ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹುಬ್ಬಳ್ಳಿ | ‘ಮಧ್ಯರಾತ್ರಿವರೆಗೆ ಆಹಾರ ಮಳಿಗೆ ತೆರೆಯಲು ಅನುಮತಿ ನೀಡಿ’

Published 9 ನವೆಂಬರ್ 2023, 16:04 IST
Last Updated 9 ನವೆಂಬರ್ 2023, 16:04 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದ ಚನ್ನಮ್ಮ ವೃತ್ತ ಹಾಗೂ ಹಳೆ ಬಸ್ ನಿಲ್ದಾಣದಲ್ಲಿ ಮಧ್ಯ ರಾತ್ರಿವರೆಗೂ ಆಹಾರ ಮಳಿಗೆಗಳನ್ನು ತೆರೆಯಲು ಪರವಾನಗಿ ನೀಡಬೇಕು ಎಂದು ಆಮ್‌ ಆದ್ಮಿ ಪಕ್ಷದ ಕಾರ್ಯಕರ್ತರು ಗುರುವಾರ ಹು–ಧಾ ಪೊಲೀಸ್ ಕಮಿಷನರ್ ರೇಣುಕಾ ಸುಕುಮಾರ್ ಅವರಿಗೆ ಮನವಿ ಸಲ್ಲಿಸಿದರು.

‘ರಾತ್ರಿ ವೇಳೆ ರಾಜ್ಯ ಮತ್ತು ಅಂತರರರಾಜ್ಯ ಸಾರಿಗೆ ಬಸ್‌ಗಳು ಸಂಚರಿಸುತ್ತವೆ. ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತಾರೆ. ರಾತ್ರಿ 10.30ರ ನಂತರ ಚನ್ನಮ್ಮ ವೃತ್ತದಲ್ಲಿ ಯಾವುದೇ ಮಳಿಗೆಗಳನ್ನು ತೆರೆಯಲು ಪರವಾನಿಗೆ ಇಲ್ಲ. ಇದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ’ ಎಂದು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಪ್ರವೀಣ ನಡಕಟ್ಟಿನ ಹೇಳಿದರು.

‘ಕಾನೂನುಬಾಹಿರ ಕೃತ್ಯಗಳನ್ನು ತಡೆಯಲು ಈ ನಿರ್ಧಾರ ಸರಿಯಾಗಿದೆ. ಆದರೆ, ವಾಣಿಜ್ಯ ನಗರಿ ವೇಗವಾಗಿ ಬೆಳೆಯುತ್ತಿದ್ದು, ಪ್ರಯಾಣಿಕರ ಹಿತದೃಷ್ಟಿಯಿಂದ ಇದಕ್ಕೆ ಅನುಮತಿ ನೀಡಬೇಕು. ಇಲ್ಲದಿದ್ದರೆ ರಾತ್ರಿ ವೇಳೆ ಬೇರೆ ಕಡೆಯಿಂದ ಬಂದ ಪ್ರಯಾಣಿಕರು ಆಹಾರಕ್ಕಾಗಿ ಗೋಕುಲ ರಸ್ತೆಯ ಹೊಸ ಬಸ್ ನಿಲ್ದಾಣ ಅಥವಾ ರೈಲು ನಿಲ್ದಾಣಕ್ಕೆ ಹೋಗಬೇಕಾಗುತ್ತದೆ’ ಎಂದರು.

‘ಚನ್ನಮ್ಮ ವೃತ್ತದಲ್ಲಿ ಬೀದಿ ಬದಿ ಆಹಾರ ಮಳಿಗೆಗಳಿಗೆ ರಾತ್ರಿ ವೇಳೆ ತೆರೆಯಲು ಪರವಾನಗಿ ನೀಡಿದರೆ ಉಪಜೀವನಕ್ಕಾಗಿ ಇದನ್ನು ಅವಲಂಬಿಸಿದವರಿಗೆ ಅನುಕೂಲವಾಗುತ್ತದೆ’ ಎಂದು ಹೇಳಿದರು.

ಜಿಲ್ಲಾ ರಾಜಕೀಯ ಚಟುವಟಿಕೆ ಉಸ್ತುವಾರಿ ರೇವಣಸಿದ್ದಪ್ಪ ಹುಬ್ಬಳ್ಳಿ, ಪ್ರತಿಭಾ ದಿವಾಕರ, ಶಾಮ ನರಗುಂದ,  ಮಲ್ಲಪ್ಪ ತಡಸದ,  ಎಸ್.ಪಿ. ಹುಬ್ಳಿಕರ, ಹುಸೇನ ಬಾಷಾ ತಳೇವಾಡ, ತಸ್ನಿಮಾ ತಳೇವಾಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT