇ ದಾರಿ. ಹಾಗಾಗಿ ಜಮೀನಿನಲ್ಲಿ ಸದ್ಯಕ್ಕೆ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಬೇಕು. ಸತತ ಮಳೆಯಿಂದ ಹಲವೆಡೆ ಇಳುವರಿ ನಷ್ಟವಾಗಿರುವ ವರದಿ ಬಂದಿದ್ದು ಸಮೀಕ್ಷೆ ನಡೆಸಲಾಗುವುದು
ಸಂಜೀವಕುಮಾರ ಗುಡಿಮನಿ , ಸಹಾಯಕ ತೋಟಗಾರಿಕೆ ನಿರ್ದೇಶಕರು ತೋಟಗಾರಿಕೆ ಇಲಾಖೆ ನವಲಗುಂದ
20 ಎಕರೆಯಲ್ಲಿ ಈರುಳ್ಳಿ ಬಿತ್ತಿದ್ದು ಈ ವರ್ಷ ಉತ್ತಮ ಇಳುವರಿ ನಿರೀಕ್ಷೆಯಿತ್ತು ಬಿಡುವಿಲ್ಲದ ಮಳೆಯಿಂದಾಗಿ ಈರುಳ್ಳಿ ಬೆಳೆ ಸಂಪೂರ್ಣ ನೀರುಪಾಲಾಗಿ ಕೊಳೆಯುತ್ತಿದೆ
ಮಂಜುನಾಥ ಸುಬೇದಾರ ಈರುಳ್ಳಿ ಬೆಳೆಗಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT